ಕೆ.ಆರ್.ಪೇಟೆ-ತಾಲ್ಲೂಕಿನ ಬೂಕನಕೆರೆ ಹೋಬಳಿಯ ಬಳ್ಳೇಕೆರೆ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಎಂ.ಕೆ.ರಾಣಿಪರಮೇಶ್, ಉಪಾಧ್ಯಕ್ಷರಾಗಿ ಹೆಮ್ಮಡಹಳ್ಳಿ ತಿಮ್ಮೇಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದಿನ ಅಧ್ಯಕ್ಷೆ ಜಯಲಕ್ಷ್ಮಮ್ಮ ಗಂಗಾಚಾರ್, ಉಪಾಧ್ಯಕ್ಷರಾದ ಚಂದ್ರೇಗೌಡ ಇವರ ರಾಜೀನಾಮೆಯಿಂದ ತೆರವಾದ ಸ್ತನಗಳಿಗೆ ಇಂದು ಚುನಾವಣೆ ನಿಗಧಿಯಾಗಿತ್ತು.
ಅಧ್ಯಕ್ಷ ಸ್ಥಾನ ಬಯಸಿ ಎಂ.ಕೆ.ರಾಣಿ ಪರಮೇಶ್, ಉಪಾಧ್ಯಕ್ಷ ಸ್ಥಾನ ಬಯಸಿ ಹೆಮ್ಮಡಹಳ್ಳಿ ತಿಮ್ಮೇಗೌಡ ಅವರನ್ನು ಹೊರತು ಪಡಿಸಿ ಬೇರೇ ಯಾರೂ ನಾಮಪತ್ರ ಸಲ್ಲಿಸದೇ ಇರುವ ಕಾರಣ ಅಧ್ಯಕ್ಷರಾಗಿ ಎಂ.ಕೆ.ರಾಣಿ ಪರಮೇಶ್, ಉಪಾಧ್ಯಕ್ಷರಾಗಿ ಹೆಮ್ಮಡಹಳ್ಳಿ ತಿಮ್ಮೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಲೋಕೋಪಯೋಗಿ ಎಇಇ ಮಂಜುನಾಥ್ ಘೋಷಣೆ ಮಾಡಿದರು.
ಸಹ ಚುನಾವಣಾಧಿಕಾರಿಗಳಾಗಿ ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ಅನಿಲ್‌ಬಾಬು, ಪಿಡಿಓ ಪ್ರವೀಣ್‌ಕುಮಾರ್ ಕಾರ್ಯನಿರ್ವಹಿಸಿದರು.
ನೂತನ ಅಧ್ಯಕ್ಷೆ ಎಂ.ಕೆ.ರಾಣಿಪರಮೇಶ್ ಮಾತನಾಡಿ, ನನ್ನನ್ನು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಿದ ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರಿಗೆ ಹಾಗೂ ಗ್ರಾ.ಪಂ.ವ್ಯಾಪ್ತಿಯ ಎಲ್ಲಾ ಗ್ರಾಮಗಳ ಮುಖಂಡರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನನ್ನ ಅಧಿಕಾರದ ಅವಧಿಯಲ್ಲಿ ಗ್ರಾಮ ಪಂಚಾಯಿತಿಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಪ್ರಮುಖ ಕುಡಿಯುವ ನೀರು, ಬೀದಿ ದೀಪ, ಚರಂಡಿ ವ್ಯವಸ್ಥೆ, ಉದ್ಯೋಗ ಖಾತ್ರಿ ಯೋಜನೆಯ ಸದ್ಬಳಕೆ ಮತ್ತಿತರರ ಕೆಲಸಗಳನ್ನು ಕೈಗೊಳ್ಳುವ ಮೂಲಕ ಜನರು ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ದಕ್ಕೆ ಯಾಗದಂತೆ ಅಧ್ಯಕ್ಷೆಯಾಗಿ ಉತ್ತಮವಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ನೂತನ ಉಪಾಧ್ಯಕ್ಷ ತಿಮ್ಮೇಗೌಡ ಮಾತನಾಡಿ, ಅಧ್ಯಕ್ಷರು ಹಾಗೂ ಸದಸ್ಯರು, ನೌಕರರ ಸಹಕಾರದೊಂದಿಗೆ ಪಂಚಾಯಿತಿಯ ಸಮಗ್ರ ಅಭಿವೃದ್ಧಿಗೆ ನನಗೆ ಸಿಕ್ಕರುವ ಅಧಿಕಾರದ ಅವಧಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಶಂಕರ್, ಜಯಂತಿ, ಪಿ.ಚಂದ್ರೇಗೌಡ, ವೈ.ಎಸ್.ಅರ್ಪಿತಾ, ಲಲಿತಾ, ಶಿವರಾಜು, ಮಹದೇವಶೆಟ್ಟಿ, ಇಂದ್ರಮ್ಮ, ಬಿ.ವಿ.ಅಣ್ಣೇಗೌಡ, ಗಿರಿಜಾ, ಮಂಜುನಾಥ್, ಅನುರಾಧಮಂಜು, ಮಂಜೇಗೌಡ, ಸಾಕಮ್ಮ, ಜಯಣ್ಣ, ಮಂಜುಳ, ಜಯಲಕ್ಷ್ಮಮ್ಮ , ಮುಖಂಡರಾದ ಬಿ.ಎ.ಸುರೇಶ್, ನಾಟನಹಳ್ಳಿ ಮಹೇಶ್, ಚೌಡೇನಹಳ್ಳಿ ನಾಗರಾಜು, ದಿನೇಶ್, ಕಾಮನಹಳ್ಳಿ ಬಾಣೇಗೌಡ, ಬಳ್ಳೇಕೆರೆ ಯೋಗಣ್ಣ, ಬೂವನಹಳ್ಳಿ ಬಿ.ಕೆ.ರಮೇಶ್, ಕಾಮನಹಳ್ಳಿ ಅಶೋಕ್, ನಾಗರಾಜು, ನಟೇಶ್, ಮಹೇಶ್, ನಾರ್ಗೋನಹಳ್ಳಿ ನಾಗರಾಜು, ಬಳ್ಳೇಕೆರೆ ವೆಂಕಟರಾಮು ಸೇರಿದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಮುಖಂಡರು ಉಪಸ್ಥಿತರಿದ್ದರು.
————————ಶ್ರೀನಿವಾಸ್ ಕೆ ಆರ್ ಪೇಟೆ