ಕೊರಟಗೆರೆ:– ವಿದ್ಯುತ್ ಸರ್ಕ್ ಸರ್ಕ್ಯೂಟ್ ನಿಂದ ಬಡ ರೈತನೊಬ್ಬನ ಮನೆ ಸುಟ್ಟು ಕರ್ಕಲಾಗಿ ಮನೆಯಲ್ಲಿದ್ದ ಬಟ್ಟೆ -ಬರೆ, ದಿನಸಿ ಸಮಾನು ದಿನಬಳಕೆ ವಸ್ತುಗಳು ಸೇರಿದಂತೆ 2.5 ಲಕ್ಷ ನಗದು ಬೆಂಕಿಯ ಕೆನ್ನಾಲಗಿಗೆ ಸುಟ್ಟು ಬಸ್ಮವಾಗಿದೆ.
ಕೊರಟಗೆರೆ ತಾಲೂಕು ಕಸಬಾ ಹೋಬಳಿಯ ಹಂಚಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿನ್ನೆಪಾಳ್ಯ ಗ್ರಾಮದ ತಿಮ್ಮಪ್ಪ ಎನ್ನುವ ರೈತನ ಮನೆಯಲ್ಲಿ ವರ್ಷಾನುಗಟ್ಟಲೆ ಕಷ್ಟಪಟ್ಟು ಬೆಳೆದಿದ್ದ ರಾಗಿ ಜೋಳ ಕಡಲೆಕಾಯಿ ತೊಗರಿಬೇಳೆ ಸೇರಿದಂತೆ ಹಸುಗಳನ್ನು ಮಾರಿ ಮನೆಯಲ್ಲಿಟ್ಟಿದ್ದ 2.50.000 ಲಕ್ಷ ಹಣ ಹಾಗೂ ಒಡವೆ ವಸ್ತುಗಳೆಲ್ಲವೂ ತಡರಾತ್ರಿ ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಸುಟ್ಟು ಭಸ್ಮವಾಗಿರುವ ಘಟನೆ ಜರುಗಿದೆ.
ಬೇಸಿಗೆ ಪ್ರಾರಂಭಕ್ಕೆ ಮುನ್ನವೇ ಉರಿಬಿಸಿಲು ಹೆಚ್ಚಾಗಿ ಬೆಂಕಿ ಅವಗಡಗಳು ಅಲ್ಲಲ್ಲಿ ಜರುಗುತ್ತಿದ್ದು, ಬಡ ರೈತಾಪಿ ವರ್ಗ ಕೂಡಿಟ್ಟಿದ್ದ ದಿನಸಿ ಸೇರಿದಂತೆ ದಿನಬಳಕೆ ವಸ್ತುಗಳು ಬಟ್ಟೆ ಬರೆ ಎಲ್ಲವೂ ಬೆಂಕಿಗೆ ಆಹುತಿಯಾಗಿದ್ದು, ಬಡ ರೈತ ತಿಮ್ಮಪ್ಪನ ಹೆಂಡತಿ ಮಕ್ಕಳು ಎಲ್ಲವನ್ನು ಕಳೆದುಕೊಂಡು ಕಣ್ಣೀರು ಸುರಿಸುತ್ತಿದ್ದು, ಬೆಸ್ಕಾಂ ಸೇರಿದಂತೆ ಸಂಬಂಧಪಟ್ಟಂತ ಇಲಾಖೆಗಳು ಕಡುಬಡತನದಲ್ಲಿರುವ ಕುಟುಂಬಕ್ಕೆ ಸಹಾಯ ಹಸ್ತ ನೀಡಿ ಪರಿಹಾರ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
– ಶ್ರೀನಿವಾಸ್ ಕೊರಟಗೆರೆ