ಕೆ.ಆರ್.ಪೇಟೆ-ನಾಳೆ ತಾಲೂಕಿಗೆ ಸಿ.ಎಂ-ರೈತಸಭಾ ಸಹಕಾರ ಭವನ ಉದ್ಘಾಟನೆ-ಸಹಕಾರ ಸಂಘಗಳ ಹಾಗು ಸ್ತ್ರೀ ಶಕ್ತಿ ಸಂಘಗಳ ಬಹಿರಂಗ ಸಭೆ

ಕೆ.ಆರ್.ಪೇಟೆ-ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ ಕೆ.ಆರ್.ಪೇಟೆ ಪಟ್ಟಣಕ್ಕೆ ಆಗಮಿಸುತ್ತಿದ್ದು ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಪುರಸಭೆಯ ಮಾಜಿ ಅಧ್ಯಕ್ಷರಾದ ದಿವಂಗತ ಕೆ.ಎನ್.ಕೆಂಗೇಗೌಡ ಹೆಸರಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ರೈತಸಭಾ ಸಹಕಾರ ಭವನದ ಕಟ್ಟಡವನ್ನು ಉದ್ಘಾಟನೆ ಮಾಡಲಿದ್ದಾರೆ ಎಂದು ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಪುರುಷೋತ್ತಮ್ ಮಾಹಿತಿ ನೀಡಿದರು.

ಪತ್ರಿಕಾಘೋಷ್ಠಿಯಲ್ಲಿ ಮಾತನಾಡಿದ ಅವರು,ಮಧ್ಯಾಹ್ನ 12 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು ನಂತರ ಮುಖ್ಯಮಂತ್ರಿಗಳು ಟಿ.ಎ.ಪಿ.ಸಿ.ಎಂ.ಎಸ್ ಸಂಸ್ಥೆಯ ಆವರಣದಲ್ಲಿ ನಡೆಯುವ ಸಹಕಾರ ಸಂಘಗಳ ಹಾಗು ಸ್ತ್ರೀ ಶಕ್ತಿ ಸಂಘಗಳ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಬ್ಯಾಂಕಿoಗ್ ಶಾಖೆಯನ್ನು ಉದ್ಘಾಟಿಸುವರು.ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಬಿ.ಎಲ್.ದೇವರಾಜು ಗೊಬ್ಬರದ ಶಾಖೆಯನ್ನು ಉದ್ಘಾಟನೆ ಮಾಡಲಿದ್ದು,ರಾಜ್ಯದ ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದರೆ,ಶಾಸಕ ಹೆಚ್.ಟಿ.ಮಂಜು ಸಹಕಾರ ಧ್ವಜಾರೋಹಣ ನೆರವೇರಿಸುವರು ಎಂದು ತಿಳಿಸಿದರು.

ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್ ಸಂಘದ ಮಾಜಿ ಅಧ್ಯಕ್ಷರನ್ನು ಸನ್ಮಾನಿಸಲಿದ್ದು,ರಾಜ್ಯದ ಮಾಜಿ ಸಚಿವರಾದ ಡಾ.ನಾರಾಯಣಗೌಡ ಸಂಘದ ಆಡಳಿತ ಮಂಡಳಿಯ ಸದಸ್ಯರನ್ನು ಅಭಿನಂದಿಸುವರು,ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ ರೈತರಿಗೆ ಬೆಳೆ ಸಾಲ ವಿತರಿಸಿದರೆ, ಉಪಾಧ್ಯಕ್ಷ ಹೆಚ್.ಕೆ.ಅಶೋಕ್ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ವಿತರಣೆ ಚೆಕ್ ಮಾಡಲಿದ್ದು,ಸಂಘದ ಅಧ್ಯಕ್ಷ ಕೆ.ಕೆ.ಪುರುಷೋತ್ತಮ್ ಸಮಾರಂಭದ ಅಧ್ಯಕ್ಷತೆ ವಹಿಸುವರು ಎಂದರು.

ಹಾಗಾಗಿ ತಾಲೂಕಿನ ಎಲ್ಲಾಸಹಕಾರಿ ಬಂಧುಗಳು, ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಪ್ರತಿನಿಧಿಗಳು ಹಾಗೂ ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕೆ.ಆರ್.ಪೇಟೆ ಪಟ್ಟಣದ ಟಿ.ಎ.ಪಿ.ಸಿ.ಎಂ.ಎಸ್ ಆವರಣದಲ್ಲಿ ನಡೆಯಲಿರುವ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕು ಎಂದು ಪುರುಷೋತ್ತಮ್ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಭರತ್‌ಕುಮಾರ್, ಸಂಘದ ಉಪಾಧ್ಯಕ್ಷೆ ಹಿರೀಕಳಲೆ ಶೋಭಾಬಸವರಾಜು, ಸಂಘದ ಸಿಇಓ ಬಿ.ಎನ್.ಕಾಂತರಾಜು, ವೃತ್ತ ಮೇಲ್ವಿಚಾರಕರಾದ ಆದಿಲ್‌ಪಾಷ, ರಾಘವೇಂದ್ರ, ಜಲೇಂದ್ರ, ಸಂಘದ ಆಡಳಿತ ಮಂಡಳಿಯ ನಿರ್ದೇಶಕರಾದ ಕೆ.ಎನ್.ಕಾಳೇಗೌಡ, ಕೆ.ಎಸ್.ಚಂದ್ರು, ಜವರೇಗೌಡ, ಕೆ.ಟಿ.ಚಕ್ರಪಾಣಿ, ಚಂದ್ರಶೇಖರ್, ಸಿ.ಜೆ.ಮಂಜೇಗೌಡ, ಬಲರಾಮೇಗೌಡ, ರಾಜನಾಯಕ್, ರಾಜಯ್ಯ ಹಾಗೂ ಕೆ.ಆರ್.ರಘು ಉಪಸ್ಥಿತರಿದ್ದರು.

——-ಶ್ರೀನಿವಾಸ್ ಕೆ.ಆರ್ ಪೇಟೆ

Leave a Reply

Your email address will not be published. Required fields are marked *

× How can I help you?