ಕೆ.ಆರ್.ಪೇಟೆ-ಇತ್ತೀಚೆಗಷ್ಟೇ ಅಧಿಕಾರ ಸ್ವೀಕಾರ ಮಾಡಿದ್ದೇನೆ.ಸದ್ಯದಲ್ಲಿಯೇ ಗ್ಯಾರಂಟಿ ಯೋಜನೆಗಳ ಪಟ್ಟಿ ಪಡೆದು ಹೋಬಳಿವಾರು, ಪಂಚಾಯಿತಿವಾರು, ಫಲಾನುಭವಿಗಳ ಸಮಾವೇಶ ನಡೆಸಲು ಕಾರ್ಯಚಟುವಟಿಕೆ ರೂಪಿಸಲಾಗುವುದು.ನಮ್ಮ ಗ್ಯಾರಂಟಿ ಯೋಜನೆಯ ಫಲಾನುಭಗಳಿಗೆ ಯೋಜನೆಯಲ್ಲಿ ಲೋಪವಿದ್ದಲ್ಲಿ ತಾಲ್ಲೂಕು ಪಂಚಾಯಿತಿ ಕಟ್ಟಡದಲ್ಲಿರುವ ನಮ್ಮ ಕಚೇರಿಯನ್ನು ಬೇಟಿ ಮಾಡಿ ತಿಳಿಸಿದರೆ ಅದನ್ನು ಬಗೆಹರಿಸಿಕೊಡಲಾಗುವುದು ಎಂದು ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲ್ಲೂಕು ಘಟಕದ ನೂತನ ಅಧ್ಯಕ್ಷರಾದ ಎ.ಬಿ.ಕುಮಾರ್ ಮನವಿ ಮಾಡಿದರು.
ಹುಟ್ಟೂರಿನ ಜನತೆ ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು,ಯಾವುದೇ ಒಬ್ಬ ಸಾಧಕನಿಗೆ ಎಲ್ಲಿ ಎಷ್ಟೇ ಸನ್ಮಾನ ಮಾಡಿದರೂ, ತವರಿನಲ್ಲಿ ಸನ್ಮಾನ ದೊರೆತರೆ ಮಾತ್ರ ಹೆಚ್ಚಿನ ಸಂತೋಷವಾಗುತ್ತದೆ.ಅದೇ ರೀತಿ ನನಗೆ ನನ್ನ ಹುಟ್ಟೂರು ಅಗ್ರಹಾರಬಾಚಹಳ್ಳಿ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಸೇರಿ ಸನ್ಮಾನ ಮಾಡಿರುವುದು ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ನನಗೆ ಸಿಕ್ಕಿರುವ ಅಧಿಕಾರದ ಅವಧಿಯಲ್ಲಿ ನನ್ನ ಹುಟ್ಟೂರು ಅಗ್ರಹಾರಬಾಚಹಳ್ಳಿ ಸೇರಿದಂತೆ ತಾಲ್ಲೂಕಿನ ಎಲ್ಲಾ ಗ್ರಾಮಗಳ ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ಮಾಡಬಹುದಾದ ಒಳ್ಳೆಯ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಿಕೊಡುವ ಮೂಲಕ ನನ್ನ ಮೇಲೆ ವಿಶ್ವಾಸವಿಟ್ಟು ನನಗೆ ಅಧಿಕಾರ ನೀಡಿರುವ ರಾಜ್ಯ ಸರ್ಕಾರಕ್ಕೆ ಹಾಗೂ ಎಲ್ಲಾ ಕಾಂಗ್ರೆಸ್ ಮುಖಂಡರ ವಿಶ್ವಾಸಕ್ಕೆ ಪಾತ್ರನಾಗುತ್ತೇನೆ ಎಂದು ಭರವಸೆ ನೀಡಿದರು.
ಗ್ರಾಮದ ಗ್ರಾಮದೇವತೆ ಶ್ರೀ ಲಕ್ಷ್ಮಿ ದೇವಮ್ಮನವರ ದೇವಾಲಯದ ಆವರಣದಲ್ಲಿ ಎ.ಬಿ.ಕುಮಾರ್ ಅವರಿಗೆ ತವರೂರಿನ ನೂರಾರು ಜನತೆ ಹೃದಯ ಸ್ಪರ್ಶಿ ಸನ್ಮಾನ ಮಾಡಿ ತಾಲೂಕು ಮಟ್ಟದಲ್ಲಿ ತಮ್ಮೂರಿನ ಮಗನ ಸಾಧನೆಯನ್ನು ಕೊಂಡಾಡಿದರು.ತಮ್ಮ ಊರಿನ ಸುಪುತ್ರನಿಗೆ ಸರ್ಕಾರದ ಗ್ಯಾರಂಟಿ ಯೋಜನೆಗಳ ತಾಲ್ಲೂಕು ಘಟಕ ಅಧ್ಯಕ್ಷರಾಗಿ ನೇಮಕ ಮಾಡಿದ್ದಕ್ಕೆ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷದ ರಾಜ್ಯ ಮಟ್ಟದ ನಾಯಕರು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಮುಖಂಡರಿಗೆ ಧನ್ಯವಾದಗಳನ್ನು ತಿಳಿಸಿದ ಗ್ರಾಮಸ್ಥರು ಎ.ಬಿ.ಕುಮಾರ್ ಅವರಿಗೆ ಮೈಸೂರು ಪೇಟ ತೊಡಿಸಿ, ಹೂವಿನ ಹಾರ ಹಾಕಿ, ಪಟಾಕಿ ಸಿಡಿಸಿ, ಸಿಹಿ ತಿನಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ವಿ.ಎಸ್.ಎಸ್.ಎನ್ ಬ್ಯಾಂಕ್ ನಿರ್ದೇಶಕ ಎ.ಬಿ.ಮಹೇಂದ್ರ, ಡಾ.ಎ.ಪಿ.ರತೀಶ್‌ಕುಮಾರ್, ಗ್ರಾ.ಪಂ.ಮಾಜಿ ಸದಸ್ಯ ಎ.ಸಿ.ಮುರುಳಿ, ಎ.ಕೆ.ಸುನಿಲ್,ಎ.ವಿ.ಕೃಷ್ಣ, ಯಜಮಾನ್ ಲಾಳಿ ಬೋರೇಗೌಡ, ಸಂತೋಷ್, ಛರ‍್ಮನ್.ಎಸ್.ಮಂಜುನಾಥ್, ಸೋಮಶೇಖರ್, ಗಾಡಿ ಪುಟ್ಟಪ್ಪನ ರವಿ, ನಿಶಾಂತ್ ಪಟೇಲ್ ,ಎ.ಎಸ್.ಧನೇಂದ್ರ, ಬಿ.ವಿ.ಕುಮಾರ್, ಮಿಲ್ ಶ್ರೀಕಂಠೇಗೌಡ, ಮಾಟಣ್ಣನ ನಾಗರಾಜು, ಕೇಬಲ್ ಮಧು, ಗ್ರಾ.ಪಂ.ಶ್ರೀನಿವಾಸ್, ತಿಮ್ಮಣ್ಣನ ಶ್ರೀನಿವಾಸ್, ಬೋರೇಗೌಡ(ಆಲಿ), ಅರೆಕಲ್ಲಟ್ಟಿ ಮಂಜೇಗೌಡ ಸೇರಿದಂತೆ ನೂರಾರು ಮಂದಿ ಗ್ರಾಮಸ್ಥರು ಉಪಸ್ಥಿತರಿದ್ದರು.
———–ಶ್ರೀನಿವಾಸ್ ಕೆ.ಆರ್ ಪೇಟೆ