
ಕೆ.ಆರ್.ಪೇಟೆ-ದೇವಾಲಯಗಳು ಮನಸ್ಸಿಗೆ ಶಾಂತಿ ನೆಮ್ಮದಿಯನ್ನು ನೀಡುವ ತಾಣಗಳಾಗಿವೆ. ಈ ತಾಣಗಳನ್ನು ಉಳಿಸಲು ಎಲ್ಲರ ಸಹಕಾರ ಅಗತ್ಯವಾಗಿದೆ. ದೇವರು-ಧರ್ಮದ ಮಾರ್ಗದಲ್ಲಿ ಸಾಗಿದರೆ ಮಾಡುವ ಕಾರ್ಯದಲ್ಲಿ ಯಶಸ್ಸು ಖಚಿತವಾಗಿ ಸಿಗುತ್ತದೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಅವರು ಕೆ.ಆರ್.ಪೇಟೆ ಗ್ರಾಮ ದೇವತೆ ಶ್ರೀ ದೊಡ್ಡಕೇರಮ್ಮ ನೂತನ ದೇವಾಲಯದ ಉದ್ಘಾಟನೆ ಹಾಗೂ ಶ್ರೀರಥದ ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಶಿಥಿಲವಾಗಿದ್ದ ಗ್ರಾಮದೇವತೆಯ ದೇವಾಲಯವನ್ನು ವಾಸ್ತುಬದ್ಧವಾಗಿ ನೂತನವಾಗಿ ಭವ್ಯವಾಗಿ ಪುನರ್ ನಿರ್ಮಿಸುವ ಮೂಲಕ ಕೆ.ಆರ್. ಪೇಟೆ ಗ್ರಾಮಸ್ಥರು ಇಡೀ ನಾಗರೀಕ ಸಮಾಜವೇ ಮೆಚ್ಚುವಂತಹ ಕೆಲಸ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ.ದೇವರ ಸ್ಮರಣೆ ಹಾಗೂ ಪೂಜೆಯಿಂದ ಕಾಲ ಕಾಲಕ್ಕೆ ಮಳೆಯಾಗಿ ಒಳ್ಳೆಯ ಬೆಳೆಯಾಗಿ ಸಮಾಜದಲ್ಲಿ ಶಾಂತಿ ಸುಭಿಕ್ಷೆ ಹಾಗೂ ನೆಮ್ಮದಿಯು ನೆಲಸಲಿ. ಅನ್ನಧಾತರಾದ ರೈತರ ಬಾಳು ಬಂಗಾರವಾಗಲಿ ಎಂದು ಚಲುವರಾಯಸ್ವಾಮಿ ಶುಭ ಹಾರೈಸಿದರು.
ಶಾಸಕ ಹೆಚ್.ಟಿ.ಮಂಜು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಕುರಿತು ಮಾತನಾಡಿ,ಸತತ ಏಳ ವರ್ಷಗಳಿಂದ ನಿಲ್ಲಿಸಲಾಗಿದ್ದ ದೊಡ್ಡಕೇರಮ್ಮನ ಹಬ್ಬ ಆಚರಣೆಗೆ ಮುಂದಾಗಿರುವ ಕೆ.ಆರ್.ಪೇಟೆ ಗ್ರಾಮಸ್ಥರನ್ನು ಮಕ್ತಕಂಠದಿoದ ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಸ್ಟಾರ್ ಚಂದ್ರು, ಆರ್.ಟಿ.ಓ.ಮಲ್ಲಿಕಾರ್ಜುನ್, ಮೈ ಷುಗರ್ ಅಧ್ಯಕ್ಷ ಹಾಗೂ ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಜಿ.ಪಂ.ಮಾಜಿ ಉಪಾಧ್ಯಕ್ಷ ಎಸ್.ಅಂಬರೀಶ್, ಪುರಸಭೆ ಮಾಜಿ ಅಧ್ಯಕ್ಷ ಕೆ.ಟಿ.ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ನಾಗೇಂದ್ರಕುಮಾರ್, ಪುರಸಭೆ ಅಧ್ಯಕ್ಷೆ ಪಂಕಜಾಪ್ರಕಾಶ್, ಉಪಾಧ್ಯಕ್ಷೆ ಸೌಭಾಗ್ಯ ಉಮೇಶ್, ಸ್ಥಾಯಿಸಮಿತಿ ಅಧ್ಯಕ್ಷ ರವೀಂದ್ರಬಾಬು, ಕಸಬಾ ಸೊಸೈಟಿ ಅಧ್ಯಕ್ಷ ಪುರುಷೋತ್ತಮ್, ಕಾಂಗ್ರೆಸ್ ವಕ್ತಾರ ಸಿ.ಆರ್.ರಮೇಶ್, ಉಧ್ಯಮಿ ಬಿ.ರಾಜಶೇಖರ್, ವಕೀಲ ಬಿ.ನಾಗೇಶ್, ಪುರಸಭೆ ಸದಸ್ಯರಾದ ಡಿ.ಪ್ರೇಮಕುಮಾರ್, ಕೆ.ಎಸ್.ಪ್ರಮೋದ್, ಬಸ್ ಸಂತೋಷ್, ನಟರಾಜ್, ಮಹಾದೇವಿ, ಸುಗುಣ, ಕೆ.ಸಿ.ಮಂಜುನಾಥ್, ಗ್ರಾಮದ ಯಜಮಾನರಾದ ಹೆಗ್ಗಡಿ ಕೃಷ್ಣೇಗೌಡ, ಪಟೇಲ್ ಚಂದ್ರಣ್ಣ, ಪುರಸಭೆ ಮಾಜಿ ಅಧ್ಯಕ್ಷ ಚಂದ್ರೇಗೌಡ, ಕೆ.ಸಿ. ವಾಸು, ಉಧ್ಯಮಿ ಚಂದ್ರಶೇಖರ್ ಸೇರಿದಂತೆ ಸಾವಿರಾರು ಮಂದಿ ಸಾರ್ವಜನಿಕರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಡಾ.ಅಶೋಕ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸುಷ್ಮಾ, ಪೊಲೀಸ್ ಇನ್ಸ್ ಪೆಕ್ಟರ್ ಸುಮಾರಾಣಿ, ಗ್ರಾಮದ ಮುಖಂಡರಾದ ಪಟೇಲ್ ಚಂದ್ರಣ್ಣ, ಹೆಗ್ಗಡಿ ಕೃಷ್ಣೇಗೌಡ ಅವರನ್ನು ಶ್ರೀ ದೊಡ್ಡಕೇರಮ್ಮ ದೇವಾಲಯ ಸಮಿತಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
–—ವರದಿ-ಶ್ರೀನಿವಾಸ್ ಆರ್