ಕೆ.ಆರ್.ಪೇಟೆ-ಯಂತ್ರಕ್ಕೆ- ಸಿಲುಕಿ-ಎಡಗೈ-ಕಳೆದುಕೊಂಡ-ರೈತನಿಗೆ-ಸ್ವಂತ-ಖರ್ಚಿನಿಂದ-ಚಿಕಿತ್ಸೆ- ಕೊಡಿಸಿ- ಶಸ್ತ್ರಚಿಕಿತ್ಸೆ- ಮಾಡಿಸಿ- ಮಾನವೀಯತೆ-ಮೆರೆದ- ವಿಧಾನಪರಿಷತ್ -ಸದಸ್ಯ- ಡಾ.ಸೂರಜ್- ರೇವಣ್ಣ

ಕೆ.ಆರ್.ಪೇಟೆ: ತಾಲ್ಲೂಕಿನ ಬೋಳಮಾರನಹಳ್ಳಿ ಗ್ರಾಮದಲ್ಲಿ ರೈತ ದೇವನಾಥ್ ಎಂಬುವವರು ಮಾ.29ರಂದು ಶನಿವಾರ ರಾತ್ರಿ ಜಾನುವಾರುಗಳಿಗೆ ಜೋಳದಕಡ್ಡಿ ಕಟಿಂಗ್ ಮಾಡುತ್ತಿರುವಾಗ ರೈತನ ಎಡಗೈ ಯಂತ್ರಕ್ಕೆ ಸಿಲುಕಿ ತುಂಡಾಗಿದ್ದು, ವಿಧಾನಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಸ್ವಂತ ಖರ್ಚಿನಿಂದ ಚಿಕಿತ್ಸೆ ಕೊಡಿಸಿ ಶಸ್ತ್ರಚಿಕಿತ್ಸೆ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ.

ಮೂರು ಹಾಲು ಕರೆಯುವ ಹಸುಗಳು, ಎರಡು ಬೇಸಾಯದ ಎತ್ತುಗಳನ್ನು ಹೊಂದಿರುವ ರೈತ ದೇವನಾಥ್ ಎಂದಿನಂತೆ ಜಾನುವಾರುಗಳಿಗೆ ಮೇವು ಕತ್ತಿರಿಸುವ ಯಂತ್ರದಲ್ಲಿ ಮೇವು ಜೋಳದ ಮೇವನ್ನು ಕಟಿಂಗ್ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಯಂತ್ರಕ್ಕೆ ಎಡಗೈ ಸಿಲುಕಿ ಸಂಪೂರ್ಣ ಕೈ ಬೆರಳುಗಳ ಸಮೇತ ಹಸ್ತವೇ ನಜ್ಜುಗುಜ್ಜಾಗಿ ಮುಂಗೈ ತುಂಡಾಗಿದೆ.

ಈ ವಿಷಯ ತಿಳಿದ ಕೂಡಲೇ ವಿಧಾನಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಅವರು ಗಾಯಾಳು ರೈತ ದೇವನಾಥ್ ಅವರನ್ನು ಹಾಸನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ತಮ್ಮ ಸ್ವಂತ ಖರ್ಚಿನಿಂದ ಚಿಕಿತ್ಸೆ ಕೊಡಿಸಿ ಶಸ್ತ್ರಚಿಕಿತ್ಸೆ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ.



ಪರಿಹಾರಕ್ಕೆ ಆಗ್ರಹ: ಸೂಕ್ತ ಪರಿಹಾರ ನೀಡಬೇಕು ಎಂದು ಬೋಳಮಾರನಹಳ್ಳಿ ಗ್ರಾಮಸ್ಥರು ತಾಲ್ಲೂಕು ಆಡಳಿತವನ್ನು ಒತ್ತಾಯ ಮಾಡಿದ್ದಾರೆ*
ಘಟನಾ ಸ್ಥಳಕ್ಕೆ ಕಿಕ್ಕೇರಿ ಹೋಬಳಿ ರಾಜಸ್ವ ನಿರೀಕ್ಷಕ ನರೇಂದ್ರ, ಗ್ರಾಮ ಆಡಳಿತ ಅಧಿಕಾರಿ ಪ್ರಸನ್ನ, ಆನೆಗೊಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ಎಂ.ಕಿರಣ್, ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯ‌ ಮಾಜಿ ಉಪಾಧ್ಯಕ್ಷ ಮಂಜುನಾಥ್, ಹಾಗೂ ಗ್ರಾಮದ ಮುಖಂಡರು ಬೇಟಿ ಮಾಡಿ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.

  • ಶ್ರೀನಿವಾಸ್‌ ಆರ್.‌

Leave a Reply

Your email address will not be published. Required fields are marked *

× How can I help you?