ಹಾಸದ-ಜ.26 ರಂದು ಒಂದು ದಿವಸದ ಚುಟುಕು ಕಮ್ಮಟ-ಜನವರಿ ಮೊದಲನೇ ವಾರದಿಂದ ಹೆಸರು ನೋಂದಾಯಿಸಲು ಅವಕಾಶ

ಹಾಸದ-ನಗರದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷರಾದ ಡಾ.ಬಾ,ನಂ ಲೋಕೇಶ್ ರವರ ಅಧ್ಯಕ್ಷತೆಯಲ್ಲಿ ನೆಡೆದ ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಜ.26 ರಂದು ಒ0ದು ದಿವಸದ ಚುಟುಕು ಕಮ್ಮಟವನ್ನು ಆಯೋಜಿಸಲು ನಿರ್ಧರಿಸಲಾಯಿತು.

ಈ ವೇಳೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಿoದ ಚುಟುಕುಗಳ ಸ್ವರೂಪ ಹಾಗೂ ರಚನೆ ಕುರಿತಾದ ಉಪನ್ಯಾಸಗಳಿರುತ್ತವೆ. ಜಿಲ್ಲೆಯ ಚುಟುಕು ಸಾಹಿತ್ಯಾಸಕ್ತರು ಜನವರಿ ಮೊದಲ ವಾರದಿಂದ ಹೆಸರು ನೊಂದಾಯಿಸಬಹುದು ಭಾಗವಹಿಸುವರಿಗೆ ಪ್ರಮಾಣ ಪತ್ರ ನೀಡಲಾ ಗುವುದು. ಹೆಚ್ಚಿನ ಮಾಹಿತಿಗಾಗಿ 9844566748 ಸಂಖ್ಯೆಗೆ ಸಂಪರ್ಕಿಸ ಬಹುದು ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಕೋಶಾಧ್ಯಕ್ಷರಾದ ಕೆ,ಎಸ್ ಮಂಜುನಾಥ್ ತಿಳಿಸಿದರು.

ಸಭೆಯಲ್ಲಿ ಅರಕಲಗೂಡು ತಾಲ್ಲೂಕು ಅಧ್ಯಕ್ಷರಾದ ಸುಂದರೇಶ್ ,ಹಾಸನ ತಾಲ್ಲೂಕು ಅಧ್ಯಕ್ಷರಾ ದ ಸೋಮನಾಯ್ಕ್,ಹೊಳೆನರಸೀಪುರ ಅಧ್ಯಕ್ಷರಾದ ಮಲ್ಲೇಶ್,ಸಕಲೇಶಪುರ ಅಧ್ಯಕ್ಷರಾದ ಕಿರಣ್ ಕುಮಾರ್ ಹಾಗೂ ಚನ್ನರಾಯಪಟ್ಟಣದ ರಮೇಶ್ ಗೋಕಾಕ್ ಹಾಗೂ ಇತರಿದ್ದರು.

Leave a Reply

Your email address will not be published. Required fields are marked *

× How can I help you?