ಕೆ.ಆರ್.ಪೇಟೆ: ಪಟ್ಟಣದ ಹೇಮಾವತಿ ಬಡಾವಣೆಯಲ್ಲಿರುವ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕೆ.ಪುರುಷೋತ್ತಮ್, ಉಪಾಧ್ಯಕ್ಷರಾಗಿ ಕೋಮಲಾ ಮಂಜೇಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನ ಬಯಸಿ ಕೆ.ಪುರುಷೋತ್ತಮ್, ಉಪಾಧ್ಯಕ್ಷ ಬಯಸಿ ಕೋಮಲಾ ಮಂಜೇಗೌಡ ಅವರನ್ನು ಹೊರತು ಪಡಿಸಿ ಬೇರೆ ಯಾವುದೇ ನಿರ್ದೇಶಕರು ನಾಮಪತ್ರ ಸಲ್ಲಿಸದೇ ಇರುವ ಕಾರಣ ಅಧ್ಯಕ್ಷರಾಗಿ ಪುರುಷೋತ್ತಮ್, ಉಪಾಧ್ಯಕ್ಷರಾಗಿ ಕೋಮಲಾ ಮಂಜೇಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಾಲ್ಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಹೆಚ್.ಬಿ.ಭರತ್‌ಕುಮಾರ್ ಘೋಷಣೆ ಮಾಡಿದರು. ಸಹ ಚುನಾವಣಾಧಿಕಾರಿಯಾಗಿ ಸಂಘದ ಸಿಇಓ ಬಿ.ಎನ್.ಕಾಂತರಾಜು ಕಾರ್ಯನಿರ್ವಹಣೆ ಮಾಡಿದರು.
ನಾಲ್ಕನೇ ಭಾರಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಕಾಂಗ್ರೆಸ್-ಬಿಜೆಪಿ ಮೈತ್ರಿ ಕೂಟದ ಅಭ್ಯರ್ಥಿ ಕೆ.ಪುರುಷೋತ್ತಮ್ ಮತ್ತು ಉಪಾಧ್ಯಕ್ಷರಾಗಿ ಮೊದಲ ಭಾರಿಗೆ ಅವಿರೋಧ ಆಯ್ಕೆಯಾಗಿರುವ ಕೋಮಲಾ ಮಂಜೇಗೌಡ ಅವರನ್ನು ಸಂಘದ ನಿರ್ದೇಶಕರಾದ ಕೆ.ಟಿ.ಚಕ್ರಪಾಣಿ, ಥಿಯೇಟರ್ ಚಂದ್ರಣ್ಣ, ರಾಜಾನಾಯಕ್, ಕೆ.ಎನ್.ಕಾಳೇಗೌಡ, ನಂದೀಶ್, ಹಿರೀಕಳಲೆ ಬಲರಾಂ, ತೇಗನಹಳ್ಳಿ ಟಿ.ಜೆ.ನಾಗೇಶ್, ಗಂಗನಹಳ್ಳಿ ಗಂಗಾದೇವಿ, ಹಿರೀಕಳಲೆ ಹೆಚ್.ಜೆ.ಸೋಮಶೇಖರ್, ಯೋಗನಿಂಗಯ್ಯ, ಸಂಘದ ಮೇಲ್ವಿಚಾರಕ ರಾಘವೇಂದ್ರ, ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಆರ್.ರವೀಂದ್ರಬಾಬು, ಪುರಸಭೆಯ ಮಾಜಿ ಅಧ್ಯಕ್ಷ ಚಂದ್ರೇಗೌಡ, ಮಾಜಿ ಪುರಸಭಾ ಸದಸ್ಯರಾದ ಕೆ.ವಿನೋದ್‌ಕುಮಾರ್, ಪಿ.ಎಲ್.ಡಿ.ಬ್ಯಾಂಕ್ ಮಾಜಿ ನಿರ್ದೇಶಕ ಸಿ.ಎನ್.ಮಂಜೇಗೌಡ, ತಾ.ಪಂ.ಮಾಜಿ ಸದಸ್ಯರಾದ ಹೀರೀಕಳಲೆ ಮಂಜುನಾಥ್, ಸಣ್ಣನಿಂಗೇಗೌಡ ಮತ್ತಿತರರು ಉಪಸ್ಥಿತರಿದ್ದು ಅಭಿನಂದಿಸಿದರು.

ನೂತನ ಅಧ್ಯಕ್ಷ ಕೆ.ಪುರುಷೋತ್ತಮ್ ಮಾತನಾಡಿ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸತತ ನಾಲ್ಕನೇ ಭಾರಿಗೂ ಅವಿರೋಧ ಆಯ್ಕೆ ಮಾಡಿದ ಸಂಘದ ಎಲ್ಲಾ ನಿರ್ದೇಶಕರುಗಳಿಗೆ ಹಾಗೂ ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ಶ್ರೀನಿವಾಸ್ ಮತ್ತಿತರ ಮುಖಂಡರಿಗೆ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು. ಸಂಘದ ಅಭಿವೃದ್ಧಿಗೆ ಮತ್ತಷ್ಟು ಕ್ರಿಯಾಶೀಲವಾಗಿ, ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು.
– ಶ್ರೀನಿವಾಸ್ ಆರ್.