ಅರಕಲಗೂಡು-ಏ.13 ಮತ್ತು 14 ರಂದು- ಶ್ರೀ-ಚನ್ನಬಸವೇಶ್ವರ-ಕತೃ-ಗದ್ದುಗೆಯ-ನೂತನ-ಕಟ್ಟಡದ-ಉದ್ಘಾಟನಾ-ಕಾರ್ಯಕ್ರಮ

ಅರಕಲಗೂಡು- ದೊಡ್ಡಮಠದಲ್ಲಿ ಏಪ್ರಿಲ್ 13 ಮತ್ತು 14 ರಂದು ನಡೆಯುವ ಶ್ರೀ ಚನ್ನಬಸವೇಶ್ವರ ಕತೃ ಗದ್ದುಗೆಯ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದು ಹಾಸನ ಜಿಲ್ಲಾ ವೀರಶೈವ- ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಿಳಿಸಿದರು.

ರಾಮನಾಥಪುರದಲ್ಲಿ ದೊಡ್ಡಮಠದ ಶ್ರೀಗಳು ಶ್ರೀಮಠದ ಭಕ್ತರು ಹಾಗೂ ಶರಣ ಶರಣಯರಿಗೆ ಕಾರ್ಯಕ್ರಮದ ಅಹ್ವಾನ ಪತ್ರಿಕೆ ನೀಡಿ ಆಹ್ವಾನಿಸಿ ಮಾತನಾಡಿದ ಅವರು, ಅರಕಲಗೂಡು ದೊಡ್ಳಮಠದ ಶ್ರೀ ಮಲ್ಲಿಕಾರ್ಜುನಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಹರಗುರು ಚರಮೂರ್ತಿಗಳು, ರಾಜ್ಯದ ಜನಪ್ರತಿಗಳು ಭಾಗವಹಿಸುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಏಪ್ರಿಲ್ 13 ರಂದು ಭಾನುವಾರ ಬೆಳಿಗ್ಗೆ 10-30 ಕ್ಕೆ ಪರಮಪೂಜ್ಯ ಶ್ರೀ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗಮಹಾಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸುವರು. ದೊಡ್ಡಮಠದ ಶ್ರೀ ಮಲ್ಲಿಕಾರ್ಜುನಸ್ವಾಮೀಜಿ ಅವರು ನೇತೃತ್ವ ವಹಿಸುವರು. ದಾವಣಗೆರೆ ಮಠದ ಶ್ರೀಗಳು, ಅರೇಮಾದನಹಳ್ಳಿ ಶ್ರೀ ಮನ್ಮೂಲ ಮಠದ ಶ್ರೀಗಳು, ಪುಪ್ಪಗಿರಿ ಮಠದ ಶ್ರೀಗಳು, ಮುದ್ದಿನಕಂತೆ ಮಠದ ಶ್ರೀಗಳು, ಸಮ್ಮುಖ ವಹಿಸುವರು. ತೋಟಗಾರಿಕೆ ಸಚಿವರು ಮಲ್ಲಿಕಾರ್ಜುನ ಶಾಮಾನೂರು ಉದ್ಘಾಟನೆ ಮಾಡುವರು. ಲೋಕಸಭಾ ಸದಸ್ಯರು ಶ್ರೀ ಶ್ರೇಯಸ್ ಪಾಟೀಲ್ ಅಧ್ಯಕ್ಷತೆ ವಹಿಸುವರು.


ಏಪ್ರಿಲ್ 14 ರಂದು ಸೋಮವಾರ ಬೆಳಿಗ್ಗೆ 10-30 ಗಂಟೆಗೆ ಶ್ರೀಕ್ಷೇತ್ರದ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿಜಿ ಯವರು ದಿವ್ಯ ಸಾನಿಧ್ಯ ವಹಿಸುವರು.

ಶ್ರೀಮಠದ ಶ್ರೀಗಳು ನೇತೃತ್ವ ವಹಿಸುವರು. ಶಿವಗಂಗೆ ಮಠದ ಶ್ರೀಗಳು ನಾಗಣಸೂರು ರೇವೂರು ಮಠದ ಶ್ರೀಗಳು, ಶಹಪೂರ ಮಠದ ಶ್ರೀಗಳು, ವಿಜಾಪುರ ಮಠದ ಶ್ರೀಗಳು ದಿವ್ಯ ಸಮ್ಮುಖ ವಹಿಸುವರು. ಶಿಕಾರಿಪುರ ಶಾಸಕರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರು ಬಿ.ವೈ. ವಿಜಯೇಂದ್ರ ಕಾರ್ಯಕ್ರಮ ಉದ್ಘಾಟನೆ ಮಾಡುವರು. ಶಾಸಕರು ಎ. ಮಂಜು ಅಧ್ಯಕ್ಷತೆ ವಹಿಸುವರು ಎಂದು ಮಾಹಿತಿ ನೀಡಿದರು.

  • ಶಿವಕುಮಾರ

Leave a Reply

Your email address will not be published. Required fields are marked *

× How can I help you?