ಅರಕಲಗೂಡು-ಜಾತ್ಯಾತೀತ ಜನತಾದಳ-ಪಕ್ಷದ ಸಭೆಯಂತೆ-ಭಾಸವಾದ -ಮಡಿವಾಳ ಮಾಚಿದೇವರ-ಜಯಂತ್ಯೋತ್ಸವ- ಸಮಾರಂಭ


ಅರಕಲಗೂಡು : ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲೂಕು ಮಡಿವಾಳ ಸಂಘದ ವತಿಯಿಂದ ಶನಿವಾರ ಶಿಕ್ಷಕರ ಭವನದಲ್ಲಿ ಅರ್ಥಪೂರ್ಣ ಮಡಿವಾಳ ಮಾಚಿದೇವರ ಜಯಂತ್ಯೋತ್ಸವ ಸಮಾರಂಭ ಅನೇಕ ಗಣ್ಯರ ಸಮ್ಮುಖದಲ್ಲಿ ವಿಜೃಂಭನೆಯಿಂದ ಜರುಗಿತು.


ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ವಿವಿಧ ಕಲಾ ತಂಡಗಳೊಂದಿಗೆ ಮಾಚಿದೇವರ ಉತ್ಸವ ಮೂರ್ತಿಯನ್ನು ಬೆಳ್ಳಿಸಾರೋಟಿನಲ್ಲಿರಿಸಿ, ಭವ್ಯ ಮೆರವಣಿಗೆ ಮಾಡಲಾಯಿತು. ನಂತರ ತಾಲೂಕು ಶಿಕ್ಷಕರ ಭವನದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ಅಧಿಕಾರಿ ಪುಣ್ಯಾವತಿ, ಮಾತನಾಡಿ, ನಿಗಮದಿಂದ ದೊರೆಯುವ ಸವಲತ್ತುಗಳ ಬಗ್ಗೆ ಮತ್ತು ಕಾರ್ಮಿಕ ಇಲಾಖೆ ಅಧಿಕಾರಿ ರಘು ಇಲಾಖೆಯಿಂದ ದೊರೆಯುವ ಸೌಕರ್ಯಗಳ ಕುರಿತು ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.

ತಾಲೂಕು ಶಿಕ್ಷಕರಭವನದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ, ಜಯಂತೋತ್ಸವದ ಆಹ್ವಾನ ಪತ್ರಿಕೆಯಲ್ಲಿ ಮುದ್ದಿಸಿರುವ ಗಣ್ಯರಲ್ಲಿ, ಪಟ್ಟಣ ಪಂಚಾಯಿತಿ ಅಧ್ಯಕ್ಷರನ್ನು ಹೊರತುಪಡಿಸಿ, ಮತ್ತಾವ ಗಣ್ಯರು ವೇದಿಕೆಯಲ್ಲಿ ಕಂಡು ಬರದೆ ಹಾಗೂ ಪ್ರೋಟೋಕಾಲ್ ಪ್ರಕಾರ ಕಾರ್ಯಕ್ರಮ ನಡೆಯದೆ, ಜಾತ್ಯಾತೀತ ಜನತಾದಳ ಪಕ್ಷದ ಕಾರ್ಯಕರ್ತರೆ ತುಂಬಿ ಪಕ್ಷದ ಸಭೆಯಂತೆ ಗೋಚರಿಸಿದ್ದು, ಆಡಳಿತದ ಆಹ್ವಾನ ಪತ್ರಿಕೆ ಕೇವಲ ನೆಪ ಮಾತ್ರಕ್ಕೆಂಬಂತಿತ್ತು. ಈ ಸಂಬಂಧ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಮಲ್ಲಿಕಾರ್ಜುನ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಪ್ರದೀಪ್‌ಕುಮಾರ್,ಮುಖ್ಯಾಧಿಕಾರಿ ಬಸವರಾಜ ಟಾಕಪ್ಪ ಶಿಗ್ಗಾವಿ, ಜಾತ್ಯತೀತ ಜನತಾದಳದ ಮುಖಂಡರುಗಳಾದ ತಾಪಂ ಅಧ್ಯಕ್ಷ ನರಸೇಗೌಡ,ಜೆಡಿಎಸ್ ಅಧ್ಯಕ್ಷ ಹೊನ್ನವಳ್ಳಿ ಸತೀಶ್,ದೊಡ್ಡಮಗ್ಗೆ ರಾಜೇಗೌಡ, ಮಡಿವಾಳ ಸಮಾಜದ ಅಧ್ಯಕ್ಷ ಕೇಶವಮೂರ್ತಿ,ಪಪಂ ಮಾಜಿ ಅಧ್ಯಕ್ಷ ಮಂಜುಶೆಟ್ಟಿಗೌಡ,ಜಿಲ್ಲಾ ವೀರಶೈವ ಮಹಾ ಸಭ ಪ್ರಧಾನ ಕಾರ್ಯದರ್ಶಿ ರವಿಕುಮಾರ್,ಮಡಿವಾಳ ಸಮಾಜದ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ,ಕಂದಾಯ ಅಧಿಕಾರಿಗಳಾದ ಸೋಮಶೇಖರ್,ಸ್ವಾಮಿ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?