ಕೆ.ಆರ್.ಪೇಟೆ: ತಾಲ್ಲೂಕಿನ ಕಸಬಾ ಹೋಬಳಿಯ ಅಗ್ರಹಾರಬಾಚಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜೆಡಿಎಸ್ ಯುವ ಮುಖಂಡ ಕೆ.ಅಶೋಕ್ ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಮುಖಂಡ ನಗರೂರು ಕುಮಾರ್ ಇಂದು ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನ ಬಯಸಿ ಜೆಡಿಎಸ್ ಪಕ್ಷದಿಂದ ಕೆ.ಅಶೋಕ್ ಮತ್ತು ಕಾಂಗ್ರೆಸ್ ಪಕ್ಷದಿಂದ ಎ.ಸಿ.ವೆಂಕಟೇಶ್ವರ್(ಸರ್ವೆ ದೇವರಾಜು) ನಾಮಪತ್ರ ಸಲ್ಲಿಸಿದ್ದರು. ಅದೇ ರೀತಿ ಉಪಾಧ್ಯಕ್ಷ ಸ್ಥಾನ ಬಯಸಿ ಜೆಡಿಎಸ್‌ನಿಂದ ಮಣಿಯಮ್ಮ, ಕಾಂಗ್ರೆಸ್‌ನಿಂದ ನಗರೂರು ಕುಮಾರ್ ನಾಮಪತ್ರ ಸಲ್ಲಿಸಿದ್ದರು.

ನಂತರ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕೆ.ಅಶೋಕ್ 7ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು. ಕಾಂಗ್ರೆಸ್ ಅಭ್ಯರ್ಥಿ ಎ.ಸಿ.ವೆಂಕಟೇಶ್ವರ್ 6ಮತಗಳನ್ನು ಪಡೆದು ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಗರೂರು ಕುಮಾರ್ 7ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಅಚ್ಚರಿ ಗೆಲುವು ಸಾಧಿಸಿದರು. ಪ್ರತಿಸ್ಪರ್ಧಿ ಜೆಡಿಎಸ್ ಅಭ್ಯರ್ಥಿ ಮಣಿಯಮ್ಮ 6ಮತಗಳನ್ನು ಪಡೆದು ಪರಾಭವಗೊಂಡರು.

ಚುನಾವಣಾ ಪ್ರಕ್ರಿಯೆಯಲ್ಲಿ ಸಂಘದ ನಿರ್ದೇಶಕರಾದ ಅಗ್ರಹಾರಬಾಚಹಳ್ಳಿ ಚಂದ್ರೇಗೌಡ, ಚಿಕ್ಕೋಸಹಳ್ಳಿ ಸುರೇಶ್, ಚಿಲ್ಲದಹಳ್ಳಿ ಮಣಿಯಮ್ಮ, ರಾಧಮಹೇಶ್, ಚೆಲುವರಾಜೇಗೌಡ, ಚಿಕ್ಕೋಸಹಳ್ಳಿ ಪಾರ್ವತಮ್ಮ, ಅರೆಬೊಪ್ಪನಹಳ್ಳಿ ಅಶೋಕ್, ಎ.ಬಿ.ಮಹೇಂದ್ರ, ಎ.ಸಿ.ವೆಂಕಟೇಶ್ವರ್(ಸರ್ವೆ ದೇವರಾಜ್), ವಳಗೆರೆ ಮೆಣಸ ಕೆ.ಬಲರಾಮ್ ಭಾಗವಹಿಸಿದ್ದರು.

ಚುನಾವಣಾಧಿಕಾರಿಯಾಗಿ ತಾಲ್ಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಹೆಚ್.ಬಿ.ಭರತ್‌ಕುಮಾರ್, ಸಹ ಚುನಾವಣಾಧಿಕಾರಿಯಾಗಿ ಸಂಘದ ಸಿಇಓ ರಾಮಸ್ವಾಮಿ ಕಾರ್ಯನಿರ್ವಹಿಸಿದರು.
ಕಳೆದ ಏ.17ರಂದು ನಡೆದಿದ್ದ ಆಡಳಿತ ಮಂಡಳಿಯ ನಿರ್ದೇಶಕರ 12ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷದ 7 ಅಭ್ಯರ್ಥಿಗಳು, ಕಾಂಗ್ರೆಸ್ ಬೆಂಬಲಿತ 5 ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದರು. ಪೂರ್ಣ ಬಹುಮತ ಹೊಂದಿದ್ದ ಮೈತ್ರಿ ಪಕ್ಷವು ಅಧ್ಯಕ್ಷ-ಉಪಾಧ್ಯಕ್ಷ ಎರಡೂ ಸ್ಥಾನಗಳಲ್ಲೂ ಗೆಲುವು ಸಾಧಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಚುನಾವಣೆಯಲ್ಲಿ ನಿರೀಕ್ಷೆಯಂತೆ ಅಧ್ಯಕ್ಷ ಸ್ಥಾನ ಜೆಡಿಎಸ್ ಪಾಲಾಗಿದೆ. ಆದರೆ ಉಪಾಧ್ಯಕ್ಷ ಸ್ಥಾನವು ಕಾಂಗ್ರೆಸ್ ಪಾಲಾಗಿದ್ದು, ಇದು ಕಾಂಗ್ರೆಸ್ ಪಕ್ಷಕ್ಕೆ ಬಯಸದೇ ಬಂದ ಭಾಗ್ಯವಾಗಿದೆ.

