ಕೆ.ಆರ್.ಪೇಟೆ-ಅಗ್ರಹಾರಬಾಚಹಳ್ಳಿ ಅಶೋಕ್ ನೂತನ ಸಹಕಾರ ಸಂಘದ ಅಧ್ಯಕ್ಷರಿಗೆ ಸನ್ಮಾನ – ರೈತರಿಗೆ ಶೂನ್ಯ ಬಡ್ಡಿ ಸಾಲ ಸೌಲಭ್ಯಕ್ಕೆ ಒತ್ತಾಯ

ಕೆ.ಆರ್.ಪೇಟೆ: ತಾಲ್ಲೂಕಿನ ಅಗ್ರಹಾರಬಾಚಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಗ್ರಹಾರಬಾಚಹಳ್ಳಿ ಅಶೋಕ್ ಮತ್ತು ನಿರ್ದೇಶಕರನ್ನು ಅಗ್ರಹಾರಬಾಚಹಳ್ಳಿ ಗ್ರಾಮದಲ್ಲಿ ಗ್ರಾಮದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಸಂಘದ ನೂತನ ನಿರ್ದೇಶಕರಾದ ಚಂದ್ರೇಗೌಡ, ರಾಧಾ ಮಹೇಶ್, ಚಿಕ್ಕೋಸಹಳ್ಳಿ ಸುರೇಶ್, ಪಾರ್ವತಮ್ಮ, ಚಿಲ್ಲದಹಳ್ಳಿ ‌ಮಣಿಯಮ್ಮ, ಚೆಲುವರಾಜೇಗೌಡ ಅವರುಗಳನ್ನು ಸನ್ಮಾನಿಸಿ‌, ಗೌರವಿಸುವ ಮೂಲಕ ಸಂಘದ ಮೂಲಕ ಸಂಘದ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಶೇರುದಾರರಿಗೆ ಶೂನ್ಯ ಬಡ್ಡಿ ದರದ ಸಾಲ ಸೌಲಭ್ಯ ದೊರಕಿಸಿಕೊಡುವಂತೆ ಮನವಿ‌ ಮಾಡಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಸಿ.ದಿವಿಕುಮಾರ್ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷ ಅಶೋಕ್ ಅವರಿಗೆ ಮೈಸೂರು ಪೇಟ ತೊಡಿಸಿ ಸನ್ಮಾನಿಸಿ ಗೌರವಿಸಿ ಮಾತನಾಡಿ, ಸಹಕಾರ ಸಂಘಗಳು ರೈತರ ಜೀವನಾಡಿಯಾಗಿವೆ. ಸಂಘದಲ್ಲಿ ಶೇರುದಾರರಾಗಿರುವ ಎಲ್ಲಾ ರೈತರಿಗೂ ಸಾಲ ಸೌಲಭ್ಯ ಒದಗಿಸಿಕೊಡಲು ಅಧ್ಯಕ್ಷರು ಮತ್ತು ನಿರ್ದೇಶಕರು ಪ್ರಾಮಾಣಿಕವಾಗಿ ಶ್ರಮಿಸಬೇಕು. ಜೊತೆಗೆ ಮಹಿಳಾ ಸಂಘಗಳಿಗೆ ಕಡಿಮೆ ಬಡ್ಡಿ ದರದ ಸಾಲವನ್ನು ನೀಡುವ ಮೂಲಕ ಮಹಿಳೆಯರು ಸ್ವಯಂ ಉದ್ಯೋಗ ಕೈಗೊಂಡು ಆರ್ಥಿಕ ಸ್ವಾವಲಂಭಿಗಳಾಗಲು ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.

ಸಂಘದ ನೂತನ ಅಧ್ಯಕ್ಷ ಅಶೋಕ್ ಮಾತನಾಡಿ, ಕ್ಷೇತ್ರದ ಜನಪ್ರಿಯ ಶಾಸಕರಾದ ಹೆಚ್.ಟಿ.ಮಂಜು, ಟಿಎಪಿಸಿಎಂಎಸ್ ನಿರ್ದೇಶಕ ಹೆಚ್.ಟಿ.ಲೋಕೇಶ್ ಅವರ ಸಹಕಾರದಿಂದ ನಾವು ಏಳು ಸ್ಥಾನ ಪಡೆದು ಸಂಘದ ಅಧಿಕಾರ ಪಡೆದುಕೊಳ್ಳಲು ಸಾಧ್ಯವಾಯಿತು ಎಂದರು.

