ಕೆ.ಆರ್.ಪೇಟೆ-ಇದ್ದ ಮೂರು ಹಸುಗಳು ಸತ್ತುಹೋದವು-ಬಡ ದೇವ ಮ್ಮಳ ಸ್ಥಿತಿ ಘೋರ-ತುರ್ತಾಗಿ ಸ್ಪಂದಿಸಬೇಕಿದೆ ತಾಲೂಕು ಆಡಳಿತ

ಕೆ.ಆರ್.ಪೇಟೆ-ತಾಲ್ಲೂಕಿನ ಕಸಬಾ ಹೋಬಳಿಯ ಹರಿಹರಪುರ ಗ್ರಾಮದ ಬಡರೈತ ಮಹಿಳೆ ದೇವಮ್ಮ ಜೀವನೋ ಪಾಯಕ್ಕಾಗಿ ಸಾಕಿದ್ದ ಮೂರು ಹಸುಗಳು ನಿಗೂಢವಾಗಿ ಆಕಾಲಿಕ ಮರಣಕ್ಕೆ ತುತ್ತಾಗಿದ್ದು ಜೀವನ ನಿರ್ವಹಣೆ ಕಷ್ಟಕರವಾಗಿದೆ ಸರ್ಕಾರ ಕೂಡಲೇ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ.

ದೇವಮ್ಮ ಪತಿಯನ್ನು ಕಳೆದುಕೊಂಡು ಸ್ವಾಭಿಮಾನಿಯಾಗಿ ಕಷ್ಟಪಟ್ಟು ಹಸುಗಳನ್ನು ಸಾಕಿಕೊಂಡು ಜೀವನ ಸಾಗಿಸುತ್ತಿದ್ದಾರೆ.ಶನಿವಾರ ಜಮೀನಿನ ಬಳಿ ಹಸುಗಳನ್ನು ಮೇಯಿಸಿಕೊಂಡು ಬಂದು ಸಂಜೆ ಹಾಲು ಕರೆದು ನಂತರ ಮೇವು ಹಾಕಿ ಮಲಗಿದ್ದಾರೆ.ಬಳಿಗ್ಗೆ ಎದ್ದು ನೋಡಲಾಗಿ ಮೂರು ಹಸುಗಳು ಸಾಮೂಹಿಕ ಸಾವನ್ನಪ್ಪಿವೆ.ಇದನ್ನ ಕಂಡ ದೇವಮ್ಮನಿಗೆ ದಿಕ್ಕೇ ತೋಚದಂತಾಗಿದ್ದು.ಆಕಾಶವೇ ಕಳಚಿ ಬಿದ್ದಂತಾಗಿ ರೋಧನೆ ವ್ಯಕ್ತಪಡಿಸುತ್ತಿದ್ದಾರೆ.

ನಾನು ಗಂಡನನ್ನು ಕಳೆದುಕೊಂಡ ವಿಧವೆಯಾಗಿದ್ದು, ಕಡುಬಡತನದಿಂದ ಜೀವನ ನಡೆಸುತ್ತಿದ್ದೇನೆ. ಜೀವನೋಪಾಯಕ್ಕಾಗಿ ಹಸು ಸಾಕಿ ಹೈನುಗಾರಿಕೆ ಮಾಡಿಕೊಂಡು ಹೈನುಗಾರಿಕೆಯನ್ನೇ ನಂಬಿ ಜೀವನ ನಡೆಸುತ್ತಿದ್ದೆನು, ಆದರೆ ನನ್ನ ಜೀವನಕ್ಕೆ ಆಧಾರವಾಗಿದ್ದ ಸುಮಾರು 1ಲಕ್ಷ ರೂ ಬೆಲೆಯ ಮೂರೂ ಹಸುಗಳು ಏಕಕಾಲದಲ್ಲಿ ಆಕಸ್ಮಿಕವಾಗಿ ಸಾವನ್ನಪ್ಪಿದ್ದು, ಇದರಿಂದ ನನಗೆ ಬರಸಿಡಿಲು ಬಡಿದಂತಾಗಿದೆ.ಮುಂದೆ ಹೇಗೆ ಜೀವನ ನಡೆಸುವುದು ಎಂಬುದರ ಬಗ್ಗೆ ದಾರಿ ಕಾಣದಂತಾಗಿದೆ.ಕೂಡಲೇ ನಮಗೆ ಸರ್ಕಾರವು ನನಗೆ ಮತ್ತೆ ಹೈನುಗಾರಿಕೆ ಕೈಗೊಳ್ಳಲು ಸಹಕಾರಿಯಾಗುವಂತೆ ಸೂಕ್ತ ಪರಿಹಾರ ನೀಡಬೇಕು ಎಂದು ದೇವಮ್ಮ ಸರ್ಕಾರಕ್ಕೆ ಹಾಗೂ ತಾಲ್ಲೂಕು ಆಡಳಿತಕ್ಕೆ ಮನವಿ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ತಾಲ್ಲೂಕು ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಹೆಚ್.ಎಸ್. ದೇವರಾಜು ಅವರು ಮೂರೂ ಹಸುಗಳು ಒಂದೇ ಸಮಯದಲ್ಲಿ ಸಾವನ್ನಪ್ಪಲು ನಿಖರವಾದ ಕಾರಣ ಕಂಡು ಬಂದಿಲ್ಲ. ವೈದ್ಯಕೀಯ ಪರೀಕ್ಷೆ ವರದಿ ಬಂದ ನಂತರ ನಿಖರ ಕಾರಣ ಗೊತ್ತಾಗಲಿದೆ. ನಂತರ ಸೂಕ್ತ ಪರಿಹಾರ ದೊರಕಿಸಿಕೊಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

——————ಶ್ರೀನಿವಾಸ್ ಆರ್

Leave a Reply

Your email address will not be published. Required fields are marked *

× How can I help you?