ತುಮಕೂರು-ಜನರಿಗೆ-ತೊಂದರೆ-ಕೊಟ್ಟರೆ-ನರಕಕ್ಕೆ-ಹೋಗ್ತೀರಿ- ನಗರ-ಪಾಲಿಕೆ-ಅಧಿಕಾರಿಗಳಿಗೆ-ಶಾಸಕ-ಜ್ಯೋತಿಗಣೇಶ್-ಖಡಕ್- ಎಚ್ಚರಿಕೆ

ತುಮಕೂರು: ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಖಾತೆಗಳನ್ನು ಬಿ ಖಾತೆಗೆ ನೊಂದಣಿ ಮಾಡಿಕೊಳ್ಳಲು ನಗರ ಪಾಲಿಕೆಯು ನೋಂದಣಿ ಆಂದೋಲನ ಆರಂಭಿಸಿದ್ದು, ಈ ಕಾರ್ಯದಲ್ಲಿ ಪಾಲಿಕೆ ಅಧಿಕಾರಿಗಳು ನಾಗರೀಕರೊಂದಿಗೆ ಮಾನವೀಯತೆಯಿಂದ ವರ್ತಿಸಿ ತೊಂದರೆ ಆಗದಂತೆ ನಡೆದುಕೊಳ್ಳಿ, ಜನರಿಗೆ ಕಿರುಕುಳ ನೀಡಿದರೆ ನೀವು ನರಕಕ್ಕೆ ಹೋಗುವಿರಿ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಎಚ್ಚರಿಕೆ ನೀಡಿದರು.


ಗುರುವಾರ ನಗರದ ಶಿರಾ ಗೇಟ್‌ನ ಐಡಿಎಸ್‌ಎಂಟಿ ಕಾಂಪ್ಲೆಕ್ಸ್ನಲ್ಲಿ ನಗರ ಪಾಲಿಕೆಯಿಂದ ಹಮ್ಮಿಕೊಂಡಿದ್ದ ೧, ೨ ಹಾಗೂ ೩ನೇ ವಾರ್ಡ್ ವ್ಯಾಪ್ತಿಯ ಬಿ-ಖಾತೆ ಆಂದೋಲನದಲ್ಲಿ ಆಸ್ತಿ ಮಾಲೀಕರಿಗೆ ಬಿ-ಖಾತೆ ಅರ್ಜಿ ವಿತರಿಸಿ ಮಾತನಾಡಿದ ಶಾಸಕರು, ಕಟ್ಟಡ ಹಾಗೂ ನಿವೇಶನ ಮಾಲೀಕರು ಬಿ-ಖಾತೆ ಮಾಡಿಸಿ ಆಸ್ತಿ ದಾಖಲಾತಿಗೊಂದಲ ನಿವಾರಿಸಿಕೊಳ್ಳಿ. ತಮ್ಮ ಆಸ್ತಿಯನ್ನು ತೆರಿಗೆ ವ್ಯಾಪ್ತಿಗೆ ತಂದು ಅಧಿಕೃತಗೊಳಿಸಿಕೊಳ್ಳಬೇಕು. ಇದರಿಂದ ತೆರಿಗೆ ಹಣ ಸೋರಿಕೆಯಾಗುವುದು ತಪ್ಪಿ ಸರ್ಕಾರಕ್ಕೆ ಹಾಗೂ ನಗರಪಾಲಿಕೆಗೆ ಬಂದು ನಿಮ್ಮ ರೈತರಿಗೆ ಹಣ ನಗರದ ಅಭಿವೃದ್ಧಿ ಕೆಲಸಗಳಿಗೆ ಉಪಯೋಗವಾಗುತ್ತದೆ ಎಂದರು.


