ಕೆ.ಆರ್.ಪೇಟೆ-ಪಟ್ಟಣದ ಚಿರಾಗ್ ಮೋಟರ್ಸ್ ಕಚೇರಿಯಲ್ಲಿ 2025ರ ಹೊಸ ವರ್ಷದ ಅಂಗವಾಗಿ 12ಗ್ರಾಹಕರನ್ನು ಲಾಟರಿ ಮೂಲಕ ಬಹುಮಾನಕ್ಕೆ ಆಯ್ಕೆ ಮಾಡಲಾಯಿತು.
ತಲಾ 4ಸಾವಿರ ರೂ ಬೆಲೆ ಬಾಳುವ ಗ್ರೈಂಡರ್ ಮಿಕ್ಸಿಯನ್ನು ವಿಜೇತ ಗ್ರಾಹಕರಿಗೆ ಬಹುಮಾ ನವಾಗಿ ನೀಡಲು 2024ನೇ ಸಾಲಿನಲ್ಲಿ ವ್ಯವಹಾರ ಮಾಡಿದ ಎಲ್ಲಾ ಗ್ರಾಹಕರ ಹೆಸರು ಬರೆದು ಲಾಟರಿ ಎತ್ತುವ ಮೂಲಕ ಅದೃಷ್ಠವಂತ ಗ್ರಾಹಕರನ್ನು ಚಿರಾಗ್ ಮೋಟರ್ಸ್ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಕೆ.ಆರ್.ಪೇಟೆ ತಾಲ್ಲೂಕು ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷರಾದ ಎಂ.ಪಿ.ಲೋಕೇಶ್ ಅವರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು.
ಕೆ.ಆರ್.ಪೇಟೆ, ಮೈಸೂರು, ಗುಂಡ್ಲುಪೇಟೆ ತಾಲ್ಲೂಕುಗಳಲ್ಲಿ ವ್ಯವಹಾರ ನಡೆಸುತ್ತಿರುವ ಚಿರಾಗ್ ಮೋಟರ್ಸ್ ಕಳೆದ ಹತ್ತಾರು ವರ್ಷಗಳಿಂದ ಗ್ರಾಹಕರಿಗೆ ಸಂತೃಪ್ತಿಯ ಸೇವೆ ನೀಡುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ 2024ರಲ್ಲಿ ಚಿರಾಗ್ ಮೋಟರ್ಸ್ ಸಂಸ್ಥೆಯ ವಿವಿಧ ಶಾಖೆಗಳಲ್ಲಿ ವ್ಯವಹಾರ ಮಾಡಿದ ಗ್ರಾಹಕರಿಗೆ ಬಹುಮಾನ ನೀಡಲು ತೀರ್ಮಾನಿಸಿ ಪ್ರತಿ ಶಾಖೆಯಿಂದ 4ಮಂದಿ ಗ್ರಾಹಕರಂತೆ 12ಗ್ರಾಹಕರನ್ನು ಬಹುಮಾನಕ್ಕೆ ಆಯ್ಕೆ ಮಾಡಲಾಗಿತ್ತು.
ಕೆ.ಆರ್.ಪೇಟೆ ಶಾಖೆಯಲ್ಲಿ ಎಂ.ಬಿ.ಕೃಷ್ಣ, ಲೋಕೇಶ್, ಡಿ.ವೈ.ರಾಕೇಶ್, ಮೈಸೂರು ಶಾಖೆಯಲ್ಲಿ ಮನು, ಅಶೋಕ್, ಜಿ.ಪಿ.ಜಗದೀಶ್, ಎಂಬುವವರಿಗೆ, ಗುಂಡ್ಲುಪೇಟೆ ಶಾಖೆಯಲ್ಲಿ ಮಧು, ಕೆ.ಕೀರ್ತನಾ, ಅಶ್ವಿನಿ ಅವರುಗಳಿಗೆ ವಿಜಯಲಕ್ಷ್ಮಿ ಒಲಿದಿದ್ದಾಳೆ.
