ಕೆ.ಆರ್.ಪೇಟೆ: ತಾಲ್ಲೂಕಿನ ಕಸಬಾ ಹೋಬಳಿಯ ಅಗ್ರಹಾರಬಾಚಹಳ್ಳಿ ಗ್ರಾಮಕ್ಕೆ ಇದೇ ಮೊದಲ ಬಾರಿಗೆ ಕೆ.ಎಸ್.ಆರ್.ಟಿ.ಸಿ.ಸಾರಿಗೆ ಬಸ್ ವ್ಯವಸ್ಥೆಯನ್ನು ಕೆ.ಆರ್.ಪೇಟೆ ಸಾರಿಗೆ ಡಿಪೋ ವತಿಯಿಂದ ಆರಂಭಿಸಲಾಯಿತು.
ಗ್ರಾಮಕ್ಕೆ ಇದೇ ಮೊದಲ ಭಾರಿಗೆ ಆಗಮಿಸಿದ ಬಸ್ಸಿಗೆ ಅಗ್ರಹಾರಬಾಚಹಳ್ಳಿ ಗ್ರಾಮಸ್ಥರು ಗ್ರಾಮ ದೇವತೆ ಶ್ರೀ ಲಕ್ಷ್ಮೀದೇವಿ ಅಮ್ಮನವರ ದೇವಾಲಯದ ಆವರಣದಲ್ಲಿ ಬಸ್‌ಗೆ ತಳಿರು ತೋರಣ ಕಟ್ಟಿ ಪೂಜೆ ಸಲ್ಲಿಸಿ, ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಕುಮಾರ್, ಗ್ರಾಮದ ಮುಖಂಡ ಎ.ಪಿ.ಕೇಶವಗೌಡ, ಸೊಸೈಟಿ ನಿರ್ದೇಶಕ ಎ.ಬಿ.ಮಹೇಂದ್ರ ಇತರರು ಮಾತನಾಡಿ, ಗ್ರಾಮಕ್ಕೆ ಬಸ್ಸಿನ ವ್ಯವಸ್ಥೆ ಕಲ್ಪಿಸಲು ಸಹಕರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ, ಕ್ಷೇತ್ರದ ಶಾಸಕ ಹೆಚ್.ಟಿ.ಮಂಜು, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಕುಮಾರ್, ಸಾರಿಗೆ ಇಲಾಖೆಯ ಜಿಲ್ಲಾಧಿಕಾರಿ ನಾಗರಾಜು, ಸೇರಿದಂತೆ ಬಸ್ ವ್ಯವಸ್ಥೆಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಶ್ರಮಿಸಿದ ಎಲ್ಲರಿಗೂ ಗ್ರಾಮಸ್ಥರು ಕೃತಜ್ಞತೆಗಳನ್ನು ಸಲ್ಲಿಸಿ,. ನಿತ್ಯ ಬೆಳಿಗ್ಗೆ 8ಗಂಟೆಗೆ ಹಾಗೂ ಸಂಜೆ 5ಗಂಟೆ ಬಸ್ ಅಗ್ರಹಾರಬಾಚಹಳ್ಳಿ ಗ್ರಾಮದ ಮಾರ್ಗವಾಗಿ ಚಿಲ್ಲದಹಳ್ಳಿ, ನಗರೂರು, ಮಾರ್ಗೋನಹಳ್ಳಿ, ಬಳ್ಳೇಕೆರೆ, ಅನುವಿನಕಟ್ಟೆ ಮೂಲಕ ಕೆ.ಆರ್.ಪೇಟೆ ಮಾರ್ಗದಲ್ಲಿ ಎರಡು ಟ್ರಿಪ್ ಬಸ್ ಸಂಚರಿಸಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಗ್ಯಾರಂಟಿ ಅನುಷ್ಠಾನ ಸಮಿತಿ ಪ್ರಾಧಿಕಾರದ ತಾಲ್ಲೂಕು ಅಧ್ಯಕ್ಷ ಎ.ಬಿ.ಕುಮಾರ್, ಮುಖಂಡರಾದ ಎ.ಪಿ.ಕೇಶವಗೌಡ, ಯಜಮಾನ್ ಲಾಳಿ ಬೋರೇಗೌಡ, ಯಜಮಾನ್ ಸಂತೋಷ್, ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಎ.ಎಂ.ಮಂಜೇಗೌಡ, ಗ್ರಾ.ಪಂ.ಮಾಜಿ ಸದಸ್ಯ ಬಿ.ಹೆಚ್.ಅಶೋಕ್, ಗ್ರಾ.ಪಂ.ಮಾಜಿ ಅಧ್ಯಕ್ಷ ಎ.ಪಿ.ಶ್ರೀಧರ್, ಅಗ್ರಹಾರಬಾಚಹಳ್ಳಿ ಸೊಸೈಟಿ ನಿರ್ದೇಶಕ ಎ.ಬಿ.ಮಹೇಂದ್ರ, ಎ.ಎಸ್.ರಮೇಶ್, ಉದ್ದಾನಿ ಮಹದೇವೇಗೌಡ, ಶೆಟ್ಟಣ್ಣನ ಮಹೇಶ್, ಯುವ ಮುಖಂಡರಾದ ಎ.ಜಿ.ಸಂತೋಷ್, ಸುನಿಲ್.ಎ.ಕೆ, ದಿನೇಶ್ ಗುರೂಜಿ, ಕಾಲೋನಿ ದೇವರಾಜು, ಪುಟ್ಟಸ್ವಾಮಿ, ರಮೇಶ್, ನಾಗೇಶ್, ಮಿಲ್ ಶ್ರೀಕಂಠೇಗೌಡ, ಕೆಂಪಣ್ಣನ ಮಂಜೇಗೌಡ, ಪ್ರಭಾವತಿ ಎ.ಜಿ.ನಾಗರಾಜು, ರಂಗಶೆಟ್ಟಿ, ಭಟ್ರು ಮಂಜು, ಶಿವಮ್ಮ, ಸಾರಿಗೆ ಅಧಿಕಾರಿ ಪುನೀತ್, ಚಾಲಕ ಕಂ ನಿರ್ವಾಹಕ ನಾಗರಾಜು, ಗ್ರಾ.ಪಂ.ಸದಸ್ಯ ಆರ್.ಶ್ರೀನಿವಾಸ್ ಸೇರಿದಂತೆ ಹಲವು ಮುಖಂಡರು, ಯುವಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
- ಶ್ರೀನಿವಾಸ್ ಎನ್
–