ಅರಕಲಗೂಡು– ತಾಲ್ಲೂಕಿನ ಮುಸವತ್ತೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ವೀರಭದ್ರೇಶ್ವರ ದೇವಾಲಯದ ಲೋಕಾರ್ಪಣೆ ಹಾಗೂ ಪುನರ್‌ಪ್ರತಿಷ್ಠಾಪನೆ ಸಮಾರಂಭವು ಮೇ 9 ಮತ್ತು 10 ರಂದು ಎರಡು ದಿನಗಳ ಕಾಲ ವಿಜೃಂಭಣೆಯಿಂದ ಜರುಗಲಿದೆ. ಈ ಮಹಾ ಧಾರ್ಮಿಕ ಕಾರ್ಯಕ್ರಮದಲ್ಲಿ ರಾಜ್ಯದ ಪ್ರಮುಖ ಪೀಠದ ಜಗದ್ಗುರುಗಳು, ಅನೇಕ ಮಠಾಧಿಪತಿಗಳು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ ಎಂದು ಮುಸವತ್ತೂರು ಗ್ರಾಮದ ಮುಖಂಡ ತಿಳಿಸಿದ್ದಾರೆ.
ಧಾರ್ಮಿಕ ಕಾರ್ಯದ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಮಾತನಾಡಿದ ಅವರು, ಮೇ 9, ಶುಕ್ರವಾರ ಬೆಳಿಗ್ಗೆ 10.30 ಕ್ಕೆ ನಡೆಯುವ ಲೋಕಾರ್ಪಣಾ ಧಾರ್ಮಿಕ ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠದ ಪರಮಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಕಾರ್ಜವಳ್ಳಿ ಮಠದ ಶ್ರೀ ಸದಾಶಿವಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ಹಾಸನ ಆದಿಚುಂಚನಗಿರಿ ಮಠದ ಶ್ರೀ ಶಂಭುನಾಥ ಮಹಾಸ್ವಾಮಿಗಳು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಈ ಸಂದರ್ಭದಲ್ಲಿ ದೊಡ್ಡಮಠ, ಚುಲುಮೆ ಮಠ, ಕಿರಿಕೊಡ್ಲಿ ಮಠ, ತಣ್ಣಿರುಹಳ್ಳಿ ಮಠ, ಮನೆಹಳ್ಳಿ ಮಠ, ಶಿರದನಹಳ್ಳಿ ಮಠ, ಕೆಸವತ್ತೂರು ಮಠ ಮುಂತಾದ ಮಠಗಳ ಶ್ರೀಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಎ. ಮಂಜು ವಹಿಸಲಿದ್ದು, ಮಹಾಸಭಾದ ಅಧ್ಯಕ್ಷ ಶ್ರೀ ಸುರೇಶ್ ನೇತೃತ್ವ ವಹಿಸಲಿದ್ದಾರೆ.
ಮೇ 10, ಶನಿವಾರ ಬೆಳಿಗ್ಗೆ 10.30 ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಪೀಠದ ಜಗದ್ಗುರು ಶ್ರೀ 1008 ಪ್ರಸನ್ನ ರೇಣುಕಾ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರಶಿವಾಚಾರ್ಯ ಭಗವತ್ಪಾದರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಜೊತೆಗೆ ಕಾರ್ಜವಳ್ಳಿ ಹಿರೇಮಠದ ಶ್ರೀ ಸದಾಶಿವಶಿವಾಚಾರ್ಯ ಸ್ವಾಮೀಜಿ, ಅರೇಮಾದನಹಳ್ಳಿ ವಿಶ್ವ ಬ್ರಾಹ್ಮಣ ಮಠದ ಜಗದ್ಗುರುಗಳು ಹಾಗೂ ವಿವಿಧ ಮಠಾಧಿಪತಿಗಳು ಉಪಸ್ಥಿತರಿರಲಿದ್ದಾರೆ.

ಮಾಜಿ ಶಾಸಕರು ಡಾ. ಎ.ಟಿ. ರಾಮಸ್ವಾಮಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಬಿಜೆಪಿ ಹಾಸನ ಜಿಲ್ಲಾಧ್ಯಕ್ಷ ಶ್ರೀ ಸಿದ್ದೇಶ್ ನಾಗೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ಇನ್ನೂ ಈ ಸಂಬಂಧ ಧಾರ್ಮಿಕ ಮಹೋತ್ಸವದ ಸಂಯೋಜಕರಾಗಿ ಮುಸವತ್ತೂರು ಗ್ರಾಮದ ಮುಖಂಡರಾದ ಅಶೋಕ್, ಪ್ರಸನ್ನ, ಷಮ್ಮುಖ, ಶರತ್ ಅವರು ಮಾಧ್ಯಮಗಳ ಮೂಲಕ ಎಲ್ಲ ಭಕ್ತರಿಗೆ ಆಹ್ವಾನ ನೀಡಿದ್ದಾರೆ.
- ಶಶಿಕುಮಾರ