ಬಿ-ಖಾತೆ ಆಂದೋಲನದ ನೆಪದಲ್ಲಿ ಪಾಲಿಕೆ ಅಧಿಕಾರಿಗಳು ನಾಗರೀಕರಿಗೆತೊಂದರೆಕೊಡಬಾರದು, ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು. ಕಿರುಕುಳ ನೀಡಿದರೆ ಅಧಿಕಾರಿಗಳು ನರಕಕ್ಕೆ ಹೋಗ್ತೀರಿಎಂದ ಶಾಸಕರು, ಸಾರ್ವಜನಿಕರುಅಗತ್ಯ ದಾಖಲಾತಿಗಳನ್ನು ಒದಗಿಸಿ ಬಿ-ಖಾತೆಆಂದೋಲನವನ್ನು ಸದುಪಯೋಗಪಡಿಸಿಕೊಂಡುತಮ್ಮ ಆಸ್ತಿ ಮಾಲಿಕತ್ವವನ್ನು ಅಧಿಕೃತಗೊಳಿಸಿಕೊಳ್ಳಿಎಂದು ಹೇಳಿದರು.


ಆಸ್ತಿದಾರರು ೨೦೨೪ ಸೆಪ್ಟಂಬರ್ ೧೦ಕ್ಕಿಂತ ಮೊದಲು ಉಪನೋಂದಣಿ ಕಚೇರಿಯಲ್ಲಿ ನೋಂದಣಿಯಾಗಿರುವವರು ಮಾತ್ರ ಬಿ-ಖಾತೆ ಮಾಡಿಸಲು ಅರ್ಹರಿರುತ್ತಾರೆ. ಬಿ-ಖಾತಾದಲ್ಲಿ ದಾಖಲಾಗುವ ಆಸ್ತಿಗಳಿಗೆ ಮೊದಲ ಬಾರಿಗೆ ಸ್ವತ್ತುಗಳ ತೆರಿಗೆಯ ಎರಡರಷ್ಟು ತೆರಿಗೆಯನ್ನು ಹಾಗೂ ನಂತರದ ವರ್ಷಗಳಲ್ಲಿ ಸ್ವತ್ತು ತೆರಿಗೆಯನ್ನು ಮಾತ್ರ ವಿಧಿಸಲಾಗುತ್ತದೆ ಎಂದು ಶಾಸಕರು ಹೇಳಿದರು.


ನಗರ ಪಾಲಿಕೆ ಆಯುಕ್ತರಾದ ಬಿ.ವಿ.ಅಶ್ವಿಜ ಮಾತನಾಡಿ, ನಗರ ವ್ಯಾಪ್ತಿಯಲ್ಲಿ ಅನಧಿಕೃತ ಆಸ್ತಿಗಳನ್ನು ಹೊಂದಿರುವವರು ಬಿ-ಖಾತೆದಾಖಲಿಸಲು ೩ ತಿಂಗಳ ಕಾಲಾವಕಾಶ ನೀಡಲಾಗಿದೆ. ಬಿ-ಖಾತೆದಾಖಲಿಸಲು ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸುವ ನೋಂದಾಯಿತ ಮಾರಾಟ ಪತ್ರ/ವಿಭಾಗ ಪತ್ರಗಳನ್ನು ಹೊಂದಿರಬೇಕು. ನಗರ ವ್ಯಾಪ್ತಿಯಲ್ಲಿ ವಿವಿಧೆಡೆ ಬಿ-ಖಾತೆ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದರು.


ವಲಯ ಆಯುಕ್ತ ಶಿವಾನಂದ್, ಕಂದಾಯ ನಿರೀಕ್ಷಕ ವಸಂತಕುಮಾರ್, ಪಾಲಿಕೆ ಮಾಜಿ ಸದಸ್ಯರಾದ ಎನ್.ಮಹೇಶ್, ಇಂದ್ರಕುಮಾರ್, ಹಾಗೂ ಪಾಲಿಕೆ ಅಧಿಕಾರಿಗಳು ಭಾಗವಹಿಸಿದ್ದರು

Leave a Reply

Your email address will not be published. Required fields are marked *

× How can I help you?