ಚಿಕ್ಕಮಗಳೂರು-ಸಾಹಿತ್ಯ-ನೆಲೆಯೂರಿಸಿದರೆ-ಜಾತೀಯತೆ-ವಿಷಬೀಜ-ಕರಗಲಿದೆ-ಕುಮಾರಸ್ವಾಮಿ

ಚಿಕ್ಕಮಗಳೂರು:- ಸಾಹಿತ್ಯಾತ್ಮಕ ಚಟುವಟಿಕೆಗಳು ಜನಸಾಮಾನ್ಯರಲ್ಲಿ ಮನಸ್ಸಿನಲ್ಲಿ ಅಚ್ಚ ಳಿಯದೇ ನೆಲೆಯೂರಿಸಿದರೆ, ಪರಸ್ಪರ ಪ್ರೀತಿ ಹೆಚ್ಚಾಗಿ ಜಾತೀಯತೆ ಮತ್ತು ಕೋಮುವಾದದ ವಿಷಬೀಜ ಕರ ಗಲಿದೆ ಎಂದು ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು.

ನಗರದ ಬಸವನಹಳ್ಳಿ ಬಾಲಿಕಾ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ಧ ಕನ್ನಡ ಸಾಹಿತ್ಯ ಪರಿಷತ್ತು ವಸ್ತಾರೆ ಹೋಬಳಿ ಸೇವಾಧೀಕ್ಷ ಸಮಾರಂಭದಲ್ಲಿ ಶನಿವಾರ ಸಂಜೆ ಪಾಲ್ಗೊಂಡು ಅವರು ಮಾತನಾಡಿದರು.

ಬಡವರು, ಕೂಲಿಕಾರ್ಮಿಕರಲ್ಲಿ ಕನ್ನಡ ಭಾಷಾಭಿಮಾನ ಹೆಚ್ಚಿದೆ. ಆದರೆ ಶ್ರೀಮಂತ ಕುಟುಂಬದಲ್ಲಿ ಆಂಗ್ಲಭಾಷೆ ವ್ಯಾಮೋಹದಿಂದ ಕನ್ನಡ ನಶಿಸುತ್ತಿದೆ. ಹೀಗಾಗಿ ಕನ್ನಡಾಭಿಮಾನಿಗಳು ಮೊದಲು ಉಳ್ಳವರ ಕುಟುಂಬಕ್ಕೆ ಭಾಷಾಭಿಮಾನ ಮೂಡಿಸುವ ಮೂಲಕ ನಾಡಿನ ಭಾಷಾಸಂಸ್ಕೃತಿ ಎತ್ತಿಹಿಡಿಯಬೇಕು ಎಂದು ಸಲಹೆ ಮಾಡಿದರು.

ಮಾತೃಭಾಷೆ ಬಗ್ಗೆ ಅಪಾರ ಅಭಿಮಾನವಿರಬೇಕು. ದೂರಾಭಿಮಾನ ಇರಕೂಡದು. ನೂರಾರು ಭಾಷೆ ಕಲಿಯುವುದರಲ್ಲಿ ತಪ್ಪಿಲ್ಲ. ಬೇರೆ ಭಾಷೆಗಳ ಅಬ್ಬರದಲ್ಲಿ ತಾಯ್ನುಡಿ ಕ್ಷೀಣಿಸದಿರಲಿ. ದೇಶ-ವಿದೇಶಗಳಲ್ಲಿ ಪ್ರವಾಸಕ್ಕೆ ತೆರಳಿದಲ್ಲಿ ಅಲ್ಲಿ ಕನ್ನಡಿಗರು ಸಿಕ್ಕರೆ ಅಪ್ಪ-ಅಮ್ಮ ಸಿಕ್ಕಂತೆ ಎಂದ ಅವರು ಹೆಚ್ಚಿನ ಪ್ರಾಮುಖ್ಯತೆ ಕನ್ನಡಗಿರಬೇಕು ಎಂದರು.

ವೇದಿಕೆ ಅಥವಾ ಸಮಾರಂಭಕ್ಕೆ ಕಾರ್ಯಕ್ರಮ ಸೀಮಿತರಾಗದೇ, ಹೋಬಳಿ ಅಧ್ಯಕ್ಷರು ಪ್ರತಿ ಗ್ರಾಮ ಗಳಲ್ಲಿ ತೆರಳಿ ಜಾನಪದ, ಸಾಹಿತ್ಯ, ಸಂಗೀತ, ಗಮಕದಂಥ ಶಿಬಿರ ಹಮ್ಮಿಕೊಂಡು ಸ್ಥಳೀಯ ಕಲಾವಿದರು, ಬರಹಗಾರರು, ಲೇಖಕರಿಗೆ ಪ್ರೋತ್ಸಾಹಿಸಿ ಮುಂಚೂಣಿಗೆ ಕರೆತರಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಪಂಪ, ರನ್ನ, ಕನಕ ದಾಸರು, ಪುರಂದರದಾರು, ಕುವೆಂಪು, ಪೂರ್ಣಚಂದ್ರ ತೇಜಸ್ವಿ ಮಹಾನೀಯರ ಸಂಪೂರ್ಣ ಬದುಕು ಕನ್ನಡಕ್ಕೆ ಮುಡಿಪಾಗಿತ್ತು. ಆ ಕನ್ನಡ ಪರಂಪರೆ ಉಳಿಸಿ, ಬೆಳೆಸುವ ಜವಾಬ್ದಾರಿ ಹೊತ್ತಿರುವ ಹೋಬಳಿ ಅಧ್ಯ ಕ್ಷರು ಜಾಗೃತರಾಗಿ ಮುನ್ನೆಡೆಸಬೇಕು ಎಂದರು.

ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ ಎಂಟು ಜ್ಞಾನಪೀಠ ಪ್ರಶಸ್ತಿಗೆ ಕನ್ನಡನಾಡು ಭಾಜನವಾಗಿ ದೆ. ಹೀಗಾಗಿ ನಾಡಿನಲ್ಲಿ ವಾಸಿಸುವ ಅನ್ಯಭಾಷಿಗರಿಗೆ ಮೊದಲು ಕನ್ನಡ ಭಾಷೆ ಹಿರಿಮೆ, ಗರಿಮೆ ಕಲಿಸುವಂಥ ಕೆಲಸವನ್ನು ಕಸಾಪ ಮಾಡಬೇಕು. ಜೊತೆಗೆ ನಾಡು, ನುಡಿಗೆ ಧಕ್ಕೆಯಾದರೆ ಧೈರ್ಯವಾಗಿ ಎದುರಿಸುವ ಶಕ್ತಿ ಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ವಸ್ತಾರೆ ಹೋಬಳಿ ನೂತನ ಅಧ್ಯಕ್ಷ ಡಾ.ಸತೀಶ್ ಜಕ್ಕನಹಳ್ಳಿ ಮಾತನಾಡಿ ಹಿರಿಯರ ಮಾರ್ಗದರ್ಶನ ದಲ್ಲಿ ಹೋಬಳಿ ಮಟ್ಟದಲ್ಲಿ ಕಸಾಪ ಕಾರ್ಯಕ್ರಮ ಹಮ್ಮಿಕೊಂಡು ಕನ್ನಡತಾಯಿಯ ಸೇವೆಯಲ್ಲಿ ತೊಡಗಲಾ ಗುವುದು. ಜೊತೆಗೆ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಿ ಪ್ರೋತ್ಸಾಹಿಸುತ್ತೇನೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ತಾಲ್ಲೂಕು ಅಧ್ಯಕ್ಷ ಮಾವಿನಕೆರೆ ದಯಾನಂದ್ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್ ಸೇವಾಧೀಕ್ಷೆ ಬೋಧಿಸಿದರು.

????????????????????????????????????


ವಸ್ತಾರೆ ಹೋಬಳಿ ನೂತನ ಘಟಕ :- ಡಾ.ಸತೀಶ್ ಜಕ್ಕನಹಳ್ಳಿ (ಅಧ್ಯಕ್ಷರು), ಎ.ಬಿ.ರುದ್ರೇಗೌಡ (ಗೌ. ಅಧ್ಯಕ್ಷ), ವಿ.ಎನ್.ಸಂದೀಪ್, ಮಮತ ಯೋಗೀಶ್ (ಗೌ.ಕಾರ್ಯದರ್ಶಿ), ಟಿ.ಜಿ.ಸುದೀಪ್ (ಕೋಶಾಧ್ಯಕ್ಷ), ತಮ್ಮಣ್ಣಗೌಡ, ವಿ.ಆರ್.ಪ್ರವೀಣ್‌ಕುಮಾರ್, ಕಾರ್ತೀಕ್ (ಸಹ ಕಾರ್ಯದರ್ಶಿ), ಚಂದ್ರಶೇಖರ್, ಬಸವರಾ ಜು, ಸಂದೇಶ್, ಮೋಹನ್ (ಸಂಘಟನಾ ಕಾರ್ಯದರ್ಶಿ) ಮತ್ತಿತರರು ಆಯ್ಕೆಯಾದರು.
ಈ ಸಂದರ್ಭದಲ್ಲಿ ಕಸಾಪ ನಿಕಟಪೂರ್ವ ಗೌರವ ಕಾರ್ಯದರ್ಶಿ ಡಿ.ಎಂ.ಮಂಜುನಾಥಸ್ವಾಮಿ, ತಾ ಲ್ಲೂಕು ಕಸಾಪ ಗೌರವ ಕಾರ್ಯದರ್ಶಿ ಟಿ.ಸಂದೀಪ್, ನಗರಾಧ್ಯಕ್ಷ ಸಚಿನ್, ಅಂಬಳೆ ಹೋಬಳಿ ಕಸಾಪ ಅಧ್ಯಕ್ಷ ಮಾಸ್ತೇಗೌಡ ಮತ್ತಿತರರು ಉಪಸ್ಥಿತರಿದ್ದರು.

– ಸುರೇಶ್‌ ಎನ್.

Leave a Reply

Your email address will not be published. Required fields are marked *

× How can I help you?