ಕೆ.ಆರ್.ಪೇಟೆ : ತಾಲ್ಲೂಕಿನ ಬೂಕನಕೆರೆ ಹೋಬಳಿಯ ಬಳ್ಳೇಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜೆಡಿಎಸ್- ಬಿಜೆಪಿ ಮೈತ್ರಿ ಪಕ್ಷದ ವರದರಾಜೇಗೌಡ, ಉಪಾಧ್ಯಕ್ಷರಾಗಿ ಲೀಲಾವತಿ ಚಂದ್ರೇಗೌಡ ಆಯ್ಕೆಯಾಗಿದ್ದಾರೆ.
ಚುನಾವಣಾ ಅಧಿಕಾರಿಯಾಗಿ ಸಹಕಾರ ಅಭಿವೃದ್ಧಿ ಇಲಾಖೆಯ ಹೇಮಲತಾ ಸಹ ಚುನಾವಣಾ ಅಧಿಕಾರಿಯಾಗಿ ಇಂದುಮತಿ ಕಾರ್ಯ ನಿರ್ವಹಿಸಿದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಿ.ವರದರಾಜೇಗೌಡ ಮಾತನಾಡಿ ಈ ಹಿಂದೆ ನಾನು ಸಂಘದ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಡಿ ಗ್ರೇಡ್ ನಲ್ಲಿದ್ದ ಸಂಘವನ್ನು ಬಿ. ಗ್ರೇಡ್ ಗೆ ತರುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ ಪರಿಣಾಮವಾಗಿ ಸಂಘವು ಸುಮಾರು ಒಂದು ಸಾವಿರ ಷೇರುದಾರರಿಗೆ ಐದೂವರೆ ಕೋಟಿ ರೂಪಾಯಿ ಸಾಲವನ್ನು ವಿತರಿಸಲಾಗಿದ್ದು ಇನ್ನು ಮುಂದೆಯು ರೈತರ ಪರವಾಗಿ ನಮ್ಮ ಸಹಕಾರ ಸಂಘ ಕಾರ್ಯ ನಿರ್ವಹಿಸಲಿದೆ. ಉಳಿದ 500ಮಂದಿ ಷೇರುದಾರರಿಗೂ ಸಂಘದಿಂದ ಶೂನ್ಯ ಬಡ್ಡಿ ದರದ ಸಾಲವನ್ನು ಎಲ್ಲಾ ನಿರ್ದೇಶಕರು ಮತ್ತು ಆಡಳಿತ ಮಂಡಳಿ ಸಹಕಾರದೊಂದಿಗೆ ನೀಡಲು ಶ್ರಮಿಸುತ್ತೇನೆ ಎಂದು ತಿಳಿಸಿದರು.

ನಾನು ಅಧ್ಯಕ್ಷರಾಗಲೂ ಸಹಕರಿಸಿದ ಸಂಘದ ಎಲ್ಲಾ ನಿರ್ದೇಶಕರಿಗೂ ಸಂಘದ ವ್ಯಾಪ್ತಿಯ ಎಲ್ಲಾ ಸಹಕಾರಿ ಬಂಧುಗಳಿಗೂ, ವಿವಿಧ ಪಕ್ಷಗಳ ಮುಖಂಡರಿಗೂ ಷೇರುದಾರ ಮತದಾರ ಬಂಧಿಗಳಿಗೂ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಕೃಷ್ಣೇಗೌಡ,ನಟೇಶ್,ಹೆಚ್ ರಾಮೇಗೌಡ,ಹರೀಶ್, ಭಾಗ್ಯಮ್ಮ,ಶಂಕರೇಗೌಡ,ಬಿ.ಎ. ಸುರೇಶ್, ನೀಲಮ್ಮ, ಸಿದ್ದರಾಜು,ಕೆ,ಜಿ ವಿಜಯಕುಮಾರ್,, ಮೇಲ್ವಿಚಾರಕರಾದ ಶ್ರೀನಿವಾಸ್, ಮುಖಂಡರಾದ ಪಿ.ಪ್ರವೀಣ್, ಬೋರ್ ವೆಲ್ ಮಹೇಶ್, ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಚಂದ್ರೇಗೌಡ, ಎನ್.ಟಿ.ನಾಗರಾಜು, ಕಾಮನಹಳ್ಳಿ ಶ್ರೀಧರ್, ಬಾಣೇಗೌಡ, ಕಾಯಿ ಚಂದ್ರು, ಬಳ್ಳೇಕೆರೆ ಕುಮಾರ್, ಪುರುಷೋತ್ತಮ್, ಉದಯ್ ಸಂದೀಪ್ ಮತ್ತಿತರರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್