ಕೆ.ಆರ್.ಪೇಟೆ-ದೇವೇಗೌಡರ-ಸೇವೆ-ರಾಷ್ಟ್ರ-ರಾಜ್ಯಕ್ಕೆ-ಅಗತ್ಯ- ಹೆಚ್.ಟಿ.ಮಂಜು

ಕೆ.ಆರ್.ಪೇಟೆ: ದೇಶ ಕಂಡ ಅಪರೂಪದ ರಾಜಕಾರಣಿ, ಮಣ್ಣಿನ ಮಗ, ರೈತ ನಾಯಕ, ಜೆಡಿಎಸ್ ಪಕ್ಷದ ಸರ್ವೋಚ್ಚ ನಾಯಕ ಹೆಚ್.ಡಿ.ದೇವೇಗೌಡರು 91 ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಕ್ಷೇತ್ರದ ಶಾಸಕ ಹೆಚ್.ಟಿ.ಮಂಜು ಅವರ ನೇತೃತ್ವದಲ್ಲಿ ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸಾರ್ವಜನಿಕ ಆಸ್ಪತ್ರೆಯ ಹೊರ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಹಾಗೂ ಪೌರಕಾರ್ಮಿಕರಿಗೆ ಬಟ್ಟೆಗಳನ್ನು ವಿತರಿಸಿ, ರೈತರಿಗೆ ತೆಂಗಿನ ಸಸಿಗಳನ್ನು ನೀಡುವ ಮೂಲಕ ಮಾಜಿ ಪ್ರಧಾನಿ ದೇವೇಗೌಡರ ಹುಟ್ಟುವನ್ನು ಅರ್ಥಪೂರ್ಣವಾಗಿ ಹುಟ್ಟು ಹಬ್ಬವನ್ನು ಆಚರಿಸಲಾಯಿತು.

ಅರ್ಥಪೂರ್ಣ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ನೂತನ ಶಾಸಕ ಹೆಚ್.ಟಿ.ಮಂಜು ಅವರು, ದೇವೇಗೌಡ ಅಪ್ಪಾಜಿಯವರ ಸೇವೆ ರಾಷ್ಟ್ರಕ್ಕೆ ಹಾಗೂ ರಾಜ್ಯಕ್ಕೆ ಅಗತ್ಯವಿರುವುದರಿಂದ ಅವರಿಗೆ ಭಗವಂತ ದೀರ್ಘಕಾಲ ಬಾಳಿಕೆ ಮಾಡುವಂತೆ ದೇವರಲ್ಲಿ ಪ್ರಾರ್ಥನೆ ಮಾಡಿದರು.

ರೈತರ ಬಗ್ಗೆ ಹಿತ ಚಿಂತನೆ ಉಳ್ಳ ವ್ಯಕ್ತಿ ಎಂದರೆ ದೇವೇಗೌಡರು ಎಂದರೆ ತಪ್ಪಾಗಲಾರದು. ಮಹಿಳೆಯರ ಬಗ್ಗೆ ವಿಶೇಷ ಕಾಳಜಿವುಳ್ಳವರು. ನಾಡಿನ ಅಭಿವೃದ್ಧಿಯ ಚಿಂತಕರು ದೇವೇಗೌಡ್ರು ಅಪ್ಪಾಜಿಯವರು. ಅಷ್ಟೇ ಅಲ್ಲದೆ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ದೆಹಲಿ ಮೆಟ್ರೋ ಯೋಜನೆಯನ್ನು ಜಾರಿಗೊಳಿಸಿದ ಕೀರ್ತಿ ದೇವೇಗೌಡರಿಗೆ ಸಲ್ಲುತ್ತದೆ. ಹೀಗೆ ಸಾವಿರಾರು ಸಾಧನೆಗಳನ್ನು ರೈತರಿಗಾಗಿ  ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ನಮ್ಮ ಕೆ.ಆರ್.ಪೇಟೆ ತಾಲ್ಲೂಕಿಗೆ ಹೇಮಾವತಿ ಜಲಾಶಯ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ತಾಲ್ಲೂಕಿನ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. 9೦ರ ಇಳಿ ವಯಸ್ಸಿನಲ್ಲಿಯೂ  ಯುವಕರು ನಾಚುವಂತೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ರೈತರ ಪರವಾಗಿ ಯೋಜನೆಗಳನ್ನು ಜಾರಿಗೊಳಿಸುವಂತೆ ಹೋರಾಟ ಮಾಡುವುದನ್ನು ನಾವು ನೋಡಿದ್ದೇವೆ. ದೇವೇಗೌಡರ ರಾಜಕೀಯ ಚಿಂತನೆಗಳು, ರೈತರು ಧೀನ ದಲಿತರು, ಬಡವರ ಪರ ಕಾಳಜಿ ಎಲ್ಲಾ ರಾಜಕಾರಣಿಗಳಲ್ಲಿ ಇದ್ದರೆ ಉತ್ತಮ ಸಮಾಜ ನಿರ್ಮಾಣ ಮಾಡಬಹುದಾಗಿದೆ ಎಂದು ಹೆಚ್.ಟಿ.ಮಂಜು ಹೇಳಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಂ, ಮನ್‌ಮುಲ್  ನಿರ್ದೇಶಕ ಡಾಲು ರವಿ, ತಾಲ್ಲೂಕು ಜೆಡಿಎಸ್ ಕಾನೂನು ಘಟಕದ  ಅಧ್ಯಕ್ಷ ವಿ.ಎಸ್.ಧನಂಜಯಕುಮಾರ್, ಜಿ.ಪಂ.ಮಾಜಿ ಉಪಾಧ್ಯಕ್ಷೆ ಗಾಯಿತ್ರಿರೇವಣ್ಣ, ಮುಖಂಡರಾದ ಬಿ.ವಿ.ನಾಗೇಶ್, ಬಸವಲಿಂಗಪ್ಪ, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಶಿವಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಧುಸೂದನ್, ಸೇರಿದಂತೆ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *

× How can I help you?