ಕೆ.ಆರ್.ಪೇಟೆ : ಅಖಿಲ ಭಾರತ ಡಾ.ಬಿ.ಆರ್ ಅಂಬೇಡ್ಕರ್ ಸೈನ್ಯ ಮಂಡ್ಯ ಜಿಲ್ಲಾ ಘಟಕದ ವತಿಯಿಂದ ಕೆ.ಆರ್. ಪೇಟೆ ತಾಲೂಕು ಕತ್ತರಘಟ್ಟ ಗ್ರಾಮಕ್ಕೆ ಭೇಟಿ ನೀಡಿ ಸವರ್ಣೀಯ ವ್ಯಕ್ತಿಯ ದೌರ್ಜನಕ್ಕೆ ಸುಲುಕಿ, ದಲಿತ ವ್ಯಕ್ತಿ ಸಜೀವ ದಹನಕ್ಕೆ ಒಳಗಾಗಿರುವ ನೊಂದ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಲಾಯಿತು.
ಘಟನೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ಪಡೆದು ದೌರ್ಜನ್ಯಕ್ಕೆ ಒಳಗಾದ ಕುಟುಂಬಕ್ಕೆ ಸಾಂತ್ವನ ಹೇಳಿದರು. ಸವರ್ಣೀಯ ವ್ಯಕ್ತಿಯಿಂದ ಸಜೀವ ದಹನಕ್ಕೆ ತುತ್ತಾಗಿರುವ ಜಯಕುಮಾರ್ ಕುಟುಂಬಕ್ಕೆ ಭೇಟಿ ನೀಡಿ ಪತ್ನಿ ಲಕ್ಷ್ಮೀ ಮತ್ತು ಮಕ್ಕಳು ಸಂಬಂಧಿಕರನ್ನು ಭೇಟಿ ಮಾಡಿ ಕುಟುಂಬಕ್ಕೆ ಸಾಂತ್ವನ ಹೇಳಿ ನಂತರ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಊರಿನ ಗ್ರಾಮಸ್ಥರು ಜೊತೆಗೂಡಿ ಪರಿಶೀಲನೆ ಮಾಡಲಾಯಿತು.

ಅಖಿಲ ಭಾರತ ಡಾ.ಬಿ.ಆರ್.ಅಂಬೇಡ್ಕರ್ ಸೈನ್ಯದ ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷರಾದ ಬಂಡೂರು ಸಿದ್ದರಾಜು ಮಾತನಾಡಿ, ಗ್ರಾಮದ ಸವರ್ಣೀಯರು ಹಾಗೂ ದಲಿತ ಮುಖಂಡರಿಂದಲೂ ಮಾಹಿತಿ ಪಡೆದು ಮೇಲ್ನೋಟಕ್ಕೆ ಈ ಜೀವಂತ ದಹನ ಪ್ರಕರಣ ವ್ಯವಸ್ಥಿತ ಕೊಲೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಹಾಗಾಗಿ ಸೂಕ್ತ ತನಿಖೆಯನ್ನು ನಡೆಸಿ ಆರೋಪಿಗಳಿಗೆ ಕಾನೂನಾತ್ಮಕವಾಗಿ ಶಿಕ್ಷೆ ನೀಡಬೇಕು
ನೊಂದ ಕುಟುಂಬಕ್ಕೆ 50 ಲಕ್ಷಗಳ ಪರಿಹಾರದ ಜೊತೆಗೆ ಸರ್ಕಾರಿ ಉದ್ಯೋಗವನ್ನು ನೀಡಬೇಕು. ಮಕ್ಕಳ ಶಿಕ್ಷಣ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಂಡು ಸಾಮಾಜಿಕ ನ್ಯಾಯವನ್ನು ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ದಲಿತರ ಪರ ಕಠಿಣವಾದ ಕಾನೂನುಗಳಿದ್ದರೂ ದಲಿತರ ಮೇಲಿನ ದೌರ್ಜನ್ಯ ದಬ್ಬಾಳಿಕೆ ನಿಲ್ಲುತ್ತಿಲ್ಲ. ಕಾನೂನಿನ ಅಡಿಯಲ್ಲಿ ತಪ್ಪಿಸ್ಥರಿಗೆ ಶಿಕ್ಷೆ ಆಗುತ್ತಿಲ್ಲ ಅಧಿಕಾರಿಗಳೇ ಕಾನೂನಿಗೆ ಭ್ರಷ್ಟರಾಗಿ ಅನ್ಯಾಯವೆಸಗುತ್ತಿದ್ದಾರೆ ಆಮಿಷಗಳಿಗೆ ಒಳಗಾಗಿ ತಮ್ಮನ್ನು ತಾವು ಮಾರಿಕೊಳ್ಳುತ್ತಿದ್ದಾರೆ ದಲಿತರಿಗೆ ಸೂಕ್ತ ರಕ್ಷಣೆ ನೀಡುತ್ತಿಲ್ಲ ನ್ಯಾಯ ಸಿಗುತ್ತಿಲ್ಲ ಪರಿಹಾರ ಸಿಗುತ್ತಿಲ್ಲ ಸಂವಿಧಾನಾತ್ಮಕವಾಗಿ ನಮಗೂ ಬದುಕುವ ಹಕ್ಕಿದೆ ನ್ಯಾಯ ಕೇಳುವ ಹಕ್ಕಿದೆ ಈ ಬಡ ಕುಟುಂಬಕ್ಕೆ ಸಾಮಾಜಿಕ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಎಂದು ಮಂಡ್ಯ ಜಿಲ್ಲಾಧ್ಯಕ್ಷರಾದ ಬಂಡೂರು ಸಿದ್ದರಾಜು ರವರು ತಮ್ಮ ಅಸಮಧಾನ ವ್ಯಕ್ತಪಡಿಸಿದರು.
ಸರ್ಕಾರ ಹಾಗೂ ಅಧಿಕಾರಿಗಳು ಕೂಡಲೇ ಈ ನೊಂದ ಕುಟುಂಬಕ್ಕೆ ಸಾಮಾಜಿಕ ನ್ಯಾಯ ಪರಿಹಾರವನ್ನು ನೀಡಿ ಈ ನೆಲದ ಕಾನೂನಿಗೆ ಗೌರವ ನೀಡಬೇಕೆಂದು ಒತ್ತಾಯ ಮಾಡಿದರು.

ಇದೇ ಸಂದರ್ಭದಲ್ಲಿ ಹಲಗೂರು ಹೋಬಳಿ ಘಟಕದ ಅಂಬೇಡ್ಕರ್ ಸೈನ್ಯದ ಅಧ್ಯಕ್ಷರಾದ ಹಲಗೂರು ಶಿವಕುಮಾರ್, ಮಲಿಯೂರು ಮಲ್ಲು, ಕಲ್ಲಾರೆಪುರ ಚುಂಚಣ್ಣ, ದೊಡ್ಡ ಮಾದೇವು ಹಾಗೂ ಕೆ ಆರ್ ಪೇಟೆ ತಾಲ್ಲೂಕು ಅಧ್ಯಕ್ಷರಾದ ಐಪನಹಳ್ಳಿ ಪ್ರಕಾಶ್ ದಲಿತ ಸಂಘರ್ಷ ಸಮಿತಿಯ ಸ್ಥಳೀಯ ಮುಖಂಡರು ಊರಿನ ಯಜಮಾನರು ಗ್ರಾಮಸ್ಥರು ಹಾಜರಿದ್ದರು.
ಇದೇ ತಿಂಗಳು 27ನೇ ತಾರೀಕು ಬೃಹತ್ ಪ್ರತಿಭಟನೆ ನಡೆಸಲು ಪ್ರಗತಿಪರ ಚಿಂತಕರು ತೀರ್ಮಾನ ಕೈಗೊಂಡಿದ್ದು ತಾಲ್ಲೂಕಿನ ಹಾಗೂ ಜಿಲ್ಲೆಯ ಎಲ್ಲಾ ಪ್ರಗತಿಪರ ಸಂಘಟನೆಗಳು ದಲಿತ ಪರ ಸಂಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
– ಶ್ರೀನಿವಾಸ್ ಆರ್.