ಕೆ.ಆರ್.ಪೇಟೆ-ಡಾ.ಪುನೀತ್‌ರಾಜ್‌ಕುಮಾರ್-ಹುಟ್ಟು ಹಬ್ಬದ-ಅಂಗವಾಗಿ-ಅನ್ನದಾನ-ರಕ್ತದಾನ-ಶಿಬಿರ

ಕೆ.ಆರ್.ಪೇಟೆ: ತಾಲ್ಲೂಕು ಅಪ್ಪು ಯುವ ಸಾಮ್ರಾಜ್ಯ ಸೇವಾ ಸಮಿತಿಯ ವತಿಯಿಂದ ಕರ್ನಾಟಕ ರತ್ನ ಡಾ.ಪುನೀತ್‌ರಾಜ್‌ಕುಮಾರ್ ಅವರ 50ನೇ ಹುಟ್ಟು ಹಬ್ಬದ ಅಂಗವಾಗಿ ಅನ್ನದಾನ, ರಕ್ತದಾನ ಶಿಬಿರವನ್ನು ಏರ್ಪಡಿಸುವ ಮೂಲಕ ಅಪ್ಪು ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.

ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಅವರು ಅನ್ನದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಚಲನಚಿತ್ರ ನಾಟಕ ನಟರಾಗಿ ನಟಿಸುವ ಜೊತೆಗೆ ಯಾರಿಗೂ ಕಾಣದಂತೆ ಸಾವಿರಾರು ಮಂದಿಗೆ ಆರ್ಥಿಕ ನೆರವು ನೀಡುವ ಮೂಲಕ ಜನ ಮಾನಸದಲ್ಲಿ ನೆಲೆಸಿದ್ದಾರೆ.

ಸದಭಿರುಚಿಯ ಚಿತ್ರಗಳಲ್ಲಿ ನಟಿಸುವ ಮೂಲಕ ತಂದೆ ಡಾ.ರಾಜ್‌ಕುಮಾರ್ ಅವರಂತೆ ಸಮಾಜ ಸುಧಾರಣೆಯ ಸಂದೇಶವನ್ನು ನೀಡಿದ್ದಾರೆ. ಇವರು ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾಭ್ಯಾಸ ಕೊಡಿಸುವ ಮೂಲಕ ಶ್ರೇಷ್ಠ ಕೆಲಸ ಮಾಡಿದ್ದಾರೆ. ಇಂತಹ ಮಹಾನ್ ಕಲಾವಿದನನ್ನು ಬೇಗ ಕಳೆದುಕೊಂಡು ಕನ್ನಡನಾಡು ಬಡವಾಗಿದೆ. ಇವರ ಆದರ್ಶ ಗುಣಗಳು ಎಲ್ಲರಿಗೂ ಮಾರ್ಗದರ್ಶಕವಾಗಲಿ ಎಂದು ತಿಳಿಸಿದರು. ಸುಮಾರು 75ಕ್ಕೂ ಹೆಚ್ಚು ಮಂದಿ ಯುವಕರು ರಕ್ತದಾನ ಮಾಡಿರುವುದು ಶ್ಲಾಘನೀಯ ಎಂದು ಹೇಳಿದರು.


ತಾಲ್ಲೂಕು ವಿತರಕರ ಸಂಘದ ಅಧ್ಯಕ್ಷ ಕೆ.ಎಸ್.ರಾಜೇಶ್ ಅವರು ರಕ್ತದಾನ ಶಿಬಿರಕ್ಕೆ ರಕ್ತದಾನ ಮಾಡುವ ಮೂಲಕ ಚಾಲನೆ ನೀಡಿದರು.

ಡಾ.ಪುನೀತ್‌ರಾಜ್‌ಕುಮಾರ್ ಹುಟ್ಟು ಹಬ್ಬ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್, ಗವೀಮಠದ ಪೀಠಾಧ್ಯಕ್ಷ ಶ್ರೀ ಚನ್ನವೀರ ಸ್ವಾಮೀಜಿ, ಶ್ರೀ ಭೂವರಹನಾಥ ಕ್ಷೇತ್ರದ ಟ್ರಸ್ಟಿ ಶ್ರೀನಿವಾಸ್ ರಾಘವನ್, ಸಮಾಜ ಸೇವಕ ವಿಜಯ್ ರಾಮೇಗೌಡ ಆಪ್ತ ಸಹಾಯಕ ಬಸವರಾಜ್, ತಾಲ್ಲೂಕು ಅಪ್ಪು ಯುವ ಸಾಮ್ರಾಜ್ಯ ಸೇವಾ ಸಮಿತಿಯ ಅಧ್ಯಕ್ಷ ಕೆ.ಎಲ್.ಮಹೇಶ್, ಕಾರ್ಯಾಧ್ಯಕ್ಷ ಹರೀಶ್, ಗೌರವಾಧ್ಯಕ್ಷ ಎಂ.ಸಿ.ಜಗದೀಶ್, ಉಪಾಧ್ಯಕ್ಷ ಹೋಟೆಲ್ ಯೋಗೇಶ್, ಕಾರ್ಯದರ್ಶಿ ಬೇಕರಿ ಹರೀಶ್, ಸತೀಶ್, ಚಾಟರ್ ಚೇತನ್, ರಾಘು, ಶ್ರೀನಿಧಿ ಅನಿಲ್, ಅಶೋಕ್, ಸ್ವೀಟ್ ರಾಮಣ್ಣ, ಗಾರೆ ರಾಮಣ್ಣ, ಚಂದ್ರು, ಮೊಬೈಲ್ ಪ್ರವೀಣ್, ಮೆಡಿಕಲ್ ಪುನೀತ್, ಹೊಸಹೊಳಲು ಕಾಂತರಾಜು, ಕಿರಣ್, ಧನುಷ್, ಪ್ರಸಾದ್, ಸಂತು, ಪ್ರುಥ್ವಿಕ್, ಪ್ರಿಂಟ್ ಪುನೀತ್ ಸೇರಿದಂತೆ ಸಾವಿರಾರು ಮಂದಿ ಪುನೀತ್ ಜನ್ಮ ದಿನೋತ್ಸವದಲ್ಲಿ ಭಾಗವಹಿಸಿದ್ದರು.

ಶ್ರೀನಿವಾಸ್‌ ಆರ್.

Leave a Reply

Your email address will not be published. Required fields are marked *

× How can I help you?