ಶಾಸಕರು ಸೇರಿದಂತೆ, ನಿರ್ದೇಶಕರು ಹಾಗೂ ಸಂಘದ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಮುಖಂಡರು ನನಗೆ ಅಧ್ಯಕ್ಷ ಸ್ಥಾನ ದೊರಕಿಸಿ ಕೊಟ್ಟಿದ್ದಾರೆ. ನನಗೆ ಸಿಕ್ಕಿರುವ ಅಧಿಕಾರದ ಅವಧಿಯಲ್ಲಿ ಪ್ರಾಮಾಣಿಕವಾಗಿ‌ ಕೆಲಸ ಮಾಡಿ ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ದಕ್ಕೆ ಬಾರದಂತೆ ಒಳ್ಳೆಯ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಆರ್.ರಮೇಶ್ ಮಾತನಾಡಿ, ನಮ್ಮ ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷವು ಸಂಘದ ಅಧಿಕಾರ ಹಿಡಿಯಲು ಶಾಸಕರಾದ ಹೆಚ್.ಟಿ.ಮಂಜಣ್ಣ, ಟಿಎಪಿಸಿಎಂಎಸ್ ನಿರ್ದೇಶಕ ಎಚ್.ಟಿ.ಲೋಕೇಶ್ ಮತ್ತು ಸೊಸೈಟಿ ವ್ಯಾಪ್ತಿಯ ಎಲ್ಲಾ ಮೈತ್ರಿ ಪಕ್ಷದ ಮುಖಂಡರ ಸಹಕಾರವನ್ನು ಸ್ಮರಿಸಿದರು.

ಈ ಅಭಿನಂದನಾ ಸಮಾರಂಭದಲ್ಲಿ ಮುಖಂಡರಾದ ಎ.ಪಿ.ಕೇಶವಗೌಡ, ಹರಿರಾಯನಹಳ್ಳಿ ರಘು, ಪಟೇಲ್ ಲೋಕೇಶ್,ಸಂಘದ ಮಾಜಿ ಅಧ್ಯಕ್ಷ ಎ.ಡಿ.ಮಹದೇವೇಗೌಡ, ಗ್ರಾಮ ಪಂಚಾಯಿತಿ ಸದಸ್ಯರಾದ ಆರ್.ರಮೇಶ್, ಚನ್ನೇಗೌಡ, ನಗರೂರು ನಂಜೇಗೌಡ, ರೇಣುಕಾ ಈಶ್ವರ್, ಮೈತ್ರಿ ಪಕ್ಷದ ಮುಖಂಡರಾದ ಚಿಕ್ಕೋಸಹಳ್ಳಿ ನಾಗೇಶ್, ಮೆಣಸ ಮಧು, ಹರೀನಹಳ್ಳಿ ಸಿದ್ದೇಗೌಡ, ಮಾಳಗಮ್ಮನ ಮಂಜಣ್ಣ, ದ್ಯಾವಣ್ಣನ ರಮೇಶ್, ಮೆಣಸ ಶಿವಣ್ಣ, ಗುಡ್ಡೇನಹಳ್ಳಿ ಮೊಗಣ್ಣ, ನಗರೂರು‌ ಮಂಡಿ ಶಿವಣ್ಣ, ಪ್ರಧಾನರ ಪ್ರದೀಪ್, ಗೋಣಿ ಶ್ರೀನಿವಾಸ್, ಕುಂಟಣ್ಣನ ಶ್ರೀನಿವಾಸ್, ವೆಂಕಟೇಶ್ ಸೇರಿದಂತೆ ಹಲವು ಮುಖಂಡರು ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿದ್ದರು.

– ಶ್ರೀನಿವಾಸ್ ಆರ್.

Leave a Reply

Your email address will not be published. Required fields are marked *

× How can I help you?