ಕೆ.ಆರ್ ಪೇಟೆ:ವಿರೋಧ ಪಕ್ಷದ ಶಾಸಕರನ್ನು ಕಡೆಗಣಿಸುತ್ತಿರುವ ರಾಜ್ಯ ಸರಕಾರ ಅನುದಾನ ನೀಡದೆ ಸತಾಯಿಸುತ್ತಿದೆ ಎಂದು ಶಾಸಕ ಹೆಚ್.ಟಿ ಮಂಜು ಬೇಸರ ವ್ಯಕ್ತಪಡಿಸಿದರು.
ತಾಲ್ಲೂಕು ಕತ್ತರಘಟ್ಟ ಗ್ರಾಮದಲ್ಲಿ ಶಾಸಕರ ಅನುದಾನದಲ್ಲಿ ಹಾಗೂ ನಿವೃತ್ತ ಇಂಜಿನಿಯರ್ ಶಿವಕುಮಾರ್ ಸಹಕಾರದಿಂದ 1.85 ಕೋಟಿ ರೂಗಳ 2.8 ಕಿ ಮೀ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು ಒಂದೆಡೆ ಖುಷಿ ನೀಡಿದರೆ ಮಳೆಯ ಕಾರಣಕ್ಕೆ ಹದಗೆಟ್ಟಿರುವ ರಸ್ತೆಗಳು ಹಾಗು ಕೆರೆ-ಕಟ್ಟೆಗಳನ್ನು ನೋಡಿದರೆ ಬೇಸರವಾಗುತ್ತದೆ.ಗ್ಯಾರಂಟಿ ಯೋಜನೆಗಳಿಗೆ ದೊಡ್ಡ ಮಟ್ಟದ ಹಣವನ್ನು ವ್ಯಯ ಮಾಡುತ್ತಿರುವ ರಾಜ್ಯ ಸರಕಾರದ ಬಳಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ನೀಡಲು ಹಣವಿಲ್ಲ.ತನ್ನ ಪಕ್ಷದ ಶಾಸಕರಿಗೆ ಎಷ್ಟೋ ಇಷ್ಟು ಅನುದಾನ ನೀಡುತ್ತಿರುವ ಸರಕಾರ ವಿರೋಧ ಪಕ್ಷದ ಶಾಸಕರುಗಳನ್ನು ಸಂಪೂರ್ಣವಾಗಿ ಮರೆತೇ ಬಿಟ್ಟಿದೆ.
ನಾನು ಹೋರಾಟದ ಹಿನ್ನೆಲೆಯಿಂದ ಬಂದವನು ಈ ತರಹದ ತಾರತಮ್ಯಗಳನ್ನು ನನಗೆ ಸಹಿಸಲು ಸಾಧ್ಯವಿಲ್ಲ.ಮುಂದಿನ ದಿನಗಳಲ್ಲಿ ನಮ್ಮ ಪಕ್ಷದ ಹಾಗು ಮಿತ್ರ ಪಕ್ಷದ ಹಿರಿಯರೊಂದಿಗೆ ಚರ್ಚಿಸಿ ಈ ಸಮಸ್ಯೆಗೊಂದು ಪರಿಹಾರ ಹುಡುಕಲು ಪ್ರಯತ್ನಿಸಲಾಗುವುದು.ನಮ್ಮನ್ನು ನಂಬಿ ಮತ ನೀಡಿದ ಜನರಿಗೆ ನಾವು ಉತ್ತರ ನೀಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಪರಮೇಶ್,ವಿಜಿಯಮ್ಮ,ಹಾಲಿನ ಡೇರಿ ಕಾರ್ಯದರ್ಶಿ ಚಂದ್ರಶೇಖರ್, ಟಿ.ಎ.ಪಿ.ಸಿ.ಎಂ.ಎಸ್ ನಿರ್ದೇಶಕ ತೆರ್ನೇನಹಳ್ಳಿ ಬಲದೇವ್,ಎಸ್ ಡಿ ಎಂ ಸಿ ಅಧ್ಯಕ್ಷ ಜಗದೀಶ್,ಕಾಯಿ ಮಹೇಶ್,ಪ್ರಸನ್ನ, ವೆಂಕಟೇಶ, ರಂಗಣ್ಣ,ಚನ್ನಕೇಶವ, ವಿಶ್ವನಾಥ್, ಕುಮಾರ್, ಸತೀಶ್, ಚಂದ್ರಹಾಸ್,ರವಿ,ಗಣೇಶ್, ತಿಮ್ಮೇಗೌಡ, ಸ್ವಾಮಿಗೌಡ,ಬಾಬು,ಚಂದ್ರಶೇಖರ್, ಶಾಸಕ ಆಪ್ತ ಸಹಾಯಕ ಪ್ರತಾಪ್ ಅರಳಕುಪ್ಪೆ ಸೇರಿದಂತೆ ಇತರರು ಇದ್ದರು.
—–——–ಶ್ರೀನಿವಾಸ್ ಕೆ.ಆರ್ ಪೇಟೆ