ಹೊಳೆನರಸೀಪುರ:ಸುಬ್ರಹ್ಮಣ್ಯ ಶ್ರಷ್ಠಿ-ನಾಗರಕಲ್ಲುಗಳಿಗೆ ತನಿ ಎರೆದು ಪೂಜಿಸಿ ಭಕ್ತಿ ಸಮರ್ಪಿಸಿದ ಮಹಿಳೆಯರು-ಪಟ್ಟಣದ ಎಲ್ಲಾ ದೇವಾಲಯ ಗಳಲ್ಲಿ ಜನ ದಟ್ಟಣೆ ಹೆಚ್ಚಾಗಿತ್ತು.

ಹೊಳೆನರಸೀಪುರ:ಸುಬ್ರಹ್ಮಣ್ಯ ಶ್ರಷ್ಠಿಯ ದಿನವಾದ ಶನಿವಾರ ಪಟ್ಟಣದಲ್ಲಿನ ನಾಗರಕಲ್ಲುಗಳಿಗೆ ಮಹಿಳೆಯರು ತನಿ ಎರೆದು ಪೂಜಿಸಿ ಭಕ್ತಿ ಸಮರ್ಪಿಸಿದರು.ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿರುವ ನಾಗರಕಟ್ಟೆಯ ನಾಗರ ಕಲ್ಲುಗಳಿಗೆ,ಅಯ್ಯಪ್ಪಸ್ವಾಮಿ ದೇವಾಲಯ ಸಮೀಪದ ನಾಗರಕಟ್ಟೆ,ಹೇಮಾವತಿ ನದಿ ದಡದ ನಾಗರಕಟ್ಟೆಗಳಲ್ಲೂ ಜನ ದಟ್ಟಣೆ ಹೆಚ್ಚಾಗಿತ್ತು.

ಬೆಳಿಗ್ಗೆಯಿಂದಲೇ ದೇವಾಲಯಗಳಿಗೆ ತೆರಳಿದ ಮಹಿಳೆಯರು ಸಾಲಿನಲ್ಲಿ ನಿಂತು ತನಿ ಎರೆದರು. ಕಟ್ಟೆಯ ಸುತ್ತ ಪ್ರದಕ್ಷಣೆ ಹಾಕಿದರು.ಗದ್ದೆಗಳಲ್ಲಿ ಬದುಗಳಲ್ಲಿ ಇರುವ ಹುತ್ತಕ್ಕೇ ತನಿ ಎರೆದು ಅಲ್ಲೇ ಪ್ರಸಾದ ಸ್ವೀಕರಿಸಿ ಬಂದರು. ಕೆಲವರು ರಾಮನಾಥಪುರ ಸುಬ್ರಹ್ಮಣ್ಯ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಬೆಳಿಗ್ಗೆಯಿಂದಲೇ ಪಟ್ಟಣದ ಎಲ್ಲಾ ದೇವಾಲಯಗಳಲ್ಲಿ ಜನ ದಟ್ಟಣೆ ಹೆಚ್ಚಾಗಿತ್ತು. ಯುವತಿಯರು ಅಕ್ಕಪಕ್ಕದ ಮನೆಗಳಿಗೆ ತರಕಾರಿ ಹಂಚುವುದರಲ್ಲಿ ಉತ್ಸುಕರಾಗಿದ್ದರು. ತರಕಾರಿ ಮಾರುಕಟ್ಟೆಯಲ್ಲಿ ಜನದಟ್ಟಣೆ ಹೆಚ್ಚಾಗಿತ್ತು. ತರಕಾರಿ ಅಂಗಡಿಯವರು ಬೂದುಕುಂಬಳ, ಸಿಹಿಕುಂಬಳ, ಪರಂಗಿಕಾಯಿ, ಹಲಸಿನಕಾಯಿ, ಸೋರೆಕಾಯಿ, ಪಡವಲಕಾಯಿ ಗಳನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ ಮಾರಾಟ ಮಾಡುತ್ತಿದ್ದು ಗ್ರಾಹಕರಿಗೆ ಅನುಕೂಲವಾಯಿತು. ಸೇವಂತಿಗೆ ಹೂವು ಮಾರಿಗೆ 40 ರಿಂದ 50 ಕ್ಕೆ ಮಾರಾಟ ಆಗುತ್ತಿತ್ತು.

——————-—ಸುಕುಮಾರ್

Leave a Reply

Your email address will not be published. Required fields are marked *

× How can I help you?