ಕೆ.ಆರ್.ಪೇಟೆ:ಚಿರತೆಗೆ ನಿರಂತರವಾಗಿ ಬ,ಲಿಯಾಗುತ್ತಿರುವ ಸಾಕು ಪ್ರಾಣಿಗಳು-ಸೆರೆ ಹಿಡಿಯಲು ಮುಂದಾಗದ ಅರಣ್ಯ ಇಲಾಖೆ-ಭಯದಲ್ಲೇ ಬದುಕುತ್ತಿರುವ ನಿವಾಸಿಗಳು

ಕೆ.ಆರ್.ಪೇಟೆ:ತಾಲ್ಲೂಕಿನ ಅಗ್ರಹಾರಬಾಚಹಳ್ಳಿ ಸಮೀಪದ ಬಿ.ಕೋಡಿಹಳ್ಳಿ ಗ್ರಾಮದಲ್ಲಿ ಚಿರತೆಯೊಂದು ಎಮ್ಮೆಯ ಮೇಲೆ ದಾಳಿ ನಡೆಸಿ ತಿಂದು ಹಾಕಿರುವ ಘಟನೆ ನಡೆದಿದೆ.

ಬಿ.ಕೋಡಿಹಳ್ಳಿ ಗ್ರಾಮದ ತೋಟದ ಮನೆಯ ನಿವಾಸಿ ರೈತ ಮಹಿಳೆ ಗೌರಮ್ಮ ರಮೇಶ್ ಎಂಬುವವರಿಗೆ ಸೇರಿದ ಸುಮಾರು 50ಸಾವಿರ ಬೆಲೆ ಬಾಳುವ ಹಾಲು ಕರೆಯುವ ಎಮ್ಮೆಯ ಮೇಲೆ ಭಾನುವಾರ ರಾತ್ರಿ ದಾಳಿ ನಡೆಸಿರುವ ಚಿರತೆ ಭಾಗಶಃ ತಿಂದು ಪರಾರಿಯಾಗಿದೆ.

ಕಳೆದ ನಾಲ್ಕು ತಿಂಗಳಲ್ಲಿ ಐದು ಭಾರಿ ದಾಳಿ ನಡೆಸಿರುವ ಚಿರತೆಯು ಎಮ್ಮೆ, ಹಸು, ಸಾಕು ನಾಯಿ ಸೇರಿದಂತೆ ಹಲವು ಪ್ರಾಣಿಗಳನ್ನು ತಿಂದು ಹಾಕಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ.

ಪದೇ ಪದೇ ಚಿರತೆ ಕಾಣಿಸಿಕೊಳ್ಳುತ್ತಿರುವುದರಿಂದ ಬಿ.ಕೋಡಿಹಳ್ಳಿ,ಅಗ್ರಹಾರಬಾಚಹಳ್ಳಿ,ಗ್ರಾಮಸ್ಥರು ಮನೆಯಿಂದ ಹೊರಬರಲು ಭಯಪಡು ತ್ತಿದ್ದಾರೆ. ಹಾಗಾಗಿ ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಬೋನಿಟ್ಟು ಚಿರತೆಯನ್ನು ಸೆರೆ ಹಿಡಿಯುವ ಮೂಲಕ ಜನರಲ್ಲಿ ಇರುವ ಆತಂಕವನ್ನು ದೂರ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.

ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಸುನಿಲ್, ಪಶು ವೈದ್ಯಕೀಯ ಸಹಾಯಕ ನಿರ್ದೇಶಕ ಡಾ.ಹೆಚ್.ಎಸ್.ದೇವರಾಜು, ತಾಲ್ಲೂಕು ಅರಣ್ಯ ಸಂರಕ್ಷಣಾಧಿಕಾರಿ ಅನಿತಾ ಮತ್ತಿತರರು ಬೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.

——–-ಶ್ರೀನಿವಾಸ್ ಕೆ ಆರ್ ಪೇಟೆ

Leave a Reply

Your email address will not be published. Required fields are marked *

× How can I help you?