
ಕೆ.ಆರ್.ಪೇಟೆ:ತಾಲ್ಲೂಕಿನ ಕಸಬಾ ಹೋಬಳಿಯ ಬಂಡಿಹೊಳೆ ಪ್ರಾಥಮಿಕ ಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಿ.ಗಣೇಶ್, ಉಪಾಧ್ಯಕ್ಷರಾಗಿ ಸೋಮನಾಯಕ ಆಯ್ಕೆಯಾಗಿದ್ದಾರೆ.
ಸಂಘದ ಆಡಳಿತ ಮಂಡಳಿಯ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ಬಯಸಿ ಬಿ.ಗಣೇಶ್, ಶ್ರೀಧರ್, ಉಪಾಧ್ಯಕ್ಷ ಸ್ಥಾನ ಬಯಸಿ ಸೋಮನಾಯಕ ಮತ್ತು ಶಂಕರಯ್ಯ ಸ್ಪರ್ಧಿಸಿದ್ದರು.ಚುನಾವಣೆಯಲ್ಲಿ ಸಂಘದ ಮೇಲ್ವಿಚಾರಕರ ಮತ ಒಳಗೊಂಡಂತೆ ಬಿ.ಗಣೇಶ್ 7 ಮತಗಳನ್ನು ಪಡೆದು ಅಧ್ಯಕ್ಷರಾಗಿ,ಸೋಮನಾಯಕ 7 ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಚುನಾಯಿತರಾದರು.
ಪ್ರತಿಸ್ಪರ್ಥಿಗಳಾದ ಶ್ರೀಧರ್ ಮತ್ತು ಶಂಕರಯ್ಯ ತಲಾ 6ಮತಗಳನ್ನು ಪಡೆದು ಪರಾಭವಗೊಂಡರು. ಚುನಾವಣಾಧಿಕಾರಿಯಾಗಿ ಸಹಕಾರ ಅಭಿವೃದ್ದಿ ಅಧಿಕಾರಿ ಭರತ್ ಕುಮಾರ್, ಸಹ ಚುನಾವಣಾ ಅಧಿಕಾರಿಯಾಗಿ ಸಂಘದ ಸಿ.ಇ.ಓ ಮಹದೇವ್ ಕಾರ್ಯನಿರ್ವಹಿಸಿದರು.

ನೂತನ ಅಧ್ಯಕ್ಷ ಬಿ.ಗಣೇಶ್, ಮತ್ತು ಉಪಾಧ್ಯಕ್ಷ ಸೋಮನಾಯಕ್ ಅವರನ್ನು ಅಭಿನಂದಿಸಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಬಿ.ಎಲ್ ದೇವರಾಜು, ಸಹಕಾರ ಸಂಘಗಳು ಗ್ರಾಮೀಣ ಭಾಗದ ರೈತರ ಜೀವನಾಡಿ ಇದ್ದಂತೆ ಇದರಲ್ಲಿ ಯಾರು ಸಹ ರಾಜಕೀಯ ಮಾಡಬಾರದು.ಈ ಸತ್ಯವನ್ನು ಅರಿತುಕೊಂಡು ಸಹಕಾರ ಮೌಲ್ಯವನ್ನು ಹೆಚ್ಚಿಸಬೇಕು. ರಾಜಕೀಯ ದ್ವೇಷ ಚುನಾವಣೆಗೆ ಸೀಮಿತವಾಗಬೇಕು ಎಂದರು.
ಪಕ್ಷ ಬೇಧ ಮರೆತು ನಿರ್ದೇಶಕರುಗಳನ್ನು ಒಗ್ಗೂಡಿಸಿಕೊಂಡು ಸಂಘದ ಆರ್ಥಿಕತೆಯನ್ನು ಹೆಚ್ಚಿಸಿ ರೈತರಿಗೆ ಅನುಕೂಲವಾಗುವಂತ ಯೋಜನೆಗಳ ಬಗ್ಗೆ ಅರಿವು ಮೂಡಿಸಿ. ಸಹಕಾರ ಸಂಘದಲ್ಲಿ ರೈತರಿಗೆ ಹಾಗೂ ಸಂಘ ಸಂಸ್ಥೆಗಳಿಗೆ ನೆರವಾಗುವಂತಹ ಯೋಜನೆಯನ್ನು ಹೆಚ್ಚು ನೀಡಿದರೆ ಮಾತ್ರ ರೈತರು ಆರ್ಥಿಕವಾಗಿ ಸದೃಢರಾಗುವ ಜೊತೆಗೆ ಸಂಘವು ಅಭಿವೃದ್ಧಿಯಾಗಲು ಸಾಧ್ಯ, ನಿಮ್ಮ ಆಡಳಿತ ಅವಧಿಯಲ್ಲಿ ತಾಲೂಕಿಗೆ ಉತ್ತಮ ಸಂಘ ಎಂಬ ಹೆಸರು ಬರುವಂತಹ ಕೆಲಸವನ್ನು ಮಾಡಬೇಕು ಎಂದು ಸಲಹೆ ನೀಡಿದರು.
