ಕೆ.ಆರ್.ಪೇಟೆ-‘ಬಾರಿ ಮಳೆ-ಕುಸಿದ ಮನೆ’-ಬೀದಿಯಲ್ಲೇ ವಾಸ-ಶೀಘ್ರ ಸ್ಪಂದಿಸಬೇಕಿದೆ ತಾಲೂಕು ಆಡಳಿತ

ಕೆ.ಆರ್.ಪೇಟೆ-ತಾಲ್ಲೂಕಿನ ಹೊಸಹೊಳಲು ಗ್ರಾಮದ 21ನೇ ವಾರ್ಡಿನ ವಿಜಯನಗರ ಬಡಾವಣೆಯ ವಾಸಿ ಡ್ರೈವರ್ ಸತೀಶ್ ಅವರ ವಾಸದ ಮನೆಯು ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ಕುಸಿದು ಲಕ್ಷಾಂತರ ರೂ ನಷ್ಟ ಉಂಟಾಗಿದ್ದು, ಸದರಿ ಕುಟುಂಬವು ವಾಸಿಸಲು ಸೂರಿಲ್ಲದೆ ಬೀದಿಗೆ ಬಿದ್ದಿದೆ.

ಕಡುಬಡವರಾಗಿರುವ ಸತೀಶ್ ಅವರ ಕುಟುಂಬವು ಮಳೆಯ ಕಾರಣ ಮನೆಯ ಹಿಂಬದಿಯಲ್ಲಿ ಇರುವ ಜಾಗದಲ್ಲಿ ಮಲಗಿದ್ದರಿಂದ ಅದೃಷ್ಠವಶಾತ್ ಯಾರಿಗೂ ಸಹ ಯಾವುದೇ ತೊಂದರೆ ಆಗಿಲ್ಲ.

ಸ್ಥಳಕ್ಕೆ ಪುರಸಭಾ ಸದಸ್ಯ ಹೆಚ್.ಆರ್.ಲೋಕೇಶ್, ಕಸಬಾ ಹೋಬಳಿ ರಾಜಸ್ವ ನಿರೀಕ್ಷಕ ಜ್ಞಾನೇಶ್, ಗ್ರಾಮ ಆಡಳಿತ ಅಧಿಕಾರಿ ಜಗದೀಶ್ ಭೇಟಿ ನೀಡಿ ಸರಕಾರದಿಂದ ಸೂಕ್ತ ಅನುದಾನ ಕೊಡಿಸಲಾಗುವುದು ಎಂದು ತಿಳಿಸಿದರು.

ಈ ಬಗ್ಗೆ ತಾಲ್ಲೂಕು ಆಡಳಿತಕ್ಕೂ ಸಹ ಮನೆ ಹಾನಿ ಆಗಿರುವ ಬಗ್ಗೆ ಮಾಹಿತಿ ಒದಗಿಸಿ ಸಂಕಷ್ಟಕ್ಕೆ ಒಳಗಾಗಿರುವ ಸತೀಶ್ ಕುಟುಂಬಕ್ಕೆ ವೈಜ್ಞಾನಿಕ ಪರಿಹಾರ ಬಿಡುಗಡೆ ಮಾಡಬೇಕು. ಜೊತೆ ಆಶ್ರಯ ಯೋಜನೆ ಅಡಿಯಲ್ಲಿ ಮನೆ ಮಂಜೂರು ಮಾಡಿಸಿಕೊಡಬೇಕು ಎಂದು ಪುರಸಭಾ ಸದಸ್ಯ ಹೆಚ್.ಆರ್.ಲೋಕೇಶ್ ತಾಲ್ಲೂಕು ತಹಸೀಲ್ದಾರ್ ಕೆ.ಯು.ಅಶೋಕ್ ಅವರಿಗೆ ಮನವಿ ಮಾಡಿದ್ದಾರೆ.

————-ಶ್ರೀವಾಸ್ ಕೆ ಆರ್ ಪೇಟೆ

Leave a Reply

Your email address will not be published. Required fields are marked *

× How can I help you?