ಕೆ.ಆರ್.ಪೇಟೆ – ಶೋಷಿತರು ಸೇರಿದಂತೆ ತುಳಿತಕ್ಕೊಳಗಾದ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕೊಡಿಸಲು ಹೋರಾಟ ನಡೆಸಿದ ಧೀಮಂತ ನಾಯಕ ಡಾ.ಬಾಬು ಜಗಜೀವನರಾಮ್ ಆಗಿದ್ದರೆ ಎಂದು ಪ್ರಗತಿಪರ ಚಿಂತಕ ಮಂಜುನಾಥ್ ಹೇಳಿದರು.
ಅವರು ಕೆ.ಆರ್.ಪೇಟೆ ಪಟ್ಟಣದ ಶತಮಾನದ ಶಾಲೆಯ ಆವರಣದಲ್ಲಿ ಪುರಸಭೆ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆಡಳಿತದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ದೇಶದ ಉಪ ಪ್ರಧಾನಿ ಬಾಬೂ ಜಗಜೀವನ್ ರಾಮ್ ಅವರ 118ನೇ ಜಯಂತಿ ಮಹೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಶೋಷಿತ ಸಮುದಾಯದ ಒಬ್ಬ ಸಾಮಾನ್ಯ ರೈತನ ಮಗನಾಗಿ ಹುಟ್ಟಿ ಶೋಷಿತ ಸಮುದಾಯಗಳು ಸೇರಿದಂತೆ ತುಳಿತಕ್ಕೊಳಗಾದ ಸಮಾಜದ ಜನರಿಗೆ ಸಾಮಾಜಿಕ ನ್ಯಾಯ ಕೊಡಿಸಲು ಹೋರಾಟ ನಡೆಸಿ ಅನ್ಯಾಯ, ಅಕ್ರಮ ಹಾಗೂ ಭ್ರಷ್ಟಾಚಾರದ ವಿರುದ್ದ ಹೋರಾಟ ನಡೆಸಿ ಅದ್ವಿತೀಯ ಸಾಧನೆ ಮಾಡಿ ದೇಶದ ರಾಜಕಾರಣದಲ್ಲಿ ತಮ್ಮ ಛಾಪು ಮೂಡಿಸಿರುವ ಬಾಬು ಜಗಜೀವನ್ ರಾಮ್ ಅವರು ಹಸಿರು ಕ್ರಾಂತಿಯ ಮೂಲಕ ದೇಶದ ಆಹಾರ ಭದ್ರತೆಗೆ ತಮ್ಮ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ ಎಂದು ಗುಣಗಾನ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುರಸಭೆ ಅಧ್ಯಕ್ಷೆ ಪಂಕಜಾಪ್ರಕಾಶ್ ಮಾತನಾಡಿ ಶೋಷಿತ ಸಮುದಾಯಗಳಿಗೆ ಬಾಬೂಜಿ ಮತ್ತು ಅಂಬೇಡ್ಕರ್ ಎರಡು ಕಣ್ಣುಗಳಿದ್ದಂತೆ, ದೇಶದ ಉಪ ಪ್ರಧಾನಿಯಾಗಿ, ರಕ್ಷಣೆ, ರೈಲ್ವೆ ಹಾಗೂ ಕಾರ್ಮಿಕ ಸಚಿವರಾಗಿ ಬಾಬೂ ಜಗಜೀವನ್ ರಾಮ್ ಅವರ ಕೊಡುಗೆ ಹಾಗೂ ಕಾರ್ಯದಕ್ಷತೆಯು ಅಪಾರವಾಗಿದೆ. ಯುವಜನರು ಹಾಗೂ ವಿದ್ಯಾರ್ಥಿಗಳು ಬಾಬುಜಿ ಅವರ ಜೀವನದ ಅದರ್ಶಗಳನ್ನು ಮೈಗೂಡಿಸಿಕೊಂಡು ಬದಲಾವಣೆಯ ದಿಕ್ಕಿನತ್ತ ಸಾಗಬೇಕು. ಸೇವಾ ಮನೋಭಾವನೆ ಹಾಗೂ ಪರೋಪಕಾರಿ ಗುಣಗಳು ಜೀವನದ ಉಸಿರಾಗಬೇಕು ಎಂದು ಕರೆ ನೀಡಿದರು.
ಸಿಂದಘಟ್ಟ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟರಾಮು ಬಾಬುಜಿ ಅವರ ಜೀವನ ಸಾಧನೆ ಕುರಿತು ಮಾತನಾಡಿದರು.
ಇದೇ ಸಂಧರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ವೇಳೆ ಪುರಸಭೆ ಉಪಾಧ್ಯಕ್ಷೆ ಸೌಭಾಗ್ಯ ಉಮೇಶ್, ಮುಖ್ಯಾಧಿಕಾರಿ ನಟರಾಜ್, ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಸುಷ್ಮಾ, ತಹಶೀಲ್ದಾರ್ ಲೋಕೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜೇಗೌಡ, ಸಮಾಜ ಸೇವಕ ಉದ್ಯಮಿ ಹೊಸಹೊಳಲು ನಂಜುಂಡಸ್ವಾಮಿ, ಕುಮಾರ್, ಮುಖಂಡರಾದ ಸುಧಾಕರ್, ಪುರಸಭಾ ಸದಸ್ಯ ಎಚ್.ಎಂ. ಪುಟ್ಟರಾಜು, ರಾಮದಾಸು, ಸೋಮಸುಂದರ್, ಬಸ್ತಿ ರಂಗಪ್ಪ, ಡಿ.ಪ್ರೇಮಕುಮಾರ್, ಕೆ.ಎಂ.ಶಿವಪ್ಪ, ಮಾಂಬಳ್ಳಿ ಜಯರಾಮ್, ಊಚನಹಳ್ಳಿ ನಟರಾಜ್, ಚೆಲುವರಾಜು, ಸುನಿಲ್ ಕುಮಾರ್, ಹಳೆಯೂರು ಯೋಗೇಶ್, ಪೊಲೀಸ್ ಇನ್ಸ್ ಪೆಕ್ಟರ್ ಸುಮಾರಾಣಿ, ಸಬ್ ಟ್ರೆಸರಿ ಅಧಿಕಾರಿ ವಿಜಯ್ ಕುಮಾರ್, ಕುಡಿಯುವ ನೀರು ವಿಭಾಗದ ಎಇಇ ಮಂಜುಳಾ, ವಲಯ ಅರಣ್ಯಅಧಿಕಾರಿ ಅನಿತಾ, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ದಿವಾಕರ್, ಬಿಸಿಎಂ ಆಧಿಕಾರಿ ವೆಂಕಟೇಶ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎ.ಬಿ. ಕುಮಾರ್, ಶಿವಣ್ಣ, ರಾಜಯ್ಯ, ಕೃಷ್ಣನಾಯಕ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ನೂರಾರು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
– ಶ್ರೀನಿವಾಸ್ ಆರ್.