ಕೆ.ಆರ್.ಪೇಟೆ-ಆಚಾರ್ಯ ವಿದ್ಯಾ ಶಾಲೆ-ಮಕ್ಕಳಿಗಾಗಿ ಮಕ್ಕಳ ಸಂತೆ ಹಾಗೂ ಆಹಾರ ಮೇಳ ಕಾರ್ಯಕ್ರಮ

ಕೆ.ಆರ್.ಪೇಟೆ-ಪಟ್ಟಣದ ಹೊರವಲಯದ ಜಯಮ್ಮ-ರಾಮಸ್ವಾಮಿ ಸಮುದಾಯ ಭವನದಲ್ಲಿ ಆಚಾರ್ಯ ವಿದ್ಯಾ ಶಾಲೆಯ ವತಿಯಿಂದ ಮಕ್ಕಳಿಗಾಗಿ ಮಕ್ಕಳ ಸಂತೆ ಹಾಗೂ ಆಹಾರ ಮೇಳ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು.

ಅದ್ದೂರಿಯಾಗಿ ನಡೆದ ಆಚಾರ್ಯ ಶಾಲಾ ಉತ್ಸವ, ಮಕ್ಕಳ ಸಂತೆಯಲ್ಲಿ ಭರ್ಜರಿ ವ್ಯಾಪಾರ ವ್ಯವಹಾರ ನಡೆಸಿದ ವಿದ್ಯಾರ್ಥಿಗಳೊಂದಿಗೆ ಪೋಷಕರು ಭಾಗವಹಿಸಿ ತಮ್ಮ ಮಕ್ಕಳಿಗೆ ಪ್ರತಿಭೆ ಮತ್ತು ವ್ಯವಹಾರದ ಜಾಣ್ಮೆ ನೋಡಿ ಸಂತಸ ಪಟ್ಟರು.

ಆಚಾರ್ಯ ಶಾಲೆಯ ವ್ಯವಸ್ಥಾಪಕರಾದ ತಬ್ರೇಜ್ ನದಿಮ್, ಪ್ರಾಂಶುಪಾಲರಾದ ಹುಧಾ ಫಾತಿಮಾ ಡೆಲ್ವಿ ಅವರು ಆಚಾರ್ಯ ಶಾಲಾ ಉತ್ಸವ ಕಾರ್ಯಕ್ರಮ ಉದ್ಘಾಟನೆ ಮಾಡಿ ನೆರೆದಿದ್ದ ಪೋಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರನ್ನು ಉದ್ಧೇಶಿಸಿ ಮಾತನಾಡಿ, ಈ ಕಾರ್ಯಕ್ರಮದಲ್ಲಿ ಪೋಷಕರು ತಮ್ಮ ಮಕ್ಕಳೊಂದಿಗೆ ಸಂಭ್ರಮದಿoದ ಭಾಗವಹಿಸಿದ್ದಾರೆ. ಮಕ್ಕಳು ತಾವು ತಂದಿದ್ದ ತಿಂಡಿ ತಿನಿಸುಗಳು, ಕಾಯಿಪಲ್ಲೆ, ತರಕಾರಿ ಮುಂತಾದ ವಸ್ತುಗಳನ್ನು ಸಂತೆಯಲ್ಲಿ ಪೈಪೋಟಿಯ ಮೇರೆಗೆ ವ್ಯಾಪಾರ ಮಾಡಿ ಕೈತುಂಬಾ ಲಾಭಗಳಿಸಿದ್ದಾರೆ. ದೈನಂದಿನ ಬದುಕಿನಲ್ಲಿ ಹಣದ ಮಹತ್ವ, ಲಾಭ ನಷ್ಟದ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸಿ ತಿಳುವಳಿಕೆಯನ್ನು ವಿಸ್ತಾರಗೊ ಳಿಸಿದ ಮಕ್ಕಳ ಸಂತೆಯಿoದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಗೊಂಡಿದೆ ಹಾಗೂ ವ್ಯವಹಾರ ಜಾಣ್ಮೆಯು ಜಾಗೃತವಾಗಿದೆ ಎಂದು ಅಭಿಮಾನದಿಂದ ಹೇಳಿದರು.

ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷರಾದ ಹಿರಿಯ ಮುಖಂಡ ನಾಯಕನಹಳ್ಳಿ ನಂಜಪ್ಪ, ಪುರಸಭೆ ಮುಖ್ಯಾಧಿಕಾರಿ ನಟರಾಜ್, ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಎ.ಸಿ.ದಿವಿಕುಮಾರ್, ಪುರಸಭೆ ಮಾಜಿ ಸದಸ್ಯ ಕೆ.ಆರ್.ನೀಲಕಂಠ, ಶಾಲೆಯ ಆಡಳಿತಾಧಿಕಾರಿ ಕೆ.ಎಸ್.ನಾಗೇಶ್‌ಬಾಬು ಸೇರಿದಂತೆ ಮಕ್ಕಳ ನೂರಾರು ಪೋಷಕರು ಆಚಾರ್ಯ ಉತ್ಸವ ಹಾಗೂ ಮಕ್ಕಳ ಸಂತೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು.

———–—–ಶ್ರೀನಿವಾಸ್ ಆರ್

Leave a Reply

Your email address will not be published. Required fields are marked *

× How can I help you?