ತುಮಕೂರು-ಬಸವಣ್ಣ-ಕಾಳಿಕಾಂಬ-ದೇವಾಲಯದಲ್ಲಿ-ನೂತನ-ನವಗ್ರಹ-ಪ್ರತಿಷ್ಠಾಪನೆ

ತುಮಕೂರು: ನಗರದ ಚಿಕ್ಕಪೇಟೆಯ ಶ್ರೀ ಬಸವಣ್ಣ, ಕಾಳಿಕಾಂಬ, ವಿಶ್ವಕರ್ಮ ದೇವಾಲಯದಲ್ಲಿ ನೂತನ ನವಗ್ರಹ ಪ್ರತಿಷ್ಠಾಪನಾ ಮಹೋತ್ಸವ ಶಾಸ್ತ್ರೋಕ್ತವಾಗಿ ನೆರವೇರಿತು.

ಗಂಗಾಭವಾನಿ ಪೂಜೆಯೊಂದಿಗೆ ನವಗ್ರಹ ದೇವರುಗಳ ಸ್ಥಿರಬಿಂಬದ ಯಾಗ ಶಾಲಾ ಪ್ರವೇಶ, ಪ್ರಧಾನ ಕಲಾಶಾರಾಧನೆ , ಅಷ್ಟೋತ್ತರ ಪೂಜೆ ನೆರವೇರಿದ್ದು ಸಂಜೆ ಮಹಾಗಣಪತಿ ಹೋಮ, ನವಗ್ರಹ ಹೋಮ , ಅಷ್ಟದಿಕ್ಬಾಲಕಾರ ಹೋಮ, ಹೋಮ ಹಾಗೂ ರಾತ್ರಿ ಪುಷ್ಯ ನಕ್ಷತ್ರದಲ್ಲಿ ನವಗ್ರಹ ದೇವತಾಮೂರ್ತಿಗಳಿಗೆ ಅಷ್ಟಬಂಧನ ಕಾರ್ಯ ನೆರವೇರಿತು.

11 ರಂದು ಬೆಳಿಗ್ಗೆಯಿಂದ ಸ್ಥಿರ ಲಗ್ನದಲ್ಲಿ ಪ್ರಾಣಪ್ರತಿಷ್ಠಾಪನೆ, ನೇತ್ರೋನ್ಮಿಲನ, ಪಂಚಾಮೃತ ಅಭಿಷೇಕ, ಪ್ರಧಾನ ಹೋಮಗಳು, ಅಷ್ಠದಿಗ್ಬಲಿ ಪೂಜೆಗಳು ದೇವಾಲಯ ಸಮಿತಿ ಅಧ್ಯಕ್ಷರೂ ಹಿರಿಯ ವಕೀಲರಾದ ಟಿ.ಎನ್.ಗುರುರಾಜ್, ಗೌರವಾಧ್ಯಕ್ಷ ಟಿ.ಡಿ.ಹೊನ್ನರಾಜ್, ಉಪಾಧ್ಯಕ್ಷ ಕೇಶವಮೂರ್ತಿ, ಪ್ರಧಾನ ಕಾರ್ಯದರ್ಶಿ ಟಿ.ಆರ್.ಅಶ್ವತ್ಥನಾರಾಯಣ್, ಸಹಕಾರ್ಯದರ್ಶಿಗಳಾದ ಎಂ.ಗಿರೀಶ್‌ಬಾಬು, ಬಿ.ಶಶಿಧರ್, ಖಜಾಂಚಿ ಟಿ.ಎನ್.ಪ್ರಕಾಶ್ ಹಿರಿಯ ನಿರ್ದೇಶಕರಾದ ಟಿ.ಡಿ.ಜಯಪ್ರಕಾಶ್, ಟಿ.ಇ.ವೇಣುಗೋಪಾಲ್, ಗಂಗಾಧರಚಾರ್, ಟಿ.ವಿ.ಚೇತನ್. ಸೇರಿ ನಿರ್ದೇಶಕರುಗಳು ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಟಿ.ಎ.ರವಿಕುಮಾರ್, ವಿಶ್ವಕರ್ಮ ಅಭಿವೃದ್ಧಿ ನಿಗಮದ ಜಿಲ್ಲಾ ನಿರ್ದೇಶಕ ಟಿ.ಸಿ.ಡಮರುಗೇಶ್, ಎನ್.ಎಸ್.ರವಿ, ಟಿ.ಎಚ್.ನವೀನ್ ಸೇರಿ ಸಮಾಜದ ವಿವಿಧ ಮುಖಂಡರುಗಳ ಸಮಕ್ಷಮ ನೆರವೇರಿತು. ಶೈವಾಗಮ ಆಚಾರ್ಯ ಶರತ್‌ಕುಮಾರ್, ಶಂಕರಾಚಾರ್ಯ, ಪುರೋಹಿತರಾದ ಸತೀಶ್ ಅವರು ಧಾರ್ಮಿಕ ವಿಧಿ ವಿಧಾನವನ್ನು ವ್ಯವಸ್ಥಿತವಾಗಿ ನಡೆಸಿಕೊಟ್ಟರು.

  • ಬಿ. ಕೆ. ಚಂದ್ರಚೂಡ್‌

Leave a Reply

Your email address will not be published. Required fields are marked *

× How can I help you?