ಸಂಘದ ನೂತನ ಅಧ್ಯಕ್ಷರಾದ ಕೆ.ಅಶೋಕ್ ಅವರನ್ನು, ಶಾಸಕ ಹೆಚ್.ಟಿ.ಮಂಜು, ಟಿಎಪಿಸಿಎಂಎಸ್ ನಿರ್ದೇಶಕ ಹೆಚ್.ಟಿ.ಲೋಕೇಶ್, , ಮೈತ್ರಿ ಪಕ್ಷದ ಮುಖಂಡರಾದ ಮೆಣಸ ಮಹದೇವೇಗೌಡ, ಎ.ಪಿ.ಕೇಶವಗೌಡ, ಹರಿರಾಯನಹಳ್ಳಿ ರಘು, ಚಿಲ್ಲದಹಳ್ಳಿ ಮಹೇಂದ್ರ, ಜವರಣ್ಣನ ರಮೇಶ್, ಗ್ರಾ.ಪಂ.ಸದಸ್ಯರಾದ ಬಿ.ಆರ್.ರಮೇಶ್, ಚನ್ನೇಗೌಡ, ನಿರ್ದೇಶಕರಾದ ಅಗ್ರಹಾರಬಾಚಹಳ್ಳಿ ಚಂದ್ರೇಗೌಡ, ಚಿಕ್ಕೋಸಹಳ್ಳಿ ಸುರೇಶ್, ಚಿಲ್ಲದಹಳ್ಳಿ ಮಣಿಯಮ್ಮ, ರಾಧಮಹೇಶ್, ಚೆಲುವರಾಜೇಗೌಡ, ಚಿಕ್ಕೋಸಹಳ್ಳಿ ಪಾರ್ವತಮ್ಮ ಮತ್ತಿತರರು ಅಭಿನಂದಿಸಿದರು.

ಸಂಘದ ನೂತನ ಉಪಾಧ್ಯಕ್ಷರಾಗಿ ಅಚ್ಚರಿಯ ಗೆಲುವು ಸಾಧಿಸಿದ ನಗರೂರು ಕುಮಾರ್ ಅವರನ್ನು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ನಾಗೇಂದ್ರಕುಮಾರ್, ಮನ್‌ಮುಲ್ ನಿರ್ದೇಶಕ ಡಾಲು ರವಿ, ಜಿ.ಪಂ.ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಶ್, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎ.ಬಿ.ಕುಮಾರ್, ಕೆಯುಐಡಿಎಫ್‌ಸಿ ನಿಗಮದ ಮಾಜಿ ಅಧ್ಯಕ್ಷ ಎಂ.ಡಿ.ಕೃಷ್ಣಮೂರ್ತಿ, ಪುರಸಭೆ ಸ್ಥಾಯಿ ಅಧ್ಯಕ್ಷ ರವೀಂದ್ರಬಾಬು, ಪುರಸಭಾ ಸದಸ್ಯ ಕೆ.ಸಿ.ಮಂಜುನಾಥ್, ಸಂಘದ ನಿರ್ದೇಶಕರಾದ ಅರೆಬೊಪ್ಪನಹಳ್ಳಿ ಅಶೋಕ್, ಎ.ಬಿ.ಮಹೇಂದ್ರ, ಎ.ಸಿ.ವೆಂಕಟೇಶ್ವರ್(ಸರ್ವೆ ದೇವರಾಜ್), ವಳಗೆರೆ ಮೆಣಸ ಕೆ.ಬಲರಾಮ್, ಮುಖಂಡರಾದ ಗ್ರಾ.ಪಂ.ಮಾಜಿ ಅಧ್ಯಕ್ಷ ಮೆಣಸ ನಾಗೇಂದ್ರ, ಸೊಸೈಟಿ ಮಾಜಿ ಅಧ್ಯಕ್ಷ ಸಿ.ಆರ್.ಪಿ.ಕುಮಾರ್, ಟಿಎಪಿಸಿಎಂಎಸ್ ನಿರ್ದೇಶಕ ಬೊಪ್ಪನಹಳ್ಳಿ ಅಶೋಕ್, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಬೊಪ್ಪನಹಳ್ಳಿ ರಮೇಶ್, ಎ.ಬಿ.ದೇವರಾಜು, ಗ್ರಾ.ಪಂ.ಸದಸ್ಯರಾದ ಅನುವಿನಕಟ್ಟೆ ಆನಂದ್, ಎ.ಸಿ.ಮುರುಳಿ, ಎ.ಕೆ.ಸುನಿಲ್, ಮಡುವಿನಕೋಡಿ ಕಾಂತರಾಜು, ಎಲ್.ಕೆ.ಮಂಜುನಾಥ್,ಪ್ರಸನ್ನಕುಮಾರ್, ಲಕ್ಷ್ಮೀಪುರ ಚಂದ್ರೇಗೌಡ, ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ನೂತನ ಉಪಾಧ್ಯಕ್ಷ ನಗರೂರು ಕುಮಾರ್ ಅವರನ್ನು ಅಭಿನಂದಿಸಿದರು.
– ಶ್ರೀನಿವಾಸ್ ಆರ್.