ಕೆ.ಆರ್ ಪೇಟೆ:ಸಡಗರ,ಸಂಭ್ರಮದಿಂದ ಜರುಗಿದ ದೇವಿರಮ್ಮ (ತಂದ್ರಮ್ಮ ದೇವಿ) ಅಮ್ಮನವರ ಉತ್ಸವ

ಕೆ.ಆರ್ ಪೇಟೆ:ಪಟ್ಟಣದಲ್ಲಿ ದೇವಿರಮ್ಮ (ತಂದ್ರಮ್ಮ ದೇವಿ) ಅಮ್ಮನವರ ಉತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಪಟ್ಟಣದ ಅಂಬೇಡ್ಕರ್ ನಗರ ಬಡಾವಣೆಯ ಜನರು, ಮಹಿಳೆಯರು, ಪುರುಷರು,ಮಕ್ಕಳು, ಯುವತಿಯರು, ಯುವಕರು ಉತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ದೇವಿರಮ್ಮ ಅಮ್ಮನವರ ದೇವರನ್ನು ವಳಗೆರೆಮೆಣಸ ಗ್ರಾಮದಿಂದ ತಂದು ಪಟ್ಟಣದ ಹೊರಭಾಗದಲ್ಲಿರುವ ದೇವಿರಮ್ಮಿಣ್ಣಿ ಕೆರೆಯಲ್ಲಿ ಅಮ್ಮನವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ನಂತರ ಪಟ್ಟಣದ ‌ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ.

ಅಂಬೇಡ್ಕರ್ ನಗರ ಬಡಾವಣೆಯಲ್ಲಿರುವ ಚಿಕ್ಕಮ್ಮ ದೇವಾಲಯಕ್ಕೆ ಕರೆತಂದು ವಿಶೇಷ ಪೂಜೆಯನ್ನು ಮಾಡಿದ ನಂತರ ಬಡಾವಣೆಯ ಎಲ್ಲಾ ಬೀದಿಗಳಲ್ಲಿ ಅಮ್ಮನವರನ್ನು ಮೆರವಣಿಗೆ ನಡೆಸಲಾಗುತ್ತದೆ..

ಮೆರವಣಿಗೆ ಹೊರಡುವ ಮುನ್ನ ದೇವಿರಮ್ಮ ಅಮ್ಮನವರ ಹಿಂದೆ ಮಹಿಳೆಯರು,ಯುವತಿಯರು ತಂಬಿಟ್ಟು ಆರತಿ ಹೊತ್ತು ಸಾಗಿಸಿದರು.ತಮಟೆಯ ಸದ್ದಿಗೆ ದೇವಿರಮ್ಮ ಅಮ್ಮನವರ ನೃತ್ಯ ನೋಡಿದ ಭಕ್ತಾದಿಗಳು ಪುಳಕಿತರಾದರು.ಉತ್ಸವದಲ್ಲಿ ಭಾಗವಹಿಸಿದ್ದ ಎಲ್ಲಾ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ದೇವಿರಮ್ಮ ಅಮ್ಮನವರ ಉತ್ಸವದ ಅಂಗವಾಗಿ ಅಂಬೇಡ್ಕರ್ ನಗರ ಬಡಾವಣೆಯ ಎಲ್ಲಾ ಬೀದಿಗಳು ಬಗೆ ಬಗೆಯ ಬಣ್ಣದ ರಂಗೋಲಿ, ತಳಿರು ತೋರಣಗಳಿಂದ ಹಾಗೂ ಲೈಟಿಂಗ್ಸ್ ನಿಂದ ಸಿಂಗರಿಸಲಾಗಿತ್ತು.

ಈ ಸಂದರ್ಭದಲ್ಲಿ ಅಂಬೇಡ್ಕರ್ ನಗರ ಬಡಾವಣೆಯ ಯಜಮಾನರು, ಪುರಸಭೆಯ ಹಿರಿಯ ಸದಸ್ಯರಾದ ಡಿ ಪ್ರೇಂಕುಮಾರ್,ಪುರಸಭೆಯ ಉಪಾಧ್ಯಕ್ಷರಾದ ಸೌಭಾಗ್ಯ ಉಮೇಶ್,ಸಮಾಜ‌ ಸೇವಕ ಆರ್ ಟಿ ಓ ಅಧಿಕಾರಿಗಳಾದ ಮಲ್ಲಿಕಾರ್ಜುನ್ ಆಪ್ತ ಸಹಾಯಕ ಗಂಜಿಗೆರೆ ಮಹೇಶ್, ಆನಂದ್,ರಮೇಶ್,ದೊಡ್ಡಯ್ಯ,,ಶಿವಪ್ರಕಾಶ್,ನಾಗರಾಜು,ರಮೇಶ್,ಜಗದೀಶ್,ಕೀರ್ತಿ,ಪವಿಕುಮಾರ್,ಅವಿನಾಶ್,ಶಿವಕುಮಾರ್,ವಿಶ್ವನಾಥ್,ಗಣೇಶ್, ಹರೀಶ್,ಮಹೇಶ್,ಅಣ್ಣಾಜಿ, ಸೇರಿದಂತೆ ಅಂಬೇಡ್ಕರ್ ನಗರದ ಹಿರಿಯ ಮುಖಂಡರು, ಯುವಕರು, ಇತರರು ಹಾಜರಿದ್ದರು.

——–ಶ್ರೀನಿವಾಸ್ ಕೆ ಆರ್ ಪೇಟೆ

Leave a Reply

Your email address will not be published. Required fields are marked *

× How can I help you?