ಮೈಸೂರು-ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ದಿನದ 18 ಗಂಟೆಗಳ ಕಾಲ ದೇಶ ಸೇವೆ ಸಲ್ಲಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ದಿನದಂದು ದೇಶಧ ಯುವ ಸಮೂಹ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡುವ ಮೂಲಕ ಪ್ರಧಾನಿ ಮೋದಿಯವರಿಗೆ ಮತ್ತಷ್ಟು ಹುರುಪು ತುಂಬುವ ಕೆಲಸ ಮಾಡಿದ್ದಾರೆ ಎಂದು ಶಾಸಕ ಎಲ್ ನಾಗೇಂದ್ರ ಹೇಳಿದರು.
ಜೀವದಾರ ರಕ್ತ ನಿಧಿ ಕೇಂದ್ರದ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ಜೀವದಾರ ರಕ್ತ ನಿಧಿ ಕೇಂದ್ರ,ಬಿಜೆಪಿ ವೈದ್ಯಕೀಯ ಪ್ರಕೋಸ್ಟ ಮತ್ತು ನರೇಂದ್ರ ಮೋದಿ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪಕ್ಷಕ್ಕಾಗಿ,ದೇಶಕ್ಕಾಗಿ ತಮ್ಮ ಸರ್ವಸ್ವವನ್ನು ಅರ್ಪಿಸಿ ಕೆಲಸ ಮಾಡುತ್ತಿರುವ ಪ್ರಧಾನಿಯವರ ದಾರಿಯಲ್ಲೇ ನಾವೆಲ್ಲರೂ ಸಾಗಬೇಕು ಎಂದು ಅವರು ಕರೆ ನೀಡಿದರು.
30 ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ಎಲ್ ನಾಗೇಂದ್ರ,ಪ್ರಧಾನ ಕಾರ್ಯದರ್ಶಿ ಬಿ ಎಂ ರಘು,ಮಹಿಳಾ ಮೋರ್ಚಾ ಅಧ್ಯಕ್ಷರಾದ ರೇಣುಕಾ ರಾಜ್,ಬಿಜೆಪಿ ವೈದ್ಯಕೀಯ ಪ್ರಕೋಸ್ಟ ಸಂಚಾಲಕರಾದ ಗಿರೀಶ್,ಚಾಮರಾಜ ಕ್ಷೇತ್ರದ ಅಧ್ಯಕ್ಷರಾದ ದಿನೇಶ್ ಗೌಡ,ಪ್ರಧಾನ ಕಾರ್ಯದರ್ಶಿ ದಾಸ್ ಪ್ರಕಾಶ್, ಮಾಜಿನಗರಪಾಲಿಕ ಸದಸ್ಯರಾದ ರಂಗಸ್ವಾಮಿ, ಕೇಬಲ್ ವಿಜಿ, ಕುಮಾರ್ ಗೌಡ, ಸೂರಜ್, ಸದಾಶಿವ್, ದಾರಿಪುರ ಚಂದ್ರಶೇಖರ್,ಅರವಿಂದ್, ಹಾಗೂ ಇನ್ನಿತರರು ಹಾಜರಿದ್ದರು.
————ಮಧುಕುಮಾರ್