ಕೊಟ್ಟಿಗೆಹಾರ : ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ನಜರೆತ್ ಶಾಲೆ ಬಣಕಲ್ ನಲ್ಲಿ ನಡೆಯಿತು.
ಕೊಟ್ಟಿಗೆಹಾರ ಸರ್ಕಾರಿ ಪ್ರೌಢಶಾಲೆಯ ಅತ್ಯುತ್ತಮ ಶಿಕ್ಷಕಿ ಪುರಸ್ಕೃತ ಶಿಕ್ಷಕಿ ನೌಶಿಬ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಸಮಾಜದಲ್ಲಿ ಸ್ತ್ರೀಯರ ಪಾತ್ರ ಹಾಗೂ ಪುರುಷರ ಸಮನಾಗಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ.
ಮಹಿಳೆಯರು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆಗಳನ್ನು ಈ ದಿನಾ ನೆನಪಿಸಿಕೊಳ್ಳ ಬೇಕಾಗುತ್ತದೆ.

ಶಾಲಾ ಪ್ರಾಂಶುಪಾಲರಾದ ಸಿಸ್ಟರ್ ಹಿಲ್ಡ ಲೋಬೋ ಮಾತನಾಡಿ ಮಹಿಳೆಯರು ಹೆಚ್ಚು ಶಿಕ್ಷತರಾಗಿ ಸಮಾಜಕ್ಕೆ ತಮ್ಮ ಕೊಡುಗೆಯನ್ನು ನೀಡಬೇಕೆಂದರು.
ಶಿಕ್ಷಕಿಯರು, ವಿದ್ಯಾರ್ಥಿಗಳು ಹಾಗೂ ಪೋಷಕರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಈ ವೇಳೆ ಶಿಕ್ಷಕಿಯರಾದ ರೇಖಾ, ರೇಷ್ಮಾ, ಚಂದನ, ಸಾಂಚಿತ, ಹಲೀಮಾ, ಅನುಷಾ, ಅನುಶ್ರೀ, ಪ್ರೆಸಿಲ್ಲ ಮೋನಿಸ್, ಸೇವೆರಿನ್, ಅಬಿದ, ಕೇಸರಿ, ರುಕ್ಷವಿ, ವಿನುತಾ, ಸಾಂಘವಿ, ಗಾಯಿತ್ರಿ, ಡಯಾನಾ, ಯಾಸ್ಮಿನ್, ವರ್ಷ ಪೈ, ಲಿನ್ಸಿ ಹಾಗೂ ಶಾಲಾ ವಿದ್ಯಾರ್ಥಿನಿಯರು ಹಾಜರಿದ್ದರು.