ಮೂಡಿಗೆರೆ:ಸುಮಾರು 20 ವರ್ಷದಿಂದ ಕೆ.ಪಿ.ಟಿ.ಸಿ.ಎಲ್ ಹೊರ ಗುತ್ತಿಗೆ ನೌಕರರಾಗಿ ಸೇವೆ ಸಲ್ಲಿಸುತ್ತಿರುವವರನ್ನು ಖಾಯಂ ಗೊಳಿಸದೆ ಅವರ ಜಾಗಕ್ಕೆ ಬೇರೆಯವರನ್ನು ನೇಮಿಸಿಕೊಳ್ಳಲು ಅಧಿಕಾರಿಗಳು ಹುನ್ನಾರ ನಡೆಸುತ್ತಿದ್ದಾರೆಂದು ರಾಜ್ಯ ಕೆ.ಪಿ.ಟಿ.ಸಿ.ಎಲ್ ಹೊರ ಗುತ್ತಿಗೆ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಭರತ್ ದೂರಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ರಾಜ್ಯ ಕೆ.ಪಿ.ಟಿ.ಸಿ.ಎಲ್ ಹೊರಗುತ್ತಿಗೆ ನೌಕರರ ಒಕ್ಕೂಟದ ನೂತನ ತಾಲೂಕು ಸಮಿತಿಗೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯ ಸರ್ಕಾರ ಈಗಾಗಲೇ ಹೊರಗುತ್ತಿಗೆ ನೌಕರರನ್ನು ಖಾಯಂ ಮಾಡುವoತೆ ಆದೇಶ ಹೊರಡಿಸಿದೆ.ಆದರೆ ಗುತ್ತಿಗೆದಾರರು ಮತ್ತು ಕೆಲ ಅಧಿಕಾರಿಗಳು ಕೆಲಸದ ಅನುಭವವಿರುವ ನೌಕರರನ್ನು ಆಯ್ಕೆ ಪ್ರಕ್ರಿಯೆಯಿಂದ ಹೊರಗಿಟ್ಟಿದ್ದಾರೆ.
ಗುತ್ತಿಗೆ ಆಧಾರದಿಂದ ನೇಮಕಗೊಂಡವರನ್ನು 5ವರ್ಷ ಮಾತ್ರ ದುಡಿಸಿಕೊಂಡು ನಂತರ ಅವರನ್ನು ಕೈಬಿಟ್ಟು ತಮಗೆ ಬೇಕಾದ ನೌಕರರಿಗೆ ಖಾಯಂ ಮಾಡಲು ಸಂಚು ರೂಪಿಸಲಾಗಿದೆ ಎಂದು ಆರೋಪಿಸಿದರು.
ನೈಜ ನೌಕರರಿಗೆ ಕೆಲಸ ಖಾಯಂಗೊಳಿಸುವ ಉದ್ದೇಶದಿಂದ ಮತ್ತು ಸರಕಾರಕ್ಕೆ ಗುತ್ತಿಗೆದಾರರಿಂದಾಗುವ ಹೊರೆಯನ್ನು ತಪ್ಪಿಸುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಪಿಟಿಸಿಎಲ್ ಗುತ್ತಿಗೆ ನೌಕರರನ್ನು ಖಾಯಂ ಮಾಡಲು ಹೊರಟಿರುವುದು ಉತ್ತಮ ನಡೆಯಾಗಿದೆ.ಅದರ ವಿರುದ್ಧ ಕೆಲಸ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಹೋರಾಟದ ಮೂಲಕ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಈಗ ತಾಲೂಕು ಸಮಿತಿ ರಚಿಸಲಾಗಿದೆ.ತಾಲೂಕಿನ ಕೆಪಿಟಿಸಿಎಲ್‌ನಲ್ಲಿ 67 ನೌಕರರು ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ತಾಲೂಕು ಸಮಿತಿ ನೂತನ ಅಧ್ಯಕ್ಷರನ್ನಾಗಿ ಕಿರುಗುಂದ ಕೆ.ಕೆ.ಚಂದ್ರಪ್ಪ,ಗೌರವಾಧ್ಯಕ್ಷರಾಗಿ ಜಿ.ಸಿ.ಪ್ರವೀಣ್ ಕುಮಾರ್, ಉಪಾಧ್ಯಕ್ಷರಾಗಿ ಹೆಚ್.ಅಶೋಕ್,ಬಿ.ಟಿ.ಶಂಕರ್, ಪ್ರಧಾನ ಕಾರ್ಯದರ್ಶಿಯಾಗಿ ಆರ್.ಆನಂದ್‌ರಾವ್, ಎಂ.ಹೆಚ್.ಶಶಿ,ಮಾರ್ಕಲ್ ಚಂದ್ರೇಶ್, ಸಹ ಕಾರ್ಯದರ್ಶಿಯಾಗಿ ಆರ್.ನಾಗೇಶ್, ಎಸ್.ಕೆ.ಮಹೇಶ್,ಸಂಘಟನಾ ಕಾರ್ಯದರ್ಶಿಯಾಗಿ ಎ.ಎನ್.ಸವಿನ್,ಕೆ.ಎಲ್.ಪಾಲಕ್ಷ, ರಜತ್, ಖಜಾಂಚಿಕೆ.ಎನ್.ಸತೀಶ್,ಪದಾಧಿಕಾರಿಗಳನ್ನಾಗಿ ಎಸ್.ಇಂದ್ರೇಶ್, ಹೆಚ್.ಎಂ.ಆದರ್ಶ, ಪ್ರವೀಣ್ ಬಕ್ಕಿ,ಸದಸ್ಯರಾದ ಹೊನ್ನಯ್ಯ, ಸಂತೋಷ್, ಕೃಷ್ಣಪ್ಪ ರನ್ನು ಇದೆ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು.
……….ವರದಿ:ವಿಜಯಕುಮಾರ್, ಮೂಡಿಗೆರೆ