ಹೊಳೆನರಸೀಪುರ:ಹರಿಯಾಣದಲ್ಲಿ ಡಿಸೆಂಬರ್ 7 ರಿಂದ 9 ರ ವರೆಗೆ ನಡೆದ 25 ನೇ ರಾಷ್ಟ್ರಮಟ್ಟದ ಸ್ಕ್ವಾಯ್ ಮಾರ್ಷಲ್ ಆರ್ಟ್ಸ್ ಸ್ಪರ್ಧೆಯಲ್ಲಿ ಇಲ್ಲಿನ ಸ್ಕ್ವಾಯ್ ಮಾರ್ಷಲ್ ಆರ್ಟ್ಸ್ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ 3 ಚಿನ್ನದ ಪದಕ, ಎರಡು ಬೆಳ್ಳಿ ಪದಕ, 3 ಕಂಚಿನ ಪದಕ ಪಡೆದುಕೊಂಡಿದ್ದಾರೆ.
ಆದರ್ಶ ಶಾಲೆಯ ಡಿ.ವಿ. ಸೋಹನ್ ಮೌರ್ಯ,ಗ್ರೀನ್ವುಡ್ ಶಾಲೆಯ ಎಚ್.ವೈ.ಮೋಹನ್ ಕುಮಾರ್,ವೆಂಕಟೇಶ್ವರ ಶಾಲೆಯ ಎಚ್.ಆರ್. ಪ್ರೀತಂ ಕವಾಂಕಿಯಲ್ಲಿ ಚಿನ್ನದ ಪದಕಗಳನ್ನು,ಮೋಹನ್ ಕುಮಾರ್ , ವೆಂಕಟೇಶ್ವರ ಶಾಲೆಯ ಪ್ರೀತಂ, ಬೆಳ್ಳಿಪದಕಗಳನ್ನು, ಹಾಸನ ವಿದ್ಯಾಸೌದದ ದಿವಿತ್ ಗೌಡ, ವಾಸವಿ ವಿದ್ಯಾಸಂಸ್ಥೆಯ ನಿತಿನ್, ರೀತು ಕಂಚಿನ ಪದಕವನ್ನು ಗೆದ್ದಿದ್ದಾರೆ.
ವಿಜೇತ ಅಭ್ಯರ್ಥಿಗಳಿಗೆ ತರಬೇತುದಾರ ಅಬ್ದುಲ್ ಹೈ,ಹರ್ಷವರ್ಧನ್ ತರಬೇತಿ ನೀಡಿದ್ದರು.
—————ಸುಕುಮಾರ್