ಮೂಡಿಗೆರೆ:ಬಡವರ ಮತ್ತು ದುರ್ಬಲರ ಸೇವೆ ಒಂದು ಉದ್ಯೋಗವಲ್ಲ,ಬದಲಿಗೆ ಅದು ಪ್ರತಿಯೊಬ್ಬ ಮಾನವನ ಕರ್ತವ್ಯ ಎಂದು ಖ್ಯಾತ ಚಲನಚಿತ್ರ ನಟಿ, ಬಿಗ್ ಬಾಸ್,ಖ್ಯಾತಿಯ ಸಂಗೀತ ಶೃಂಗೇರಿ ಹೇಳಿದರು.
ಅವರು ಸೋಮವಾರ ಸಂಜೆ ಪಟ್ಟಣದ ಜೇಸಿ ಭವನದಲ್ಲಿ ಪ್ರೇರಣ ಜೇಸಿ ಸಪ್ತಾಹದ ಅಂಗವಾಗಿ ಏರ್ಪಡಿಸಿದ್ದ ಲೇಡಿ ಜೇಸಿ ಡೇ ಹಾಗೂ ಮಹಿಳಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜದಲ್ಲಿ ಗಂಡು ಹೆಣ್ಣು ಎಂಬ ಭೇಧ ಮನೋಭಾವ ಯಾರಲ್ಲೂ ಇರಬಾರದು. ಇಬ್ಬರೂ ಕೈ ಹಿಡಿದು ಮುಂದೆ
ಸಾಗಿದರೆ ಬದುಕಿನಲ್ಲಿ ಯಶಸ್ಸು ಹಾಗೂ ಸಮಾಜ ಪರಿವರ್ತನೆ ಸಾಧ್ಯ.ಹೆಣ್ಣು ಮಕ್ಕಳಿಗೆ ಅಪ್ಪನ ಮೇಲೆ ಹಾಗೂ ಅಪ್ಪನಿಗೆ ಹಣ್ಣು ಮಕ್ಕಳ ಮೇಲೆ ಹೆಚ್ಚಿನ ವಾತ್ಸಲ್ಯವಿರುತ್ತದೆ.ತಂದೆಯ ಪ್ರೋತ್ಸಾಹ ಮಗಳಿಗೆ ದೊರೆತಾಗ ಆ ಹೆಣ್ಣು
ಮಗಳು ಎಂತಹ ಸಾಧನೆ ಬೇಕಾದರೂ ಮಾಡುವ ಹುಮ್ಮಸ್ಸು ಮೂಡುತ್ತದೆ.ಮಾನವ ತನ್ನ ಜೀವಿತಾವದಿಯಲ್ಲಿ ಎಲ್ಲರೊಂದಿಗು ಸಾಮರಸ್ಯದಿಂದ ಬದುಕಬೇಕು. ಹಸಿದವರಿಗೆ ಅನ್ನ ಕೊಡುವ ಮನೋಭಾವ
ಬೆಳೆಸಿಕೊಳ್ಳಬೇಕೆಂದು ಹೇಳಿದರು.
ಪ.ಪಂ. ಅಧ್ಯಕ್ಷೆ ಗೀತಾ ರಂಜನ್ ಅಜಿತ್ ಕುಮಾರ್ ಮಾತನಾಡಿ, ಮಹಿಳೆಯರಿಗೆ ತನ್ನ ಕುಟುಂಬ ನಿರ್ವಹಣೆ ಮಾಡುವ ಜೊತೆಗೆ ಎಲ್ಲಾ ರಂಗದಲ್ಲಿಯೂ ಗುರುತಿಸಿಕೊಳ್ಳುವ ಸಾಮಾರ್ಥ್ಯವಿದೆ.ಮಹಿಳೆಯರು ಸಾಮಾಜದಲ್ಲಿ ಉನ್ನತ
ಸ್ಥಾನಕ್ಕೇರಲು ಅನೇಕ ಅವಕಾಶಗಳು ಸಿಗುತ್ತದೆ.ಅದನ್ನು ಸದುಪಯೋಗ ಪಡಿಸಿಕೊಳ್ಳುವಂತ ಸಾಮರ್ಥ್ಯವನ್ನು ಎಲ್ಲರೂ ಬೆಳೆಸಿಕೊಳ್ಳಲು ಪ್ರಯತ್ನಿಸಬೇಕು ಎಂದು ತಿಳಿಸಿದರು.
ಈ ವೇಳೆ ನಿವೃತ್ತ ಶಿಕ್ಷಕಿಯರಾದ ರೇಣುಕಾ ಪ್ರಕಾಶ್, ನಾಗರತ್ನ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೇಡಿ ಜೇಸಿ ವಿಭಾಗದ ಅಧ್ಯಕ್ಷೆ ದಿವ್ಯ ಸುಪ್ರಿತ್ ವಹಿಸಿದ್ದರು.
.ಪಂ. ಮಾಜಿ ಅಧ್ಯಕ್ಷೆ ಸರೋಜಾ ಸುರೇಂದ್ರ, ಜೇಸಿ ಅಧ್ಯಕ್ಷ ಸುಪ್ರಿತ್ ಕಾರ್‌ಬೈಲ್, ಸಂದೀಪ್ ತ್ರಿಪುರ, ಶ್ರಾವ್ಯ ಉದಯ್, ನಿಶ್ಚಿತಾ ಯತೀಶ್, ಕವಿತಾ ಸಂತೋಷ್ ಮತ್ತಿತರರಿದ್ದರು.
ವರದಿ: ವಿಜಯ್ ಕುಮಾರ್.ಟಿ.ಮೂಡಿಗೆರೆ