ಕೆ.ಆರ್.ಪೇಟೆ: ಶ್ರೀಚೌಡೇಶ್ವರಿ ದೇವಾಲಯದ 9ನೇ ವಾರ್ಷಿಕೋತ್ಸವ ಭಕ್ತಿಭಾವದಿಂದ ಆಚರಣೆ – ವಿಶೇಷ ಹೋಮ, ಹವನ, ಪೂಜೆ ಆಕರ್ಷಣೆ

ಕೆ.ಆರ್.ಪೇಟೆ: ಶ್ರೀಚೌಡೇಶ್ವರಿ ಅಮ್ಮನವರ ದೇವಾಲಯದ 9ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ದೇವಿಗೆ ಅಭಿಷೇಕ, ಹೋಮ ಹವನಗಳು, ಪ್ರಾಕಾರೋತ್ಸವ ಹಾಗೂ ವಿಶೇಷ ಪೂಜೆ ಪುರಸ್ಕಾರಗಳು ಶ್ರದ್ಧಾ ಭಕ್ತಿಯಿಂದ ನಡೆದವು..

ಕೆ.ಆರ್.ಪೇಟೆ ಪಟ್ಟಣದ ಹೊರವಲಯದ ಹೇಮಗಿರಿ ರಸ್ತೆಯಲ್ಲಿರುವ ಶ್ರೀಚೌಡೇಶ್ವರಿ ಅಮ್ಮನವರ ದೇವಾಲಯದ 9ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ದೇವಿಗೆ ಅಭಿಷೇಕ, ಹೋಮ ಹವನಗಳು, ಪ್ರಾಕಾರೋತ್ಸವ ಹಾಗೂ ವಿಶೇಷ ಪೂಜೆ ಪುರಸ್ಕಾರಗಳು ಶ್ರದ್ಧಾ ಭಕ್ತಿಯಿಂದ ನಡೆದವು.
ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ಶ್ರೀ ಚಂಡಿಕಾ ಹೋಮ ಸೇರಿದಂತೆ ವಿಶೇಷ ಪೂಜೆ ಪುರಸ್ಕಾರಗಳು ನಡೆದವು.

ದೇವಾಲಯ ಅಭಿವೃದ್ಧಿ ವ್ಯವಸ್ಥಾಪನಾ ಸಮಿತಿಯ ಗೌರವಾಧ್ಯಕ್ಷ ಡಾ. ಕೆ.ಆರ್.ನಾಗರಾಜಶೆಟ್ಟಿ ಮಾತನಾಡಿ ದೇವಾಲಯಗಳು ನಮ್ಮ ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುವ ಜೀವಂತ ಸ್ಮಾರಕಗಳಾಗಿವೆ. ಇಂದಿನ ಒತ್ತಡದ ಬದುಕಿನಲ್ಲಿ ಸ್ವಲ್ಪ ಸಮಯ ಬಿಡುವು ಮಾಡಿ ಕೊಂಡು ದೇವಾಲಯಕ್ಕೆ ಭೇಟಿ ನೀಡಿ ಭಗವಂತನ ಪ್ರಾರ್ಥನೆ ಮಾಡಿದರೆ ಸಾಕು ಮನಸ್ಸಿಗೆ ಶಾಂತಿ ನೆಮ್ಮದಿಯು ದೊರೆಯುವ ಜೊತೆಗೆ ಕೈಹಿಡಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕೂಡಾ ಲಭಿಸುತ್ತದೆ. ಆದ್ದರಿಂದ ಸಾಧನೆ ಮಾಡಲು ಕಷ್ಟವಾದರೂ ನ್ಯಾಯ, ನೀತಿ ಹಾಗೂ ಧರ್ಮದ ಮಾರ್ಗದಲ್ಲಿಯೇ ಸಾಗಿ ಗುರಿ ಮುಟ್ಟೋಣ ಎಂದು ನಾಗರಾಜ ಶೆಟ್ಟಿ ಮನವಿ ಮಾಡಿದರು.

ದೇವಾಲಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಹೊನ್ನಾವರ ಚಂದ್ರಶೇಖರ್, ಪದಾಧಿಕಾರಿಗಳಾದ ಶ್ರೀರಂಗಪಟ್ಟಣ ಕುಮಾರಸ್ವಾಮಿ, ವಿದ್ಯಾರ್ಥಿ ಭಂಡಾರ್ ಸುರೇಶ್, ಕೆ.ಹೆಚ್ ಆರ್ ಚಂದ್ರಶೇಖರ್, ಮಾರಿಗುಡಿ ಚಂದ್ರಶೇಖರ್, ಮಧುಸೂದನ್, ಕೆ.ಸಿ.ವಾಸು, ಕೆ.ಹೆಚ್.ಗೋಪಾಲ್, ಪೊಲೀಸ್ ಮಾದಯ್ಯ, ಪರಿಮಳ ನಾಗರಾಜ್ ಶೆಟ್ಟಿ, ದಾನಿಗಳಾದ ಜಯಪದ್ಮ, ನಾಗರತ್ನಮ್ಮ, ಶಾರದಾ, ಚಂದ್ರಕಲಾ ರಮೇಶ್, ಕೆ.ಆರ್.ಮಹೇಶ್, ಕೆ.ಆರ್.ಪುಟ್ಟಸ್ವಾಮಿ, ಹಂಸ ರಮೇಶ್, ಕೆ.ಹೆಚ್.ರಾಮಕೃಷ್ಣ ಸೇರಿದಂತೆ ನೂರಾರು ಜನರು ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದರು.


ದೇವಾಲಯದ ಪ್ರಧಾನ ಅರ್ಚಕರಾದ ವೇದಬ್ರಹ್ಮ ಶ್ರೀ ರವಿಚಂದ್ರ ಅವರು ಪೂಜಾ ವಿಧಿ ವಿಧಾನಗಳ ನೇತೃತ್ವ ವಹಿಸಿದ್ದರು.

– ಶ್ರೀನಿವಾಸ್‌ ಆರ್.

Leave a Reply

Your email address will not be published. Required fields are marked *

× How can I help you?