ಅರಕಲಗೂಡು – ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ) ಅರಕಲಗೂಡು ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಬಿದರಕ್ಕ, ಇವರ ಸಹಭಾಗಿತ್ವದಲ್ಲಿ ಬಿದರಕ್ಕ ಗ್ರಾಮದಲ್ಲಿ 531ನೇ ಶುದ್ದಗಂಗಾ ಘಟಕ ಉದ್ಘಾಟನಾ ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ನಿರ್ದೇಶಕ ಲೀಲಾವತಿ, ಗ್ರಾಮ ಪಂಚಾಯ್ತಿ ಪಿಡಿಒ ವರಲಕ್ಷ್ಮಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಹೇಮಲತಾ ಘಟಕಕ್ಕೆ ಚಾಲನೆ ನೀಡಿದರು.
ಈ ವೇಳೆ ಲೀಲಾವತಿ, ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಅರಕಲಗೂಡು ತಾಲೂಕು ಯೋಜನಾಧಿಕಾರಿಯವರಾದ ಜಿನ್ನಪ್ಪ ಎಸ್ ಬಿ ಸರ್, ಗ್ರಾಮ ಪಂಚಾಯತಿ ಉಪಾಧ್ಯಕ್ಷ ಶ್ವೇತ, ಕೇಂದ್ರ ಕಚೇರಿಯ ಶುದ್ಧಗಂಗ ಕೆರೆ ವಿಭಾಗ ಯೋಜನಾಧಿಕಾರಿ ಯುವರಾಜ್ ಜೈನ್ , ಗ್ರಾಮ ಪಂಚಾಯಿತಿ ಪಿಡಿಒ ವರಲಕ್ಷ್ಮಿ, ಗ್ರಾಮ ಪಂಚಾಯತಿ ಸದಸ್ಯ ಸರೋಜಮ್ಮ, ಶಿವಣ್ಣ, ಗಿರೀಶ್, ಬಿ ಎನ್ ಸ್ವಾಮಿ, ಒಕ್ಕೂಟದ ಅಧ್ಯಕ್ಷ ಪುಟ್ಟರಾಮು, ವಲಯದ ಮೇಲ್ವಿಚಾರಕ ವಿನಯ್ ಕುಮಾರ್ ಬಿ ಎಂ, ಶುದ್ಧಗಂಗ ಮೇಲ್ವಿಚಾರಕ ಶೇಖರ್, ಸೇವಾ ಪ್ರತಿನಿಧಿ ದೇವರಾಜು, ಭಾಗೀರಥಿ, ದೀಪಿಕಾ, ಶಶಿಕುಮಾರ್ ಭಾಗವಹಿಸಿದ್ದರು.