ಕೆ.ಆರ್.ಪೇಟೆ: ಮುಖ್ಯಮಂತ್ರಿಗಳ ಚಿನ್ನದ ಪದಕ ಗೌರವಕ್ಕೆ ಭಾಜನರಾಗಿರುವ ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಸುಮಾರಾಣಿ ಅವರನ್ನು ಕೆ.ಆರ್.ಪೇಟೆ ತಾಲ್ಲೂಕು ಸ್ನೇಹ ಬಳಗದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸ್ನೇಹ ಬಳಗದ ಪದಾಧಿಕಾರಿಗಳಾದ ರೇಖಾಲೋಕೇಶ್, ಚೌಡೇನಹಳ್ಳಿ ಜೆಸಿಬಿ.ರವಿ, ಲೋಲಾಕ್ಷಿ ಜಗದೀಶ್, ಸತೀಶ್, ಬೀರೇಶ್, ರತಿ ಮಹದೇವ್ ಮತ್ತಿತರರ ನೇತೃತ್ವದಲ್ಲಿ ಪ್ರತಿಷ್ಠಿತ ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದು ತಾಲ್ಲೂಕಿನ ಗೌರವವನ್ನು ಹೆಚ್ಚಿಸಿರುವ ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಇನ್ಸ್ ಪೆಕ್ಟರ್ ಸುಮಾರಾಣಿ ಅವರಿಗೆ ಮೈಸೂರು ಪೇಟ ತೊಡಿಸಿ, ಫಲತಂಬೂಲ ನೀಡಿ ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಮಾತನಾಡಿ ರೇಖಾ ಲೋಕೇಶ್, ಅವರು ತಾಲ್ಲೂಕಿನಲ್ಲಿ ಉತ್ತಮ ಅಧಿಕಾರಿಯಾಗಿ ಕೆಲಸ ನಿರ್ವಹಿಸುವ ಮೂಲಕ ಒಳ್ಳೆಯ ಹೆಸರು ಪಡೆದಿರುವ ಸುಮಾರಾಣಿ ಅವರಿಗೆ ಮುಖ್ಯಮಂತ್ರಿ ಚನ್ನದ ಪದಕ ರಾಜ್ಯ ಮಟ್ಟದ ಪ್ರಶಸ್ತಿ ಸಿಕ್ಕಿರುವುದು ತಾಲ್ಲೂಕಿಗೆ ಸಂದ ಗೌರವವಾಗಿದೆ. ಇದೇ ರೀತಿ ತಮ್ಮ ದಕ್ಷ, ಪ್ರಾಮಾಣಿಕ ಸೇವೆ ತಾಲ್ಲೂಕಿಗೆ ಸಿಗಲಿ, ಇನ್ನೂ ಉನ್ನತ ಮಟ್ಟದ ಪ್ರಶಸ್ತಿ, ಗೌರವಗಳು ದೊರಕಲಿ ಎಂದು ಶುಭ ಹಾರೈಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸಿ.ಪಿ.ಐ ಸುಮಾರಾಣಿ ಅವರು ನನಗೆ ಮುಖ್ಯಮಂತ್ರಿಗಳ ಪದಕ ಘೋಷಣೆಯಾದ ದಿನದಿಂದ ದಿನೇ ದಿನೇ ತಾಲ್ಲೂಕಿನ ಹಲವಾರು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸನ್ಮಾನಿಸುವ ಮೂಲಕ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದ್ದೀರಿ ನಿಮ್ಮ ಈ ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಚಿರಋಣಿಯಾಗಿರುವುದಾಗಿ ತಿಳಿಸಿದರು.
– ಶ್ರೀನಿವಾಸ್ ಆರ್.