ಎಚ್.ಡಿ.ಕೋಟೆ: ಪಟ್ಟಣದ ಪುರಸಭೆ ಅಧ್ಯಕ್ಷ ರಾಗಿ ಎರಡನೇ ಬಾರಿಗೆ ಜಾ.ದಳದ ಶಿವಮ್ಮ ಚಾಕ ಹಳ್ಳಿ ಕೃಷ್ಣ ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಆಸಿಫ್ ಏಜಾಜ್ ಪಾಷಾ ಚುನಾಯಿತರಾದರು.
ಪಟ್ಟಣದ ಪುರಸಭೆಯ ಕಚೇರಿಯಲ್ಲಿ ಬುಧವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚಾಕಹಳ್ಳಿ ವರ‍್ಡಿನ ಸದಸ್ಯರಾದ ಶಿವಮ್ಮ ಚಾಕಹಳ್ಳಿ ಕೃಷ್ಣ ಅವರು ಮಾತ್ರ ನಾಮಪತ್ರ ಸಲ್ಲಿಸಿದರು. ಹೀಗಾಗಿ ಅವರು ಅವಿರೋಧವಾಗಿ ಆಯ್ಕೆಯಾದರು.
ಸಾಮಾನ್ಯರಿಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಒಂದನೇ ವಾರ್ಡಿನ ಕಾಂಗ್ರೆಸ್ ಸದಸ್ಯ ಆಸಿಫ್ ಮತ್ತು ವಡ್ಡರಗುಡಿ ವಾರ್ಡಿನ ಕಾಂಗ್ರೆಸ್ ಸದಸ್ಯ ಸೋಮಶೇಖರ್, ಎರೆಹಳ್ಳಿ ಹ್ಯಾಂಡ್ ಪೋಸ್ಟಿನ ವಾರ್ಡಿನ ಜಾ.ದಳ ಸದಸ್ಯ ಹರೀಶ್ ಗೌಡ ನಾಮಪತ್ರ ಸಲ್ಲಿಸಿದ್ದರು. ಕೊನೆ ಗಳಿಗೆಯಲ್ಲಿ ಸೋಮಶೇಖರ್ ತಮ್ಮ ನಾಮಪತ್ರ ವಾಪಸ್ ತೆಗೆದುಕೊಂಡ ಹಿನ್ನೆಲೆಯಲ್ಲಿ ಆಸಿಫ್ ಮತ್ತು ಹರೀಶ್ ಗೌಡ ನಡುವೆ ಪೈಪೋಟಿ ರ‍್ಪಟ್ಟಿತ್ತು.
ಗುಪ್ತಮತದಾನಕ್ಕೆ ಆಗ್ರಹಿಸಿ ಕೆಲಕಾಲ ಗೊಂದಲ : ಕಾಂಗ್ರೆಸ್ ಪಕ್ಷದ ೧೩ ಜನ ಸದಸ್ಯರು ಕೈ ಎತ್ತುವ ಮೂಲಕ ಮತ ಚಲಾಯಿಸುತ್ತೇವೆ ಎಂದು ಪಟ್ಟುಹಿಡಿದರು. ಆದರೆ, ಜಾ.ದಳದ ಹತ್ತು ಮಂದಿ ಸದಸ್ಯರು ಗುಪ್ತ ಮತದಾನ ಆಗಬೇಕೆಂದು ಒತ್ತಾಯಿಸಿದರು. ಇದರಿಂದ ಸಭೆಯಲ್ಲಿ ಕೆಲ ಕಾಲ ಗದ್ದಲ ಉಂಟಾಯಿತು.

ಬಳಿಕ ಚುನಾವಣಾಧಿಕಾರಿಗಳಾದ ತಹಸಿಲ್ದಾರ್ ಶ್ರೀನಿವಾಸ್ ಮತ್ತು ಪುರಸಭಾ ಮುಖ್ಯಾಧಿಕಾರಿ ಸುರೇಶ್ ಅವರು ಪುರಸಭೆಯ ಕಾಯ್ದೆಯ ಪುಸ್ತಕ ನೋಡಿ ನಂತರ ಜಿಲ್ಲಾಧಿಕಾರಿಗಳ ಕಚೇರಿಯಿಂದ ಮಾಹಿತಿ ಪಡೆದು, ಸದಸ್ಯರು ಕೈ ಎತ್ತುವ ಮೂಲಕ ಅಭ್ರ‍್ಥಿಯ • ಪರ ಮತದಾನ ಮಾಡಲು ಅವಕಾಶ ಇದೆ ಎಂದು ತಿಳಿಸಿದರು.
ನಂತರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಸ್ರ‍್ಧಿಸಿದ್ದ ಆಸಿಫ್ ಪರವಾಗಿ ಕಾಂಗ್ರೆಸ್ ಪಕ್ಷದ ೧೩ ಜನ ಸದಸ್ಯರು ೨ ಕೈ ಎತ್ತುವ ಮೂಲಕ ಮತ ಚಲಾಯಿಸಿದರು. ಹರೀಶ್ ಗೌಡ ಪರವಾಗಿ ಜಾ.ದಳ ಪಕ್ಷದ 10 ಜನ ಸದಸ್ಯರು ಕೈ ಎತ್ತುವ ಮೂಲಕ ಮತ ಚಲಾಯಿಸಿದರು. ಆಗ ಚುನಾವಣಾಧಿಕಾರಿಗಳು ಆಸಿಫ್ ಅವರು ಅತಿ ಹೆಚ್ಚು ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ ಎಂದು ಘೋಷಿಸಿದರು.
