ಹೊಳೆನರಸೀಪುರ:ಟೆಲಿಕಾಂ ಭದ್ರತೆ ಮತ್ತು ಸೈಬರ್ ಸೆಕ್ಯೂರಿಟಿ ಕ್ಷೇತ್ರದಲ್ಲಿನ ಅಪಾರ ಜ್ಞಾನದಿಂದ ಸೌದಿ ಅರೇಬಿಯಾ ಸರಕಾರದ ಗಮನ ಸೆಳೆದಿರುವ ತಾಲ್ಲೂಕಿನ ಕಾಮಸಮುದ್ರ ಗ್ರಾಮದ ವಿಜಯ್ ಕುಮಾರ್ ಗೌಡ ಅಲ್ಲಿನ ಸರಕಾರದ ಆಹ್ವಾನದ ಮೇಲೆ ರಿಯಾದ್ನಲ್ಲಿ ನೆಡೆದ ಬ್ಲಾಕ್ ಹ್ಯಾಕ್ ಮಿಡಲ್ ಈಸ್ಟ್ ಆಫ್ರಿಕಾ ಸಮಾವೇಶದಲ್ಲಿ ಭಾಗವಹಿಸಿದ್ದಾರೆ.
ತಾಲ್ಲೂಕಿನ ಕಾಮಸಮುದ್ರ ಗ್ರಾಮದ ಕೃಷ್ಣಕುಮಾರ್ ಹಾಗೂ ಶಿಕ್ಷಕಿ ಬಿಂದು ಅವರ ಪುತ್ರ ವಿಜಯ್ ಕುಮಾರ್ ಗೌಡ ಗೌಡ ಬೆಂಗಳೂರಿನ ಆರ್.ವಿ.ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮೇನೇಜ್ಮೆಂಟ್ 7 ನೇ ಸೆಮಿಷ್ಟರ್ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.ಟೆಲಿಕಾಂ ಭದ್ರತೆ ಹಾಗೂ ಸೈಬರ್ ಸೆಕ್ಯೂರಿಟಿ ಬಗ್ಗೆ ವಿವರಿಸಲು ತೆರಳಿರುವ ಭಾರತದ ಏಕೈಕ ಪ್ರತಿನಿಧಿ.100 ಕ್ಕೂ ಹೆಚ್ಚು ದೇಶಗಳ 40 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದ ಸಮಾವೇಶದಲ್ಲಿ “ರೆಸ್ಲಾಯಿಟ್ ಅಂಡರ್ಸ್ಟ್ಯಾಂಡಿಗ್ ಟೆಲಿಕಾಂ ನೆಟ್ವರ್ಕ್ಸ್ ಅಂಡ್ ಅನಲೈಜಿಂಗ್ ದ ಸೆಕ್ಯೂರಿಟ್ ಆಫ್ ಕೋರ್ ನೆಟ್ವರ್ಕ್ಸ್ ಇನ್ ಎ ಟೆಲಿಕಾಂ ಡೆಪ್ಲಾಯ್ಮೆಂಟ್” ಕುರಿತು ವಿಷಯ ಮಂಡಿಸಿದ್ದಾರೆ.
ಇದಲ್ಲದೆ ಕೃತಕಬುದ್ಧಿಮತ್ತೆ (ಓರ್ಟಿಫಿಷಿಯಲ್ ಇಂಟೆಲಿಜೆನ್ಸ್) ಬಗ್ಗೆ ಹಲಾವಾರು ಪ್ರೋಗ್ರಾಂಗಳನ್ನು ಮಾಡಿ ಗಮನ ಸೆಳೆದಿದ್ದಾರೆ.ತಮ್ಮ ವೆಬ್ ಸೈಟ್ ನಲ್ಲಿ ಮಂಡಿಸುತ್ತಿದ್ದ ವಿಷಯಗಳನ್ನು ಗಮನಿಸುತ್ತಿದ್ದ ಸೌದಿ ಅರೆಬಿಯಾ ಸರ್ಕಾರ ವಿಜಯ ಕುಮಾರ್ ಗೌಡ ಅವರನ್ನು ಆಹ್ವಾನಿಸಿ ಉಚಿತ ವಿಸಾ ಕಳುಹಿಸಿ ವಿಷಯ ಮಂಡನೆಗೆ ಅವಕಾಶ ನೀಡಿದ್ದಾರೆ.
ವಿಷಯ ಮಂಡಿಸಿದ ವಿಜಯ್ ಕುಮಾರ್ ಗೌಡ ಅವರಿಗೆ ಪ್ರಶಂಶಾಪತ್ರ ನೀಡಿ ಗೌರವಿಸಿದೆ.ಹಳ್ಳಿ ಹುಡುಗನ ಈ ಸಾಧನೆ ಹೊಳೆನರಸೀಪುರ ತಾಲ್ಲೂಕಿನ ಗೌರವವನ್ನು ಹೆಚ್ಚಿಸಿದೆ.
————–ಸುಕುಮಾರ್