ಹೊಳೆನರಸೀಪುರ-ಪತ್ನಿ-ವರ್ತನೆಯಿಂದ-ಬೇಸತ್ತು-ಜೀವ- ಕಳೆದುಕೊಂಡ-ಗಂಡ

ಹೊಳೆನರಸೀಪುರ: ಪ್ರಿಯಕರನ ಜೊತೆ ಪತ್ನಿ ಓಡಿ ಹೋಗಿದ್ದರಿಂದ ಮನನೊಂದ ವ್ಯಕ್ತಿಯೊಬ್ಬ ನದಿಗೆ ಹಾರಿ ಆತ್ಮಹ*ತ್ಯೆ ಮಾಡಿ ಕೊಂಡಿದ್ದಾನೆ.

ತಾಲೂಕಿನ ಮಾಕವಳ್ಳಿ ಗ್ರಾಮದ ಬಳಿ ಈ ಘಟನೆ ನಡೆದಿದ್ದು, ರವಿ (38) ಎಂಬಾತ, ಪತ್ನಿ ವರ್ತನೆಯಿಂದ ಬೇಸತ್ತು ಜೀವ ಕಳೆದುಕೊಂಡಿದಾನೆ.

ಘಟನೆ ಹಿನ್ನೆಲೆ: ಅರಕಲಗೂಡು ತಾಲ್ಲೂಕಿನ, ಹೊನ್ನವಳ್ಳಿ ಗ್ರಾಮದ ರವಿ ಮತ್ತು ಹೊಳೆನರಸೀಪುರ ತಾಲೂಕು ಅರುವನಹಳ್ಳಿ ಗ್ರಾಮದ ಲಾವಣ್ಯ ಎಂಬುವರು 11 ವರ್ಷ ಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ರವಿ ಜೆಸಿಬಿ ಆಪರೇಟರ್ ಆಗಿ ಕೆಲಸ ಮಾಡು ತಿದ್ದ. ಲಾವಣ್ಯ ಮನೆಯಲ್ಲೇ ಇದ್ದಳು. ಆದರೆ ಮದುವೆಯಾಗಿ 10 ವರ್ಷ ಕಳೆದರೂ ದಂಪತಿಗೆ ಮಕ್ಕಳಾಗಿರಲಿಲ್ಲ.

ಅಕ್ರಮ ಸಂಬಂಧ:

ಆದರೆ ವರ್ಷದ ಹಿಂದೆ ಲಾವಣ್ಯ ಮಗುವೊಂದಕ್ಕೆ ಜನ್ಮ ನೀಡಿದ್ದಳು. ಇದಕ್ಕೆ ಬೇರೊಬ್ಬನೊಂದಿಗಿನ ಸಂಬಂಧ ಕಾರಣ ಈಗ ಬಯಲಾಗಿದೆ.ಹೊನ್ನವಳ್ಳಿ ಗ್ರಾಮದವನೇ ಆದ ಪ್ರದೀಪ್ ಎಂಬಾತ ಮೃತ ರವಿಯ ಹತ್ತಿರದ ಸಂಬಂಧಿಯೂ ಆಗಿದ್ದ. ಈತ ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಈ ನಡುವೆ ಲಾವಣ್ಯ -ಪ್ರದೀಪ್ ನಡುವೆ ಅಕ್ರಮ ಸಂಬಂಧ ಬೆಳೆದಿತ್ತು ಎನ್ನಲಾಗಿದೆ.

