ಕೆಆರ್.ಪೇಟೆ:;ತಾಲ್ಲೂಕಿನ ಅಕ್ಕಿಹೆಬ್ಬಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ 5 ವರ್ಷದ ಅವಧಿಗೆ ನಡೆದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎ.ಜೆ. ಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಸುಬ್ಬಯ್ಯ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿ ತಾಲ್ಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಹೆಚ್.ಬಿ.ಭರತ್ ಕುಮಾರ್, ಸಹ ಚುನಾವಣಾಧಿಕಾರಿಯಾಗಿ ಸಂಘದ ಸಿಇಓ ಸತೀಶ್ ಕಾರ್ಯನಿರ್ವಹಣೆ ಮಾಡಿದರು.
ನೂತನ ಅಧ್ಯಕ್ಷ ಎ.ಜೆ.ಕುಮಾರ್ ಮತ್ತು ಉಪಾಧ್ಯಕ್ಷ ಸುಬ್ಬಯ್ಯ ಅವರನ್ನು ಅಭಿನಂದಿಸಿ ಮಾತನಾಡಿದ ಪ್ರಥಮ ದರ್ಜೆ ಗುತ್ತಿಗೆದಾರರು ಹಾಗೂ ಜೆಡಿಎಸ್ ಮುಖಂಡರು, ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷರಾದ ಅಕ್ಕಿಹೆಬ್ಬಾಳು ಎ.ಆರ್.ರಘು ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಗೆಲುವಿಗೆ ಕಾರಣಕರ್ತರಾದ ಎಲ್ಲಾ ನಿರ್ದೇಶಕರಿಗೆ ಹಾಗೂ ಸಂಘದ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಜೆಡಿಎಸ್ -ಬಿಜೆಪಿ ಮೈತ್ರಿ ಪಕ್ಷದ ಮುಖಂಡರಿಗೆ, ಶೇರುದಾರ ಮತದಾರ ಬಂಧುಗಳಿಗೆ ಹಾಗೂ ಗೆಲುವಿಗೆ ಹಗಲಿರುಳು ಶ್ರಮಿಸಿದ ಮುಖಂಡರುಗಳಿಗೆ ಹೃದಯ ತುಂಬಿದ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.

ಸಂಘದ ಸಮಗ್ರ ಅಭಿವೃದ್ಧಿಗೆ ನೂತನ ಅಧ್ಯಕ್ಷರು- ಉಪಾಧ್ಯಕ್ಷರು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಎ.ಆರ್.ರಘು ಸಲಹೆ ನೀಡಿದರು.
ನೂತನ ನಿರ್ದೇಶಕರು ಯಾವುದೇ ಆಮಿಷಗಳಿಗೆ ಒಳಗಾಗದೇ ಅಕ್ಕಿಹೆಬ್ಬಾಳು ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಚುಕ್ಕಾಣಿಯನ್ನು ಹಿಡಿದಿದ್ದಾರೆ. ನೂತನ ಅಧ್ಯಕ್ಷರಾದ ಎ ಜೆ ಕುಮಾರ್ ಅವರು ಐದು ಭಾರಿ ಭರ್ಜರಿ ಗೆಲುವು ಸಾಧಿಸಿ ಸಹಕಾರ ಕ್ಷೇತ್ರದಲ್ಲಿ ಅನುಭವವುಳ್ಳವರಾಗಿದ್ದಾರೆ ಈ ಹಿಂದೆಯೂ ನಾಲ್ಕು ಭಾರಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವುದರಿಂದ ಸಂಘದ ಅಭಿವೃದ್ಧಿಗೆ ಸಹಕಾರಿ ಆಗಲಿದೆ. ಸಂಘವನ್ನು ಮತ್ತಷ್ಟು ಅಭಿವೃದ್ದಿ ಪಥದತ್ತ ತೆಗೆದುಕೊಂಡು ಹೋಗುತ್ತಾರೆ ಅನ್ನೋ ವಿಶ್ವಾಸವಿದೆ. ಮುಂದಿನ 5 ವರ್ಷದ ಅವಧಿಗೆ ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಜೆಡಿಎಸ್ – ಬಿಜೆಪಿ ಮೈತ್ರಿ ಪಕ್ಷದ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರಿಗೆ ಧನ್ಯವಾದಗಳನ್ನು ತಿಳಿಸಿದರು.
ನಂತರ ಮಾತನಾಡಿದ ನೂತನ ಅಧ್ಯಕ್ಷ ಎ.ಜೆ ಕುಮಾರ್ ನನ್ನನ್ನು ಅಧ್ಯಕ್ಷ ಸ್ಥಾನಕ್ಕೆ ಚುನಾಯಿಸಿದ ನಿರ್ದೇಶಕರಿಗೆ ಹಾಗೂ ಜೆಡಿಎಸ್- ಬಿಜೆಪಿ ಮುಖಂಡರಿಗೆ ಆಬಾರಿಯಾಗಿರುವುದಾಗಿ ತಿಳಿಸಿದರು. ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವುದಾಗಿ ಎ.ಜೆ.ಕುಮಾರ್ ತಿಳಿಸಿದರು.

ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಶಾಸಕ ಹೆಚ್.ಟಿ.ಮಂಜು, ತಾಲ್ಲೂಕು ಜೆಡಿಎಸ್- ಅಧ್ಯಕ್ಷ ಜಾನಕೀರಾಂ, ಜಿ.ಪಂಮಾಜಿ ಸದಸ್ಯ ಗೌರಮ್ಮ ಶ್ರೀನಿವಾಸ್, ಜಿಲ್ಲಾ ದಿಶಾ ಸಮಿತಿ ಸದಸ್ಯ ನರಸನಾಯಕ್, ಗ್ರಾ.ಪಂ.ಅದ್ಯಕ್ಷ ಹರೀಶ್, ಸಂಘದ ನಿರ್ದೇಶಕರಾದ ಆರ್.ವಾಸುರಾಜೇಗೌಡ, ಉದಯಕುಮಾರ್, ರಾಜೇಶ್, ಯೋಗೇಶ್, ಸುಜಾತ ಅಶೋಕ್, ಕೆ..ಗಂಗರಾಜು, ಸಂಘದ ಮೇಲ್ವಿಚಾರಕ ಆದಿಲ್ ಪಾಷಾ, ಮುಖಂಡರಾದ ಎ.ಆರ್.ರಘು, ಸಂಘದ ಮಾಜಿ ಅಧ್ಯಕ್ಷ ವಕೀಲ ಎಸ್.ಆರ್.ನವೀನ್ ಕುಮಾರ್, ಎ.ಎಂ.ನಾರಾಯಸ್ವಾಮಿ, ಎ.ಸಿ.ಮಂಜೇಗೌಡ, ಕೆ.ರಮೇಶ್, ವಿಠ್ಠಲ್ ರಾವ್, ಸುಬ್ಬಯ್ಯ, ಗೋವಿಂದೇಗೌಡ, ಸೋಮು, ಧನಂಜಯ್, ಬೋಜನಾಯಕ್, ಭೂಪಾಲ್ ಮತ್ತಿತರರು ಅಭಿನಂದಿಸಿದರು.
- ಶ್ರೀನಿವಾಸ್ ಆರ್.