ಎಲ್ಲಾ ಗ್ರಾಹಕರನ್ನು ಕಚೇರಿಗೆ ಆಹ್ವಾನಿಸಿ ಸನ್ಮಾನಿಸುವ ಜೊತೆಗೆ ಬಹುಮಾನವನ್ನು ವಿತರಣೆ ಮಾಡಲಾಗುವುದು ಎಂದು ಚಿರಾಗ್ ಮೋಟರ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಪಿ.ಲೋಕೇಶ್ ತಿಳಿಸಿದರು.
ತಾವು ಕೆ.ಆರ್.ಪೇಟೆ ತಾಲ್ಲೂಕಿನ ಮಡುವಿನಕೋಡಿ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಡಿಪ್ಲೋಮೋ ಇಂಜಿನಿಯರಿoಗ್ ವಿದ್ಯಾಭ್ಯಾಸ ಮುಗಿಸಿ, ನಂತರ ಮೈಸೂರಿನಲ್ಲಿ ಚಿರಾಗ್ ಮೋಟರ‍್ಸ್ ಸಂಸ್ಥೆಯನ್ನು ಹುಟ್ಟು ಹಾಕಿ, ಕೆ.ಆರ್.ಪೇಟೆ, ಗುಂಡ್ಲುಪೇಟೆ, ಮೈಸೂರಿನಲ್ಲಿ ಶಾಖೆಗಳನ್ನು ಆರಂಭಿಸಿ ನೂರಾರು ಯುವಕರಿಗೆ ಉದ್ಯೋಗವನ್ನು ನೀಡುವ ಜೊತೆಗೆ ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಸಮಾಜ ಸೇವೆ ತೊಡಗಿಸಿಕೊಂಡಿದ್ದೆನು. ಇದನ್ನು ಕಣ್ಣಾರೆ ನೋಡಿ ಅಂದಿನ ಶಾಸಕರಾದ ಡಾ.ಕೆ.ಸಿ.ನಾರಾಯಣಗೌಡರು ನನ್ನನ್ನು ಎಪಿಎಂಸಿ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಆಹ್ವಾನ ನೀಡಿದರು. ನಂತರ ಎಪಿಎಂಸಿ ಅಧ್ಯಕ್ಷ ಸ್ಥಾನ ಕೊಡಿಸುವ ಮೂಲಕ ತಾಲ್ಲೂಕಿನ ರೈತರು ಮತ್ತು ಸಾರ್ವಜನಿಕರ ಸೇವೆ ಮಾಡುವ ಅವಕಾಶವನ್ನು ಕಲ್ಪಿಸಿದರು. ನನ್ನ ಅಧಿಕಾರದ ಅವಧಿಯಲ್ಲಿ ಎಪಿಎಂಸಿ ಮಾರುಕಟ್ಟೆಗೆ ಹೊಸ ಕಾಯಕಲ್ಪ ನೀಡಲು ಪ್ರಾಮಾಣಿಕ ವಾಗಿ ಶ್ರಮಿಸಿದ್ದೇನೆ ಎಂದು ತಿಳಿಸುವ ಮೂಲಕ ತಾವು ನಡೆದು ಬಂದ ದಾರಿಯನ್ನು ಮೆಲುಕು ಹಾಕಿದರು.
ಈ ಸಂದರ್ಭದಲ್ಲಿ ಕೆ.ಆರ್.ಪೇಟೆ ಚಿರಾಗ್ ಮೋಟರ‍್ಸ್ ಶಾಖೆಯ ಉಮೇಶ್, ವಿದ್ಯಾವತಿ, ಆದಿತ್ಯಾ, ತಿರುಮಲಾಂಭಿಕಾ, ಸ್ಪೂರ್ತಿ, ಗ್ರಾಹಕರಾದ ನಾಗೇಶ್, ಪ್ರತಾಪ್, ಮೈಸೂರು ಶಾಖೆಯ ಹರ್ಷ, ರಘು, ನಿರೂಷಾ, ಇಂಪನಾ, ರಂಜಿತಾ, ಪುಷ್ಪ, ಗುಂಡ್ಲುಪೇಟೆ ಶಾಖೆಯ ರೇಖಾ, ಮನೋಜ್, ಕಿಟ್ಟಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.
—-——-ಶ್ರೀನಿವಾಸ್ ಆರ್