ಹೊಳೆನರಸೀಪುರ:ರಾಜ್ಯದಲ್ಲಿ ನಾವು ಅಸಂಖ್ಯಾತ ಟೈಲರ್ಗಳಿದ್ದೇವೆ.ಆದರೂ ಸರ್ಕಾರದ ಯಾವುದೇ ಯೋಜನೆಗಳನ್ನು ನಾವು ಪಡೆದುಕೊಳ್ಳಲು ಸಾಧ್ಯವಾಗಿಲ್ಲ.ಆದರೆ ನಮ್ಮ ನಿರಂತರ ಹೋರಾಟದಿಂದ ಸರ್ಕಾರ ನಮ್ಮನ್ನು ಅಸಂಘಟಿತ ಕಾರ್ಮಿಕರು ಎಂದು ಗುರುತಿಸಿ ಸಮಾನ್ಯ ವಿಮೆಗೆ ಅನುಕೂಲವಾಗುವಂತೆ ಕಾರ್ಮಿಕ ಇಲಾಖೆಯ ಕಾರ್ಡ್ಗಳನ್ನು ಕೊಡಿ ಸಿದೆ ಎಂದು ತಾಲ್ಲೂಕು ಟೈಲರ್ ಅಸೋಸಿಯೇಷನ್ ಅಧ್ಯಕ್ಷ ರೇವಣ್ಣ ತಿಳಿಸಿದರು .
ಭಾನುವಾರ ಕೊನೇರಿ ರಾಮಶೆಟ್ಟರ ಛತ್ರದಲ್ಲಿ ಆಯೋಜಿಸಿದ್ದ ಮಹಾ ಸಭೆಯಲ್ಲಿ ಮಾತನಾಡಿ,ನಾವು ಸ್ಥಳೀಯವಾ ಗಿ ನಮ್ಮ ತಾಲ್ಲೂಕಿನ 100ಕ್ಕೂ ಹೆಚ್ಚು ಟೈಲರ್ಗಳಿಗೆ ಕರ್ನಾಟಕ ಬ್ಯಾಂಕಿನಿಂದ ಸಾಲ ಕೊಡಿಸಿದ್ದೆವೆ. ಸಾಲ ಪಡೆದವರೆಲ್ಲಾ ಸಕಾಲಕ್ಕೆ ತೀರಿಸಿದ್ದಾರೆ ಎಂದರು .
ಸದಾ ವೃತ್ತಿಯಲ್ಲಿ ತೊಡಗಿಸಿಕೊಂಡ ನಮ್ಮ ಸಂಘದ ಸದಸ್ಯರೆಲ್ಲರ ಒಗ್ಗೂಡುವಿಕೆಗೆ ಆಗಾಗ ಪ್ರವಾಸ ಏರ್ಪಡಿಸುತ್ತಿದ್ದೇವೆ ಎಂದರು.
ಜಿಲ್ಲಾಧ್ಯಕ್ಷ ವೆಂಕಟೇಶ್ ಮಾತನಾಡಿ ನಮ್ಮ ಸಂಘದ ಕೆಲವು ಸದಸ್ಯರು ಬ್ಯಾಂಕ್ ನೀಡುವ ಟೈಲರ್ ತರಬೇತಿ ಪಡೆದು ಪ್ರಮಾಣ ಪತ್ರ ಪಡೆದಿದ್ದರೂ ವೃತ್ತಿ ಮುಂದುವರೆಸಲು ಸಾಲ ನೀಡಿರಲಿಲ್ಲ. ಆಗ ಜಿಲ್ಲಾ ಸಂಘ ಬ್ಯಾಂಕಿನ ಅಧಿಕಾರಿಗಳ ಜೊತೆಯಲ್ಲಿ ಮಾತನಾಡಿ ತರಬೇತಿ ಪಡೆದವರಿಗೆ ಸಾಲಕೊಡಿಸಿತು ಎಂದರು .
ಅರಕಲಗೂಡು ಸಂಘದ ಅಧ್ಯಕ್ಷರಾದ ಕೃಷ್ಣಪ್ಪ, ಹಾಸನ ಕ್ಷೇತ್ರ ಸಂಘದ ನಾಗೇಂದ್ರ ,ಬೇಲೂರಿನ ಆರಿಫ್, ಅರೇಹಳ್ಳಿ ಸಂ ತೋಷ್, ತಾಲ್ಲೂ ಕು ಸಂಘದ ಕಾರ್ಯದರ್ಶಿ ರವಿಕುಮಾರ್ ಮಾತನಾಡಿದರು .
ಇದೇ ಸಂದರ್ಭದಲ್ಲಿ ಸಂಘದ ಬೆಳವಣಿಗೆಗೆ ಸಹಕಾರ ನೀಡಿದ ಸದಸ್ಯರನ್ನು ಸನ್ಮಾನಿಸಿದರು .
ವೃತ್ತಿಯಲ್ಲಿದ್ದು ನಿಧನರಾದ 6 ಜನರ ಕುಟುಂಬಕ್ಕೆ ಹಣ ಸಹಾಯ ಒದಗಿಸಿದರು .ತಾಲ್ಲೂಕು ಸಂಘದ ಉಪಾಧ್ಯಕ್ಷ ಸುರೇ ಶ್ ಕಾರ್ಯಕ್ರಮ ನಿರೂಪಿಸಿದರು .ನಾರಾಯಣ ಕಾರ್ಯಕ್ರಮಕ್ಕೆ ಶುಭಕೋರಿದರು .ಶಾಕೀರ,ರಾಜೇಶ್ವರಿ,ಕಮಲಮ್ಮ , ಜ್ಯೋತಿ ಇತರರು ಭಾಗವಹಿಸಿದ್ದರು.
———–ಸುಕುಮಾರ್