ಅರಕಲಗೂಡು– ಕ್ರಿಸ್ತ ಜ್ಯೋತಿ ಸ್ಕೂಲ್ ಅರಕಲಗೂಡು ಇವರ ವತಿಯಿಂದ ಅರಕಲಗೂಡು ಪಟ್ಟಣದಲ್ಲಿರುವ ಮಧುಶ್ರೀ ವೃದ್ಧ ಆಶ್ರಮಕ್ಕೆ ತೆರಳಿ ಆಶ್ರಮದ ವಾಸಿಗಳಾಗಿರುವ ಎಲ್ಲಾ ವೃದ್ಧ ಮಹಿಳೆಯರಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭವನ್ನು ಕೋರಿದರು.
ಈ ವೇಳೆ ಮಾತನಾಡಿದ ಕ್ರಿಸ್ತ ಜ್ಯೋತಿ ಶಾಲೆಯ ಪ್ರಾಂಶುಪಾಲ ಫಾದರ್ ಸೆಬೆಸ್ಟಿನ್ ಪೌಲ್, ನಮ್ಮ ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರು ,ವಿದ್ಯಾರ್ಥಿಗಳ ಪೋಷಕರೆಲ್ಲಾ, ದಿನಸಿ ಸಾಮಾನುಗಳನ್ನು ಆಶ್ರಮಕ್ಕೆ ನೀಡಿದ್ದು, ಕಾಣಿಕೆಯಾಗಿದೆ ಇದನ್ನು ಸ್ವೀಕರಿಸಬೇಕು ಎಂದರು.
ಸಿಸ್ಟರ್ ಲೀನಾ ಮಾತನಾಡಿ, ನಮ್ಮ ಶಾಲೆಯಲ್ಲಿ ಓದಿ ನಾವು ಕೊಟ್ಟ ಶಿಕ್ಷಣವನ್ನು ಮೈಗೂಡಿಸಿಕೊಂಡು ಮಧುಸೂದನ್ ರವರು ಒಂದು ವೃದ್ಧಾಶ್ರಮವನ್ನು ಮಾಡಿರುವುದು ತುಂಬಾ ಹೆಗ್ಗಳಿಕೆಯ ವಿಷಯ ಎಂದು ಶ್ಲಾಘಿಸಿದರು.
ಈ ವೇಳೆ ಆರೋಗ್ಯ ಇಲಾಖೆಯ ಪ್ರಕಾಶ್ , ಮಧುಶ್ರೀ, ಮಹಿಳಾ ಸಮಾಜದ ಮಧುಸೂದನ್ , ದೀಪಿಕಾ, ಸುಮಾ, ಇನ್ನು ಮುಂತಾದವರು ಹಾಜರಿದ್ದರು.
- ಶಿವಕುಮಾರ್