ಕೆ.ಆರ್.ಪೇಟೆ-ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ರಾಜ್ಯದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದು ಶ್ರೀ ಕ್ಷೇತ್ರದ ಯೋಜನೆಯಿಂದಲೇ ಸಾವಿರಾರು ಕುಟುಂಬಗಳು ಉತ್ತಮ ನೆಲೆಕಂಡುಕೊoಡಿವೆ ಎಂದು ತಾಲ್ಲೂಕು ವಕೀಲರ ಸಂಘದ ಮಾಜಿ ಅಧ್ಯಕ್ಷರು ಹಾಗೂ ಹಿರಿಯ ನ್ಯಾಯವಾದಿ ಎನ್.ಆರ್.ರವಿಶಂಕರ್ ಅವರು ಅಭಿಪ್ರಾಯಪಟ್ಟರು.
ಅವರು ಕೆ.ಆರ್.ಪೇಟೆ ಪಟ್ಟಣದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾ ಕಚೇರಿಯಲ್ಲಿ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರದಿಂದ ಹೊರತಂದಿರುವ 2025 ನೇ ವರ್ಷದ ಡೈರಿ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪೂಜ್ಯ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಈ ಯೋಜನೆ ಹತ್ತಾರು ಕ್ಷೇತ್ರಗಳಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿರುವುದನ್ನು ನಾನು ಕಂಡಿದ್ದೇನೆ. ಇಂತಹ ಸಂಸ್ಥೆಯ ಸೇವೆಮಾಡಲು ನಾನು ಸಿದ್ದನಿದ್ದು ನನ್ನಂತೆಯೇ ನೂರಾರು ಜನರು ಶ್ರೀ ಕ್ಷೇತ್ರದ ಸೇವೆಮಾಡಲು ಉತ್ಸುಕರಾಗಿದ್ದಾರೆ. ಯೋಜನೆಯ ಅಧಿಕಾರಿಗಳು ನಮ್ಮ ಅಳಿಲು ಸೇವೆಯನ್ನು ಬಳಸಿಕೊಳ್ಳಬೇಕು. ಜೊತೆಗೆ ಯಾವುದೇ ಭಾಗದಲ್ಲಿ ಕಾನೂನು ಅರಿವು ಕಾರ್ಯಕ್ರಮ ಮಾಡಿದರೆ ನಾನು ಬಂದು ಕಾನೂನಿನ ಬಗ್ಗೆ ಜಾಗೃತಿ ಮೂಡಿಸುತ್ತೇನೆ. ಜೊತೆಗೆ ನಮ್ಮಿಂದ ಕಾನೂನು ನೆರವು ಬೇಕಿದ್ದರೂ ಯಾವುದೇ ಸಮಯದಲ್ಲಿ ಬೇಕಾದರೂ ನೀಡಲು ನಾನು ಸಿದ್ದನಿದ್ದೇನೆ ಎಂದರು.
ಪಿ.ಎಲ್.ಡಿ.ಬ್ಯಾoಕ್ ಮಾಜಿ ಅಧ್ಯಕ್ಷರಾದ ಹಿರಿಯ ಮುಖಂಡ ನಾಯಕನಹಳ್ಳಿ ಬಿ.ನಂಜಪ್ಪ ಮಾತನಾಡಿ,ಆಡುಮುಟ್ಟದ ಸೊಪ್ಪಿಲ್ಲಾ ಎಂಬಾ ಗಾದೆ ಮಾತನ್ನು ಸ್ವಲ್ಪ ಬದಲಾಯಿಸಿ ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆ ಸೇವೆ ಮಾಡದ ಕ್ಷೇತ್ರವೇ ಇಲ್ಲಾ ಎಂದು ಹೇಳಬೇಕು.ಏಕೆಂದರೆ ಹತ್ತು ಹಲವು ಯೋಜನೆಗಳನ್ನು ಹೆಗ್ಗಡೆಯವರು ಜಾರಿಗೆತಂದಿದ್ದು ಅವುಗಳ ಮೂಲಕ ಗ್ರಾಮೀಣಭಾಗದ ಜನರು ಜೀವನದ ದಿಕ್ಕನ್ನೆ ಬದಲಿಸಿದ್ದಾರೆ.
ನಮ್ಮ ಕೆರೆಗಳಲ್ಲಿ ನೂರಾರು ವರ್ಷಗಳಿಂದ ತುಂಬಿದ್ದoತಹ ಮಣ್ಣನ್ನು ತೆಗೆಸಿ ಮತ್ತೆ ಜೀವಕಳೆ ಬರಿಸಿ ಅಂತರ್ಜಲ ಹೆಚ್ಚುವಂತೆ ಮಾಡಿದ್ದಾರೆ ನಾನೂ ಕೂಡಾ ಯೋಜನೆಯ ಅಭಿಮಾನಿ ಯಾಗಿದ್ದೇನೆ ಎಂದರು.
ಈ ಸಮಯದಲ್ಲಿ ಹಿರಿಯ ಪತ್ರಕರ್ತರಾದ ಕೆ.ಆರ್.ನೀಲಕಂಠ, ಹರಿಚರಣತಿಲಕ್, ಬಳ್ಳೇಕೆರೆ ಮಂಜುನಾಥ್, ಆರ್.ಶ್ರೀನಿವಾಸ್, ಕಾಡುಮೆಣಸಚಂದ್ರು, ಮರುವನಹಳ್ಳಿಬಸವರಾಜ್, ಗಂಜೀಗೆರೆ ಮಹೇಶ್, ಶಿಕ್ಷಕ ನಾಗರಾಜ್, ಬೇಕರಿ ದಿನೇಶ್ ಯೋಜನಾಧಿಕಾರಿ ತಿಲಕ್ರಾಜ್ ಮತ್ತು ಸಿಬ್ಬಂದಿಗಳು ಹಾಜರಿದ್ದರು..
———————––ಶ್ರೀನಿವಾಸ್ ಆರ್