ಅಧ್ಯಕ್ಷರಾಗಿ ಶಿವಮ್ಮ ಚಾಕಹಳ್ಳಿ ಕೃಷ್ಣ ಮತ್ತು ಉಪಾಧ್ಯಕ್ಷರಾಗಿ ಆಸಿಫ್ ಆಯ್ಕೆಯಾಗುತ್ತಿದ್ದಂತೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಪಾದಯಾತ್ರೆಯಿಂದ ಹಿಂದಿರುಗಿದ ಸದಸ್ಯ :ಬಿಜೆಪಿ ಸದಸ್ಯೆ ನಂದಿನಿ ಸೋಮು ಕಾಂಗ್ರೆಸ್ ಪಕ್ಷದ ಅಭ್ರ‍್ಥಿಗೆ, ಕಾಂಗ್ರೆಸ್‌ನ ಐಡಿಯಾ ವೆಂಕಟೇಶ್ ಜಾ.ದಳ ಅಭ್ರ‍್ಥಿಗೆ ಬೆಂಬಲ ಸೂಚಿಸಿ ಮತ ಹಾಕಿದ್ದು ಗಮನರ‍್ಹವಾಗಿತ್ತು. ರ‍್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಹೊರಟಿದ್ದ ಹೊಳೇನರಸೀಪುರ ಸಮೀಪದಲ್ಲಿದ್ದ ಸದಸ್ಯ ಮಿಲ್ ನಾಗರಾಜು ಪಾದಯಾತ್ರೆಯನ್ನು ಮೊಟಕುಗೊಳಿಸಿ ಕಚೇರಿಗೆ ಆಗಮಿಸಿ ಮತದಾನದಲ್ಲಿ ಭಾಗಿಯಾಗಿ ಮತ್ತೆ ಪಾದಯಾತ್ರೆಗೆ ತೆರಳಿದರು.
ಜಾ.ದಳ ಮತ್ತು ಕಾಂಗ್ರೆಸ್ ಕಚೇರಿಗಳ ಬಳಿ ಆ ಪಕ್ಷಗಳ ಕಾರ್ಯಕರ್ತರು , ಮುಖಂಡರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ಪುರಸಭೆ ನೂತನ ಅಧ್ಯಕ್ಷರಾದ ಶಿವಮ್ಮ ಚಾಕಹಳ್ಳಿ ಕೃಷ್ಣ ಮತ್ತು ಉಪಾಧ್ಯಕ್ಷರಾದ ಆಸಿಫ್ ಏಜಾಜ್ ಪಾಷಾರವರು ಮಾತನಾಡಿ, ಕಳೆದ 8 ತಿಂಗಳಿನಿಂದ ಪುರಸಭೆ ಆಡಳಿತ ಮಂಡಳಿಗೆ ಅಧಿಕಾರವಿಲ್ಲದೆ ಅನೇಕ ಮೂಲಸೌರ‍್ಯಗಳನ್ನು ಕಲ್ಪಿಸಲಾಗದೆ, ಅಭಿವೃದ್ಧಿ ಕೆಲಸಗಳು ಸರ‍್ಪಕವಾಗಿ ನಡೆದಿಲ್ಲ. ಶಾಸಕರು ಮತ್ತು ಸಂಸದರ ಸಹಕಾರದೊಂದಿಗೆ ಎಲ್ಲಾ ಸದಸ್ಯರ ನಿರ್ದೇಶನದೊಂದಿಗೆ ಪುರಸಭೆಯ 23 ವಾರ್ಡಗಳಲ್ಲೂ ಅಭಿವೃದ್ಧಿ ಕೆಲಸಗಳನ್ನು ನಡೆಸಿ, ಮೂಲಸೌರ‍್ಯಗಳನ್ನು ಕಲ್ಪಿಸಲಾಗುವುದು.
ಸ್ಥಗಿತಗೊಂಡಿರುವ ಕಾಮಗಾರಿಗಳನ್ನು ಚುರುಕುಗೊಳಿಸಿ ಪಟ್ಟಣವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಾಗುವುದು. ಜನರಿಗೆ ಉತ್ತಮ ಸೇವೆ ಸಿಗುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಈ ವೇಳೆ ಸುರೇಶ್, ಸಾಹಿರಾಬಾನು, ಅನ್ಸರ್, ಅನಿತಾ ನಿಂಗನಾಯಕ, ನರಸಿಂಹಮರ‍್ತಿ, ಐಡಿಯಾ ವೆಂಕಟೇಶ್, ಮಧುಕುಮಾರ್, ರಾಜು ವಿಶ್ವರ‍್ಮ, ಲೋಕೇಶ್, ನಂಜಪ್ಪ, ನಂದಿನಿ ಸೋಮು, ಶಾಂತಮ್ಮ, ಮಹೇಂದ್ರ, ಕರಾಟೆ ಪ್ರೇಮ್. ಪುಟ್ಟಬಸವ, ಮಿಲ್ಲು ನಾಗರಾಜು, ಮುಖಂಡರು ಉಪಸ್ಥಿತರಿದ್ದರು.