ಬಳಿಕ ಮಾತನಾಡಿದ ನೂತನ ಅಧ್ಯಕ್ಷರಾಗಿ ಬಿ.ಗಣೇಶ್, ನಮ್ಮ ನಾಯಕರಾದ ಟಿ.ಎ.ಪಿ.ಸಿ.ಎಂ.ಎಸ್ ಬಿ. ಎಲ್ ದೇವರಾಜು, ಮಾಜಿ ಶಾಸಕರಾದ ಕೆ.ಬಿ ಚಂದ್ರಶೇಖರ್, ಮನ್ ಮುಲ್ ನಿರ್ದೇಶಕ ಡಾಲು ರವಿ, ಎಂ.ಬಿ ಹರೀಶ್,ಕಾಂಗ್ರೆಸ್ ಮುಖಂಡ ಬೂಕನಕೆರೆ ವಿಜಯ್ ರಾಮೇಗೌಡ,ಜಿ. ಪಂ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಷ್, ಸಹಕಾರದಿಂದ ಅಧ್ಯಕ್ಷರಾಗಿ ಚುನಾವಣೆಯ ಮುಖಾಂತರ ಆಯ್ಕೆಯಾಗಿದ್ದೇನೆ. ನನ್ನ ಆಡಳಿತ ಅವಧಿಯಲ್ಲಿ ಪಕ್ಷಭೇದ ಮರೆತು ಸರ್ವ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸೊಸೈಟಿ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳ ರೈತಾಪಿ ವರ್ಗದ ಏಳಿಗೆಗೆ ಶ್ರಮಿಸಿ,ಆಡಳಿತ ಮಂಡಳಿ ಹಾಗೂ ನೌಕರರು ಹಾಗೂ ಹಿರಿಯರ ಎಲ್ಲರ ಸಹಕಾರದಿಂದ ಸಂಘದ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದು ಭರವಸೆ ನೀಡಿದರು.

ನೂತನ ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆ ಘೋಷಣೆ ಹೊರಬೀಳುತ್ತಿದ್ದಂತೆ ಬೆಂಬಲಿಗರು ಪಟಾಕಿ ಸಿಡಿಸಿ ವಿಜಯಮಾಲೆ ಹಾಕಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಸೋಮನಾಯಕ ನಿರ್ದೇಶಕರಾದ ಜಗದೀಶ್, ಮಂಜುನಾಥ್, ಬಂಡಿಹೊಳೆ ಹರೀಶ್, ಮಂಜಮ್ಮ, ಶ್ರೀಧರ್, ದರ್ಶನ್,ಮುಖಂಡರಾದ ವಿಶ್ವನಾಥ್,ಮುರುಕನಹಳ್ಳಿ ಗ್ರಾ.ಪಂ.ಸದಸ್ಯ ಶಿವು, ಯುವ ಮುಖಂಡ ಪ್ರಮೋದ್,ಪ್ರವೀಣ್, ಸುರೇಶ್, ಮಂಜುನಾಥ್, ಬಂಡಿಹೊಳೆ ರಮೇಶ್, ಪ್ರಸಾದ್,ಸಣ್ಣ ಮಂಜೇಗೌಡ,ಕೆ.ಟಿ ಮಹೇಶ್,ಪಿ ಎಲ್ ಡಿ ಬ್ಯಾಂಕ್ ಸದಸ್ಯ ನಾಗೇಶ್,ಕೆ.ಬಿ ವಿಶ್ವನಾಥ್, ರಮೇಶ್,ವಕೀಲ ಕೆ.ಎನ್.ಪಾಂಡು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.