ಕೆ.ಆರ್.ಪೇಟೆ-ಬೋಚಿಬಾಲ್ ಅಂತಾರಾಷ್ಟ್ರೀಯ ಕ್ರೀಡಾ ಕೂಟ-ವಿಶೇಷಚೇತನ ಯುವತಿ ಮುರುಕನಹಳ್ಳಿ ಮಂಜುಳಾ ಸ್ಪರ್ದಿ-ಆರ್ ಟಿ ಓ ಮಲ್ಲಿಕಾರ್ಜುನ್ ರಿಂದ ಬೀಳ್ಕೊಡುಗೆ

ಕೆ.ಆರ್.ಪೇಟೆ-ತಾಲೂಕಿನ ಗಂಜಿಗೆರೆ ಗ್ರಾಮದ ಶ್ರೀ ಲಕ್ಷ್ಮಿ ಭೂವರಾಹನಾಥ ಬುದ್ಧಿಮಾಂದ್ಯ ಶಾಲೆಯ ಯುವತಿ ಮಂಜುಳಾ ರಾಷ್ಟ್ರೀಯ ಬೋಚಿಬಾಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿ, ನವದೆಹಲಿಯಲ್ಲಿ ಇದೇ ನವೆಂಬರ್ 18 ರಿಂದ 24ರವರೆಗೆ ನಡೆಯುತ್ತಿರುವ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಭಾಗವಹಿಸಲು ತೆರಳುತ್ತಿರುವ ಹಿನ್ನೆಲೆಯಲ್ಲಿ ಸಮಾಜ ಸೇವಕ ಆರ್ ಟಿ ಓ ಮಲ್ಲಿಕಾರ್ಜುನ್ ಅವರು ಕ್ರೀಡಾಪಟು ಮಂಜುಳಾ ಮತ್ತು ತರಬೇತಿ ಶಿಕ್ಷಕಿ ಪ್ರೀತಿ ಅವರನ್ನು ಸನ್ಮಾನಿಸಿ ಗೌರವಿಸಿ ಬೀಳ್ಕೊಟ್ಟರು.

ಅಂತಾರಾಷ್ಟ್ರೀಯ ಬೋಚಿ ಬಾಲ್ ಕ್ರೀಡಾ ಕೂಟದಲ್ಲಿ 15 ರಾಷ್ಟ್ರಗಳ ತಂಡಗಳಲ್ಲಿ ಭಾರತ ದೇಶದ ತಂಡವನ್ನು ಪ್ರತಿನಿಧಿಸಲು ನವದೆಹಲಿಗೆ ತೆರಳುತ್ತಿರುವ ವಿಶೇಷಚೇತನ ಪ್ರತಿಭೆ ಮಂಜುಳ ಮತ್ತು ಕೋಚ್ ಪ್ರೀತಿ ಅವರನ್ನು ಸನ್ಮಾನಿಸಿ ಗೌರವಿಸಿದ ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ರಾಜ್ಯ ಅಧ್ಯಕ್ಷರೂ ಆಗಿರುವ ಮಲ್ಲಿಕಾರ್ಜುನ ಅವರು ಅಂತಾರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಗೆದ್ದು ಭಾರತ ದೇಶದ ಹಿರಿಮೆಯನ್ನು ಎತ್ತಿಹಿಡಿದು ನಾಡಿನ ಕೀರ್ತಿಯನ್ನು ಬೆಳಗುವಂತೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಲಕ್ಷ್ಮೀ ಭೂವರಾಹ ಬುದ್ಧಿ ಮಾಂಧ್ಯ ಮಕ್ಕಳ ಶಾಲೆಯ ವ್ಯವಸ್ಥಾಪಕ ನಿರಂಜನ್, ಆಡಳಿತಾಧಿಕಾರಿ ಸುಷ್ಮಾ, ವಿನಯ್‌ಕುಮಾರ್, ಮಣಿ, ಸಂತೋಷ್, ವಿಜಯ್ ಮತ್ತಿತರರು ಉಪಸ್ಥಿತರಿದ್ದರು.

——————--ಶ್ರೀನಿವಾಸ್ ಕೆ ಆರ್ ಪೇಟೆ

Leave a Reply

Your email address will not be published. Required fields are marked *

× How can I help you?