ಕೆ.ಆರ್.ಪೇಟೆ-ತಾಲ್ಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅಟೆಂಡರ್ ಆಗಿ ನಿವೃತ್ತಿ ಹೊಂದಿದ ಕಾಳೇಗೌಡ ಅವರಿಗೆ 1,05000-00(ಒಂದು ಲಕ್ಷದ ಐದು ಸಾವಿರ) ಲಕ್ಷ ರೂ ಉಪಧನದ(ಗ್ರ್ಯಾಜ್ಯುಟಿ) ಚೆಕ್ ಹಾಗೂ ಇತ್ತೀಚೆಗೆ ಮೃತಪಟ್ಟ ಚಿಲ್ಲದಹಳ್ಳಿ ನೀರುಗಂಟಿ ಪುಟ್ಟೇಗೌಡ ಅವರ ಪತ್ನಿ ಮಮತಾ ಅವರಿಗೆ1,00500-00(ಒಂದು ಲಕ್ಷದ ಐದು ನೂರು)ಲಕ್ಷ ರೂಪಾಯಿಗಳ ಮರಣ ನಿಧಿ ಚೆಕ್ ಅನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಸಿ.ದಿವಿಕುಮಾರ್ ಅವರು ವಿತರಣೆ ಮಾಡಿದರು.
ಬಳಿಕ ಮಾತನಾಡಿದ ಅವರು ಗ್ರಾಮ ಪಂಚಾಯಿತಿ ನೌಕರರು ಅರ್ಪಣಾ ಭಾವನೆಯಿಂದ ಕೆಲಸ ಮಾಡಿದರೆ ಗ್ರಾಮ ಪಂಚಾಯಿತಿ ಆಡಳಿತಕ್ಕೆ ಒಳ್ಳೆಯ ಹೆಸರು ಬರುತ್ತದೆ. ಸಕಾಲಕ್ಕೆ ಕುಡಿಯುವ ನೀರು ಪೂರೈಕೆ ಮಾಡಬೇಕು. ಕಾಲ ಕಾಲಕ್ಕೆ ವಾಟರ್ ಟ್ಯಾಂಕ್‌ಗಳನ್ನು ಸ್ವಚ್ಚ ಮಾಡಬೇಕು. ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದoತೆ ನೋಡಿಕೊಳ್ಳುವ ಜವಾಬ್ದಾರಿ ನೀರುಗಂಟಿಗಳಿಗೆ ಇರುತ್ತದೆ. ಕುಡಿಯುವ ನೀರಿನ ವಿಚಾರದಲ್ಲಿ ಲೋಪವಾದರೆ ನಾನು ಸಹಿಸುವುದಿಲ್ಲ. ಅಂತಹ ನೀರುಗಂಟಿಗಳಿಗೆ ಕಾರಣ ಕೇಳಿ ನೋಟೀಸ್ ನೀಡಲಾಗುವುದು.ನಿತ್ಯ ಗ್ರಾಮ ಪಂಚಾಯಿತಿ ಕಚೇರಿ ಬಂದು ಬಯೋಮೆಟ್ರಿಕ್ ಸಹಿ ಮಾಡುವುದು.ಗ್ರಾಮಗಳಲ್ಲಿ ಬೀದಿ ದೀಪಗಳನ್ನು ಅಳವಡಿಸಲು ವಿದ್ಯುತ್ ಕೆಲಸಗಾರರಿಗೆ ಸಹಾಯ ಮಾಡಬೇಕು. ಈ ಮೂಲಕ ಬೀದಿ ದೀಪ ವ್ಯವಸ್ಥೆ ಸರಿಯಾಗಿರುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಪಿಡಿಓ ಹರ್ಷವರ್ಧನ್, ಗ್ರಾ.ಪಂ.ಉಪಾಧ್ಯಕ್ಷೆ ಸುನಿತಾದ್ಯಾವಯ್ಯ ಕಾರ್ಯದರ್ಶಿ ಚಂದ್ರಕುಮಾರ್, ಡಿಇಓ ತ್ರಿವೇಣಿ, ಗ್ರಾಮ ಪಂಚಾಯಿತಿ ಸದಸ್ಯರಾದ ಆರ್.ಶ್ರೀನಿವಾಸ್, ನಂಜೇಗೌಡ, ರೇವತಿ ಹರೀಶ್, ಗ್ರಂಥಪಾಲಕಿ ಸೌಮ್ಯ, ಬಿಲ್ ಕಲೆಕ್ಟರ್ ನರಸಿಂಹಯ್ಯ, ಎ.ಆರ್.ಕುಮಾರ್, ವಿಕಲಚೇತನ ಸಂಯೋಜಕಿ ಮೆಣಸ ತ್ರಿವೇಣಿ, ಇತರರು ಉಪಸ್ಥಿತರಿದ್ದರು.
—————–ಶ್ರೀನಿವಾಸ್ ಆರ್