ಜಗಳ ಮಾಡಿದ್ದ ರವಿ:

ಈ ವಿಷಯ ತಿಳಿದ ರವಿ ಪತ್ನಿಯೊಂದಿಗೆ ಜಗಳ ಮಾಡಿದ್ದ. ಆಗ ಈ ಮಗು ನಿನಗೆ ಜನಿಸಿಲ್ಲ ಎಂದು ಲಾವಣ್ಯ ನೇರವಾಗಿಯೇ ಹೇಳಿದ್ದಳಂತೆ. ಈ ಸಂಬಂಧ ನೆಂಟರಿಸ್ಟರು ಪಂಚಾಯ್ತಿ ಸಹ ಮಾಡಿ ಇಬ್ಬರಿಗೂ ಬುದ್ದಿವಾದ ಹೇಳಿದ್ದರೂ, ಪ್ರಯೋಜನ ಆಗಿರಲಿಲ್ಲ. ತವರು ಮನೆಗೆ ಕಳಿಸಿದರೆ ಪತ್ನಿ ಬದಲಾಗಬಹುದು ಎಂದು 1 ತಿಂಗಳ ಹಿಂದೆ ಪತ್ನಿಯನ್ನು ರವಿ ಅರುವನಹಳ್ಳಿಗೆ ಬಿಟ್ಟು ಬಂದಿದ್ದ. ಆದರೂ ಲಾವಣ್ಯ ಪ್ರದೀಪನ ಸಖ್ಯ ಬಿಟ್ಟಿರಲಿಲ್ಲ.

ಆತ್ಮಹತ್ಯೆ:-ಪಂಚಾಯ್ತಿ ಮಾಡಿದರೂ, ಪೊಲೀಸರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನ ವಾಗಿರಲಿಲ್ಲ ಎಂದು ರವಿ ತೀವ್ರ ನೊಂದುಕೊಂಡಿದ್ದ. ಈ ಎಲ್ಲ ಬೆಳವಣಿಗೆಗಳಿಂದ ಯಾರಿಗೂ ಮುಖ ತೋರಿಸದೆ ತಿಂಗಳಿಂದಲೂ ಮನೆಯಲ್ಲೇ ಇದ್ದ ರವಿ, ಕಳೆದ ಗುರುವಾರ ಮೈಸೂರಿಗೆ ಜೆಸಿಬಿ ಆಪರೇಟರ್ ಕೆಲಸ ಮಾಡಲು ಹೋಗುತ್ತೇನೆ ಎಂದು ಬಟ್ಟೆಬರೆ ತೆಗೆದುಕೊಂಡು ಬೈಕ್‌ನಲ್ಲಿ ತೆರಳಿದ್ದ.ಆದರೆ ಮಾರ್ಗಮಧ್ಯೆ ಮಾಕವಳ್ಳಿ ಬಳಿ ಹೇಮಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ರವಿ ಬೈಕ್ನೋ ಡಿದವರು ಮನೆಯವರಿಗೆ ಸುದ್ದಿ ತಿಳಿಸಿದ್ದಾರೆ. ನಂತರ ಹೊಳೆನರಸೀಪುರ ಗ್ರಾಮಾಂತರ ಠಾಣೆ ಪೊಲೀಸರು, ಅಗ್ನಿಶಾಮಕ ಠಾಣೆ ಸಿಬ್ಬಂದಿ ಆಗಮಿಸಿ ಶವಕ್ಕಾಗಿ ಹುಡುಕಾಟ ನಡೆಸಿದರು.

ಇಂದು ಮೃತದೇಹ ಪತ್ತೆಯಾಗಿದೆ. ರವಿಗೆ ಯಾರಿಂದಲೂ ಸಹಕಾರ, ಸ್ಪಂದನೆ ಸಿಗಲಿಲ್ಲ ಎಂದು ದೂರಿರುವ ಮೃತನ ಕಡೆಯವರು, ಲಾವಣ್ಯ ಹಾಗೂ ಆಕೆಯ ಪ್ರಿಯಕರ ಸೇರಿ ರವಿಯನ್ನು ಕೊಲೆ ಮಾಡಿ ನಂತರ ನದಿಗೆ ಬಿಸಾಡಿದ್ದಾರೆ ಎಂದು ಮೃತನ ಕಡೆಯವರು ಗಂಭೀರ ಆರೋಪ ಮಾಡಿದ್ದಾರೆ.

Leave a Reply

Your email address will not be published. Required fields are marked *

× How can I help you?