ಕೆ.ಆರ್.ಪೇಟೆ-ಅಘಲಯ ಶ್ರೀ ಭೈರವೇಶ್ವರ ಸ್ವಾಮಿಯ ಭೈರವಾಷ್ಟಮಿ-ವಿಶೇಷ ಪೂಜೆ,ಅನ್ನದಾನ-ಸಾವಿರಾರು ಭಕ್ತಾದಿಗಳು ಬಾಗಿ

ಕೆ.ಆರ್.ಪೇಟೆ-ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಅಘಲಯ ಗ್ರಾಮದಲ್ಲಿ ಶ್ರೀ ಭೈರವೇಶ್ವರ ದೇವಾಲಯದಲ್ಲಿ ಭೈರವಾಷ್ಟಮಿ ಅಂಗವಾಗಿ ವಿಶೇಷ ಪೂಜೆ, ಹೋಮ, ಹವನ, ಮಹಾಮಂಗಳಾರತಿ, ಅನ್ನಧಾನ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ನಡೆದವು.

ಅಘಲಯ ಗ್ರಾಮದ ಕೆರೆ ಬಳಿ ಇರುವ ಶ್ರೀ ಭೈರವೇಶ್ವರ ಸ್ವಾಮಿಯ ದೇವಾಲಯದಲ್ಲಿ ಭೈರವಾಷ್ಠಮಿ ಅಂಗವಾಗಿ ಅಷ್ಟ ಭೈರವೇಶ್ಚರ ಸ್ವಾಮಿಯ ಪ್ರತಿಷ್ಠಾಪನೆ ಮಾಡಿ ಹೋಮ, ಹವನ ನಡೆಸಿ ವಿಶೇಷ ಪೂಜೆ ಸಲ್ಲಿಸಿ ಬೆಳಿಗ್ಗೆ 7ಗಂಟೆಯಿ0ದ ಸಂಜೆಯವರೆವಿಗೂ ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

ಪ್ರಧಾನ ಅರ್ಚಕ ವೇದಮೂರ್ತಿ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ಬೆಳಿಗ್ಗೆ ಸಂಜೆಯವರೆವಿಗೂ ನಡೆದವು. ಅಘಲಯ, ದೊಡ್ಡಸೋಮನಹಳ್ಳಿ, ಚಿಕ್ಕಸೋಮನಹಳ್ಳಿ, ಮಾಳಗೂರು, ನಾಯಸಿಂಗನಹಳ್ಳಿ, ನಾಗಮಂಗಲ ತಾಲ್ಲೂಕಿನ ಬೆಟ್ಟದಮಲ್ಲೇನಹಳ್ಳಿ, ಗಂಗನಹಳ್ಳಿ, ಕುಪ್ಪಳ್ಳಿ, ಕಾರಳ್ಳಿ, ಗಂಗಸಮುದ್ರ, ಅಳಪಳ್ಳಿ, ಚೀಣ್ಯ ಸುಮಾರು 40 ಗ್ರಾಮಗಳ ಸಾವಿರಾರು ಭಕ್ತಾದಿಗಳು ಸೇರಿದಂತೆ ಅಘಲಯ ಗ್ರಾಮದ ಶಿವನಂಜೇಗೌಡ, ಸಿದ್ದೇಗೌಡ, ಎ.ಎಸ್.ಗಣೇಶ್, ಎ.ಎಸ್.ಶ್ರೀಧರ್, ಜಾನಕೀರಾಂ, ಎ.ಎಸ್.ರಮೇಶ್, ಹೋಬಳಿ ಲೋಕೇಶ್, ಮಂಜುನಾಥ್, ವಿಶ್ವನಾಥ್, ಎಸ್.ಆರ್.ಮಂಜುನಾಥ್, ಲಕ್ಷ್ಮೀಶ್, ಲೋಹಿತ್, ಪ್ರತಾಪ್ ಸೇರಿದಂತೆ ಸಾವಿರಾರು ಭಕ್ತಾದಿಗಳು ಶ್ರೀ ಭೈರವೇಶ್ವರ ಸ್ವಾಮೀಯ ಜನ್ಮಾಷ್ಠಮಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರಧಾನ ಅರ್ಚಕ ವೇದಮೂರ್ತಿ ಭಕ್ತಾಧಿಗಳನ್ನು ಕುರಿತು ಮಾತನಾಡಿ, ದೇವಾಲಯಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿವೆ. ದೇವನೊಬ್ಬ ನಾಮ ಹಲವು ಎನ್ನುವಂತೆ ದೇವರಿಗೆ ಜಾತಿ ಇಲ್ಲ. ನಿಜವಾದ ಭಕ್ತಿಯಿದ್ದರೆ ಸಾಕು. ನಮ್ಮ ಮನಸ್ಸಿಗೆ ಸಮಾಧಾನ ತರುವ ಕೆಲಸವನ್ನು ದೇವಾಲಯಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅನುಭವವಾಗುತ್ತಿದೆ. ಮನುಷ್ಯನಿಗೆ ಬೇಕಾದ ಶಾಂತಿ-ನೆಮ್ಮದಿಯು ಯಾವುದೇ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ. ದೇವಸ್ಥಾನಕ್ಕೆ ತೆರಳಿ ಭಕ್ತಿಯಿಂದ ದೇವರ ನಮಿಸಿ ಧ್ಯಾನ ಮಾಡುವುದರಿಂದ, ಬಡವರಿಗೆ ಕೈಲಾದ ನೆರವು ನೀಡುವುದರಿಂದ, ತಂದೆ-ತಾಯಿಗಳನ್ನು ಸಾಕುವುದರಿಂದ ನಾವು ಶಾಂತಿ-ನೆಮ್ಮದಿಯನ್ನು ಪಡೆದುಕೊಳ್ಳಬಹುದು. ಹಾಗಾಗಿ ಪ್ರತಿಯೊಬ್ಬರೂ ಧಾರ್ಮಿಕ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ದಾನ-ಧರ್ಮದ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಭಕ್ತಾಧಿಗಳಿಗೆ ಶ್ರೀ ಭೈರವಾಷ್ಟಮಿ ಪೂಜಾ ಸಮಿತಿಯ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

——-ಶ್ರೀನಿವಾಸ್ ಆರ್

Leave a Reply

Your email address will not be published. Required fields are marked *

× How can I help you?