ಹೊಳೆನರಸೀಪುರ:ತಾಲ್ಲೂಕು ಕೃಷಿಕ ಸಮಾಜದ ಚುನಾವಣೆ ಪ್ರಕಟವಾಗಿದೆ.ತಾಲ್ಲೂಕಿನ ಕೃಷಿ ಸಮಾಜದಲ್ಲಿ 404 ಅರ್ಹ ಸದಸ್ಯರಿದ್ದು 15 ನಿರ್ದೇಶಕರ ಸ್ಥಾನಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಚುನಾವಣಾಧಿಕಾರಿಯೂ ಆಗಿರುವ ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಕೆ.ಎಚ್. ಸಪ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನವಂಬರ್ 30 ರಿಂದ ನಾಮಪತ್ರ ವಿತರಿಸಲಾಗುತ್ತಿತ್ತು ಸ್ಪರ್ದಿಸಲಿಚ್ಛಿಸುವವರು 250 ರೂ ಠೇವಣಿ ಮೊತ್ತ ಪಾವತಿಸಿ ನಾಮಪತ್ರ ಪಡೆದು ಡಿಸೆಂಬರ್ 6ರ ಸಂಜೆ 5 ಗಂಟೆಗೆ ಮುನ್ನ ಸಲ್ಲಿಸಬೇಕು.
ಡಿಸೆಂಬರ್ 9ರ ಸಂಜೆ 5 ಗಂಟೆಗೆ ಮುನ್ನ ನಾಮಪತ್ರ ಹಿಂಪಡೆಯಲು ಅವಕಾಶ ಇರುತ್ತದೆ. 15 ಕ್ಕಿಂತ ಹೆಚ್ಚು ಅರ್ಜಿಗಳು ಬಂದಲ್ಲಿ ಡಿಸೆಂಬರ್ 15 ರಂದು ಭಾನುವಾರ ಬೆಳಿಗ್ಗೆ 8 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಚುನಾವಣೆ ನೆಡೆಯಲಿದೆ ಎಂದು ಸಪ್ನ ವಿವರಿಸಿದ್ದು ಹೆಚ್ಚಿನ ವಿವಿರಗಳಿಗೆ ಕೃಷಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